ದಾಂಡೇಲಿ : ನಗರ ಪೊಲೀಸ್ ಠಾಣೆಯ ಆವರಣದಲ್ಲಿ ನಗರ ವ್ಯಾಪ್ತಿಯಲ್ಲಿರುವ ಎಂ.ಓ.ಬಿಗಳ ಪೆರೇಡನ್ನು ಭಾನುವಾರ ಸಂಜೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಸ್ಪಿ ಶಿವಾನಂದ ಮದರಕಂಡಿ ಅವರು ಭವಿಷ್ಯದಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಹಾಗೂ ಠಾಣಾ ವ್ಯಾಪ್ತಿಯಿಂದ ಹೊರಗೆ ಹೋಗಬೇಕಾದರೆ ಠಾಣೆಯಲ್ಲಿ ಅನುಮತಿಯನ್ನು ಪಡೆದು ಹೋಗುವುದು ಹಾಗೂ ಯಾವುದೇ ಕಳ್ಳತನ ಅಥವಾ ಇನ್ನಿತರೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಬಾಗವಹಿಸದಂತೆ ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಸಿ.ಪಿ.ಐ ಭೀಮಣ್ಣ ಸೂರಿ ಹಾಗೂ ಪಿಎಸ್ಐಗಳಾದ ಐ.ಆರ್ ಗಡ್ಡೆಕರ್ ಹಾಗೂ ಯಲ್ಲಪ್ಪ ಎಸ್ ಉಪಸ್ಥಿತರಿದ್ದರು.