ದಾಂಡೇಲಿ : ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದಿಂದಾಗಿ ಹಾನಿಗೊಳಗಾದ ಉಳವರೆಯ ಸಂತ್ರಸ್ಥರಿಗೆ ಕರವೇ ಸ್ವಾಭಿಮಾನಿ ಬಣದ ನೇತೃತ್ವದಲ್ಲಿ ಬಟ್ಟೆ ಬರೆ, ಆಹಾರ ವಸ್ತುಗಳು ಸೇರಿದಂತೆ ಅಗತ್ಯ ನೆರವು ನೀಡಲಾಯ್ತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷೆ ಪರಮೇಶ್ವರಿ ಗೊಂಡ ಅವರು ಗುಡ್ಡ ಕುಸಿತದಿಂದ ಸಾವು ನೋವುಗಳು ಸಂಭವಿಸಿ ಹಲವು ಕುಟುಂಬಗಳು ಬೀದಿಗೆ ಬಂದಿವೆ. ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಕೈಲಾದ ನೆರವು ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹನಿ ಹನಿ ಕೂಡಿದರೆ ಹಳ್ಳ ಎಂಬಂತೆ ನಮ್ಮಿಂದ ಸಾಧ್ಯವಾದಷ್ಟು ನಮ್ಮ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರ ಸಹಕಾರದಲ್ಲಿ ಸಣ್ಣ ಪ್ರಮಾಣದ ನೆರವನ್ನು ಈ ಮೂಲಕ ನೀಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ದಾಂಡೇಲಿ ತಾಲೂಕಿನ ಕಾರ್ಯಾಧ್ಯಕ್ಷೆ ರಹಿಸಾ ಮುಲ್ಲಾ, ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷೆ ರೇಷ್ಮಾ ಪ್ರದೀಪ್ ಶೆಟ್ಟಿ, ಸಂಘಟನೆಯ ದಾಂಡೇಲಿ ತಾಲೂಕು ಘಟಕದ ಗೌರವಾಧ್ಯಕ್ಷೆ ಅನುರಾಧ, ಸಂಘಟನೆಯ ಪ್ರಮುಖರಾದ ಉಜ್ವಲಾ, ಶೈಲಾ ಹಾಗೂ ಸಂಘಟನೆಯ ಇನ್ನುಳಿದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.