Slide
Slide
Slide
previous arrow
next arrow

ಪಿಎಸ್ಐ ಆಗಿ ಪದೋನ್ನತಿಗೊಂಡ ಮಹೇಶ ಮೇಲ್ಗೇರಿ: ಗೆಳೆಯರ ಬಳಗದಿಂದ ಸನ್ಮಾನ

300x250 AD

ದಾಂಡೇಲಿ: ದಾಂಡೇಲಿಯ ಹಸನ್ಮುಖಿ ಹಾಗೂ ಕ್ರಿಯಾಶೀಲ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿ ಮಹೇಶ್ ಮೇಲ್ಗೇರಿಯವರು ಪೋಲಿಸ್ ಉಪನಿರೀಕ್ಷಕರಾಗಿ ಪದೋನ್ನತಿಗೊಂಡ ಹಿನ್ನೆಲೆಯಲ್ಲಿ ನಗರದ ಗೆಳೆಯರ ಬಳಗದಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಗೆಳೆಯರ ಬಳಗದ ಫಿರೋಜ್ ಖಾನ್ ಬಾಲೆಖಾನ್, ಬಶೀರ್ ಗಿರಿಯಾಳ ಮತ್ತು ಟಿ.ಎಸ್. ಸೋರಗಾವಿ ಮಹೇಶ ಮೇಲ್ಗೇರಿಯವರನ್ನು ಸನ್ಮಾನಿಸಿದರು.

ಸನ್ಮಾನಕ್ಕೆ ಕೃತಜ್ಞತೆಯನ್ನು ಸಲ್ಲಿಸಿದ ಮಹೇಶ ಮೇಲ್ಗೇರಿಯವರು ನಿಮ್ಮ ಈ ಪ್ರೀತಿಯ ಸನ್ಮಾನ ನನಗೆ ಮತ್ತಷ್ಟು ಉತ್ಸಾಹ ಹಾಗೂ ಶಕ್ತಿಯನ್ನು ತಂದುಕೊಟ್ಟಿದೆ ಎಂದರು.

300x250 AD

ಈ ಸಂದರ್ಭದಲ್ಲಿ ಫಿರೋಜ್ ಖಾನ್ ಬಾಲೆಖಾನ್, ಬಶೀರ್ ಗಿರಿಯಾಳ ಅವರು ಮಹೇಶ ಮೇಲ್ಗೇರಿ ವ್ಯಕ್ತಿತ್ವ ಮತ್ತು ಕೆಲಸದಲ್ಲಿ ಅವರ ಬದ್ಧತೆಯನ್ನು ಶ್ಲಾಘಿಸಿ, ಶುಭವನ್ನು ಕೋರಿದರು.

Share This
300x250 AD
300x250 AD
300x250 AD
Back to top