Slide
Slide
Slide
previous arrow
next arrow

ಆ.11ಕ್ಕೆ ಉಚಿತ ಹೃದಯರೋಗ ತಪಾಸಣಾ ಶಿಬಿರ

300x250 AD

ದಾಂಡೇಲಿ : ಹುಬ್ಬಳ್ಳಿಯ ವಿಹಾನ್ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಡಾ.ಭಟ್ ಆಸ್ಪತ್ರೆ ದಾಂಡೇಲಿ ಮತ್ತು ಲಯನ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಡಿ ನಗರದ ಕರ್ನಾಟಕ ಸಂಘದ ಪಂಚಗಾನ ಸಭಾ ಭವನದಲ್ಲಿ ಆ.11ರಂದು ಬೆಳಿಗ್ಗೆ 9:00 ಯಿಂದ ಸಂಜೆ 4 ಗಂಟೆಯವರೆಗೆ ಉಚಿತ ಹೃದಯ ರೋಗ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ವಿಹಾನ್ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮಾರ್ಕೆಟಿಂಗ್ ವ್ಯವಸ್ಥಾಪಕರಾದ ಕೇಶವ ರಂಗಾಪುರೆ ಹೇಳಿದರು.

ಅವರು ಮಂಗಳವಾರ ಡಾ.ಭಟ್ ಆಸ್ಪತ್ರೆಯಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿ ಮಾತನಾಡುತ್ತಿದ್ದರು. ಈ ಶಿಬಿರವು ಉಚಿತವಾಗಿದ್ದು, ಶಿಬಿರದಲ್ಲಿ ಬಿಪಿ, ಇಸಿಜಿ, 2ಡಿ ಇಕೋ ಮತ್ತು ವೈದ್ಯರೊಂದಿಗೆ ಸಮಾಲೋಚನೆ ನಡೆಯಲಿದೆ. ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಡಾ.ಭಟ್ ಆಸ್ಪತ್ರೆಯ ಪ್ರವರ್ತಕರು ಹಾಗೂ ನಗರದ ಖ್ಯಾತ ಹೃದಯ ರೋಗ ತಜ್ಞರಾದ ಡಾ.ಜಿ.ವಿ.ಭಟ್ ಅವರು ಇಂದು ಹೃದಯ ರೋಗ ಸಮಸ್ಯೆ ಬಹುತೇಕ ಜನರನ್ನು ಕಾಡುತ್ತಿದೆ. ಹೃದಯ ರೋಗದ ಬಗ್ಗೆ ನಿರ್ಲಕ್ಷ್ಯ ಬೇಡ. ಎದೆ ನೋವು ಕಾಣಿಸಿಕೊಂಡ ಸಂದರ್ಭದಲ್ಲಿ ಹಾಗೂ ಹೃದಯ ರೋಗಕ್ಕೆ ಸಂಬಂಧಪಟ್ಟಂತೆ ಗುಣಲಕ್ಷಣಗಳು ಕಂಡು ಬಂದ ಸಂದರ್ಭದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿಯಾಗಬೇಕು. ನಮ್ಮ ನಮ್ಮ ಆರೋಗ್ಯ ನಮ್ಮ ನಮ್ಮ ಕೈಯಲ್ಲಿದ್ದು, ನಮ್ಮ ಆರೋಗ್ಯದ ಸಂರಕ್ಷಣೆ ನಮ್ಮದೇ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿ ಹೃದಯ ರೋಗದ ಸಮಸ್ಯೆಗಳ ಕುರಿತಂತೆ ವಿವರಣೆಯನ್ನು ನೀಡಿದರು.

300x250 AD

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ಬಿನ ಹಿರಿಯರಾದ ಯು.ಎಸ್. ಪಾಟೀಲ್, ಲಯನ್ಸ್ ಕ್ಲಬ್ಬಿನ ವಿಭಾಗಿಯ ಅಧ್ಯಕ್ಷರಾದ ಸೈಯದ್ ಇಸ್ಮಾಯಿಲ್ ತಂಗಳ್, ಲಯನ್ಸ್ ಕ್ಲಬ್ಬಿನ ಕಾರ್ಯದರ್ಶಿ, ಡಾ.ನಾಸೀರ್ ಖಾನ್ ಜಂಗೂಬಾಯಿ, ವಿಹಾನ್ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಾದ ಡಾ. ಬಸವರಾಜ ಬಾಳಿ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top