“ಸದ್ಗತಿಃ ಸತ್ಕೃತಿಃ ಸತ್ತಾ ಸದ್ಭೂತಿಃ ಸತ್ಪರಾಯಣಃ | ಶೂರಸೇನೋ ಯದುಶ್ರೇಷ್ಠಃ ಸನ್ನಿವಾಸಃ ಸುಯಾಮುನಃ”
ಭಾವಾರ್ಥ:-
‘ಬ್ರಹ್ಮವಿದೆ’ ಎಂದು ಅರಿತುಕೊಂಡವನಾದರೆ, ಬಲ್ಲವರು ಈತನನ್ನು ಸಂತನೆನ್ನುವರು.ಇದಕ್ಕೆ ಶ್ರುತಿಯು ಆಧಾರ(ತೈ.೨-೬). ಅವರಿಗೆ ಈತನಿಗೆ ಪ್ರಾಪ್ಯನು. ಆದ್ದರಿಂದ ‘ಸದ್ಗತಿಯು’ ಅಥವಾ ಸತ್ಪುರುಷರ ಗತಿ. ಅಥವಾ ಬಹಳ ಉತ್ಕೃಷ್ಟವಾದ ಬುದ್ಧಿಯು ಈತನಿಗೆ ಇದೆ ಆದ್ದರಿಂದ ‘ಸದ್ಗತಿಯು’. ಸತ್ಪುರುಷರ ಕೃತಿಯು ಎಂದರೆ ಕಾರ್ಯವು ಜಗತ್ತನ್ನು ಕಾಪಾಡುವದೇ ಮುಂತಾದ ರೂಪ, ಕೃತಿಯು ಈತನದು. ಆದ್ದರಿಂದ ಈತನು ‘ಸತ್ಕೃತಿಯು. ‘ಸತ್ತಾ’ ಅಂದರೆ ಯಾವುದೇ ರೀತಿಯ ವಿಭಾಗಗಳಿಲ್ಲದೆ ಒಂದೇ ಅಖಂಡವಾದ ವಸ್ತುವಾಗಿರುವವನು. ‘ಸದ್ಭುತಿಯು’ ಅಂದರೆ ಯಾವುದೇ ರೀತೀಯ ಬಾಧೆಗಳಿಲ್ಲದವನೂ ಸದಾಪ್ರಕಾಶ ಮಾನನಾಗಿರುವವನೂ ಮತ್ತು ನಿತ್ಯನೂ ಆಗಿರುವವನು.ಸತ್ಯವನ್ನರಸುವ ತತ್ವ ಜ್ಞಾನಿಗಳಿಗೆ ಉತ್ಕೃಷ್ಟವಾದ ಗತಿಯಾಗಿರುವವನು.ಆದ್ದರಿಂದ ‘ಸತ್ಪರಾಯಣನು’.ಶೂರಸೇನನು ಯಾಕೆಂದರೆ ಶೂರಿಂದ ಕೂಡಿದ ಸೇನೆ ಇರುವವನು. ‘ಯದುಶ್ರೇಷ್ಠನು’ ಅಂದರೆ ಯದುಕುಲದಲ್ಲಿ ಶ್ರೇಷ್ಠನವನಾದ ಶ್ರೀಕೃಷ್ಣನು. ಸತ್ಪುರುಷರಾದ ಜ್ಞಾನಿಗಳಿಗೆ ಆಶ್ರಯನಾದವನು.ಆದ್ದರಿಂದ ‘ಸನ್ನಿವಾಸನು’ ‘ಸು’ ಎಂದರೆ ಒಳ್ಳೆಯ ವರಾದ, ಯಾಮನ ಎಂದರೆ ಯಮುನೆಯ ಸಂಬಂಧಿಗಳಾದ ದೇವಕಿ,ವಸುದೇವ,ನಂದ,ಯಶೋಧೆ ಬಲರಾಮ, ಸುಭದ್ರೆ ಮೊದಲಾದವರು ಈತನಿಗೆ ಪರಿವಾರ. ಆದ್ದರಿಂದ ‘ಸುಯಾಮುನನು’
ಶ್ಲೋಕದ ವೈಶಿಷ್ಟ್ಯತೆ: ಮೂಲ(ಮೂಲಾ) ನಕ್ಷತ್ರದ ೩ (ಮೂರು)ನೇ ಪಾದದಲ್ಲಿ ಜನಿಸಿದವರು ಪ್ರತಿನಿತ್ಯ ೧೧ ಬಾರಿ ಹೇಳಬೇಕಾದ ಸ್ತೋತ್ರ.ಆದರೆ ಯಾವುದೇ ನಕ್ಷತ್ರದಲ್ಲಿ ಜನಿಸಿದ್ದರೂ ವೃದ್ಧಾರೆಲ್ಲರೂ ಪ್ರತಿ ದಿನ ಹೇಳಿಕೊಳ್ಳಬೇಕಾದ ಸ್ತೋತ್ರ. ವಯಸ್ಸಾದ ಮೇಲೆ ಇನ್ನೊಬ್ಬರಿಗೆ ಹೊರೆಯಾಗದಂತೆ ಬದುಕಬೇಕು.ಆದರೆ ಅದು ಸಾಧ್ಯವಾಗ್ತಾ ಇಲ್ಲ. ಜೀವನದ ಕಡೆಗಾಲದಲ್ಲಿ ಯಾರೂ ಸಹಾಯಕ್ಕೆ ಬರ್ತಾ ಇಲ್ಲ.ಅದಕ್ಕಾಗಿ “ಹೇ ಪರಮಾತ್ಮಾ ನನ್ನನ್ನು ಪರಾಧೀನಕ್ಕೆ ಹಾಕಬೇಡ, ಜೀವನದ ಅಂತಿಮ ಕ್ಷಣದವರೆಗೆ ಆರೋಗ್ಯಕೊಡು, ಜೀವನದ ಅಂತಿಮ ಕ್ಷಣಗಳವರೆಗೂ ದೇವರ ಸ್ಮರಣೆ ಬರಲಿ,ಸದ್ಗತಿ ಬರಲಿ” ಎಂದು ಪ್ರಾರ್ಥಿಸಲು ಹೇಳಬೇಕಾದ ಸ್ತೋತ್ರವವು ಮೇಲಿನದು ಆಗಿರುತ್ತದೆ. ವಯಾಸ್ಸಾದವರ ಪರವಾಗಿ ಅವರಿಗೆ ಸದ್ಗತಿ ದೊರಕಿಸು ಎಂದು ಅಂತಹವರ ಮಕ್ಕಳೂ ಈ ಸ್ತೋತ್ರವನ್ನು ಹೇಳಬಹುದು.
(ಸಂ:-ಡಾ. ಚಂದ್ರಶೇಖರ.ಎಲ್.ಭಟ್. ಬಳ್ಳಾರಿ)