ಕಾರವಾರ: ಜಿಲ್ಲೆಯಲ್ಲಿ ಪ್ರಸಕ್ತ ಜುಲೈ ಮಾಹೆಯಲ್ಲಿ ವಾಡಿಕೆ ಮಳೆಗಿಂತ ಶೇ. 81 ರಷ್ಟು ಅತ್ಯಧಿಕ ಮಳೆಯಾಗಿದ್ದು, ಜಿಲ್ಲೆಯಲ್ಲಿ ಜೂನ್ ನಿಂದ ಇದುವರೆಗೆ ಸುರಿದ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದೆ.
ಜುಲೈ ಮಾಹೆಯಲ್ಲಿ ವಾಡಿಕೆ ಮಳೆಯ ಪ್ರಮಾಣ 993. 4 ಮಿಮಿ ಆಗಿದ್ದು, ಈ ಬಾರಿ 1798.2 ಮಿಮೀ ಮಳೆ ಬೀಳುವ ಮೂಲಕ ಶೇ.81 ರಷ್ಟು ಅತ್ಯಧಿಕ ಮಳೆ ದಾಖಲಾಗಿದ್ದು, ಜನವರಿ 2024 ರಿಂದ ಇಲ್ಲಿಯವರೆಗೆ 1882.3 ಮಿಮಿ ವಾಡಿಕೆ ಮಳೆ ಇದ್ದು, 2745.7 ಮಿಮೀ ಮಳೆ ಸುರಿಯುವ ಮೂಲಕ ಶೇ.46 ರಷ್ಟು ಅಧಿಕ ಮಳೆಯಾಗಿದೆ. ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಇದುವರೆಗೆ 13 ಜೀವ ಹಾನಿ ಪ್ರಕರಣಗಳಿಗೆ 65 ಲಕ್ಷ ರೂ ಪರಿಹಾರ ನೀಡಲಾಗಿದ್ದು, ತೀವ್ರ ಮತ್ತು ಸಂಪೂರ್ಣ ಹಾನಿಯಾದ 211 ಮನೆಗಳಲ್ಲಿ 148 ಮನೆಗಳಿಗೆ 1,52,40,000 ರೂ ಗಳ ಪರಿಹಾರ ಹಾಗೂ ಭಾಗಶಃ ಹಾನಿಯಾದ 724 ಮನೆಗಳಲ್ಲಿ 449 ಮನೆಗಳಿಗೆ 24,44,000 ರೂ ಗಳ ನೆರವು ನೀಡಲಾಗಿದ್ದು, 22 ಜಾನುವಾರು ಜೀವಹಾನಿ ಪ್ರಕರಣಗಳಿಗೆ 5,22,000 ರು ಪರಿಹಾರ ವಿತರಿಸಲಾಗಿದ್ದು, 383 ಹೆಕ್ಟೇರ್ ಕೃಷಿ ಭೂಮಿ ಮತ್ತು 21.51 ಹೆಕ್ಟೇರ್ ತೋಟಗಾರಿಕಾ ಪ್ರದೇಶಕ್ಕೆ ಹಾನಿ ಸಂಭವಿಸಿದ್ದು, ನಷ್ಠದ ಅಂದಾಜು ವರದಿ ಸಿದ್ದಪಡಿಸಲಾಗುತ್ತಿದೆ.
ಮನೆ ಹಾನಿ ಪ್ರಕರಣಗಳಲ್ಲಿ ಅಂಕೋಲ ತಾಲೂಕಿನಲ್ಲಿ 19 ಮನೆಗಳು ಪೂರ್ಣ ಹಾನಿ ಮತ್ತು 23 ಮನೆಗಳಿಗೆ ಭಾಗಶ: ಹಾನಿ, ಭಟ್ಕಳ ತಾಲೂಕಿನಲ್ಲಿ 50 ಮನೆಗಳು ಪೂರ್ಣ ಹಾನಿ ಮತ್ತು 101 ಮನೆಗಳಿಗೆ ಭಾಗಶ: ಹಾನಿ, ದಾಂಡೇಲಿ ತಾಲೂಕಿನಲ್ಲಿ 4 ಮನೆಗಳು ಪೂರ್ಣ ಹಾನಿ ಮತ್ತು 10 ಮನೆಗಳಿಗೆ ಭಾಗಶ: ಹಾನಿ, ಹಳಿಯಾಳ ತಾಲೂಕಿನಲ್ಲಿ 5 ಮನೆಗಳು ಪೂರ್ಣ ಹಾನಿ ಮತ್ತು 41 ಮನೆಗಳಿಗೆ ಭಾಗಶ: ಹಾನಿ, ಹೊನ್ನಾವರ ತಾಲೂಕಿನಲ್ಲಿ 25 ಮನೆಗಳು ಪೂರ್ಣ ಹಾನಿ ಮತ್ತು 65 ಮನೆಗಳಿಗೆ ಭಾಗಶ: ಹಾನಿ, ಕಾರವಾರ ತಾಲೂಕಿನಲ್ಲಿ 18 ಮನೆಗಳು ಪೂರ್ಣ ಹಾನಿ ಮತ್ತು 30 ಮನೆಗಳಿಗೆ ಭಾಗಶ: ಹಾನಿ, ಕುಮಟಾ ತಾಲೂಕಿನಲ್ಲಿ 32 ಮನೆಗಳು ಪೂರ್ಣ ಹಾನಿ ಮತ್ತು 192 ಮನೆಗಳಿಗೆ ಭಾಗಶ: ಹಾನಿ, ಮುಂಡಗೋಡು ತಾಲೂಕಿನಲ್ಲಿ 20 ಮನೆಗಳು ಪೂರ್ಣ ಹಾನಿ ಮತ್ತು 63 ಮನೆಗಳಿಗೆ ಭಾಗಶ: ಹಾನಿ, ಸಿದ್ದಾಪುರ ತಾಲೂಕಿನಲ್ಲಿ 15 ಮನೆಗಳು ಪೂರ್ಣ ಹಾನಿ ಮತ್ತು 83 ಮನೆಗಳಿಗೆ ಭಾಗಶ: ಹಾನಿ, ಶಿರಸಿ ತಾಲೂಕಿನಲ್ಲಿ 5 ಮನೆಗಳು ಪೂರ್ಣ ಹಾನಿ ಮತ್ತು 37 ಮನೆಗಳಿಗೆ ಭಾಗಶ: ಹಾನಿ, ಜೋಯಿಡಾ ತಾಲೂಕಿನಲ್ಲಿ 4 ಮನೆಗಳು ಪೂರ್ಣ ಹಾನಿ ಮತ್ತು 23 ಮನೆಗಳಿಗೆ ಭಾಗಶ: ಹಾನಿ, ಹಾಗೂ ಯಲ್ಲಾಪುರ ತಾಲೂಕಿನಲ್ಲಿ 14 ಮನೆಗಳು ಪೂರ್ಣ ಹಾನಿ ಮತ್ತು 46 ಮನೆಗಳಿಗೆ ಭಾಗಶ: ಹಾನಿ ಸಂಭವಿಸಿದೆ.
ಇದೇ ಅವಧಿಯಲ್ಲಿ ಮೂಲ ಸೌಕರ್ಯಗಳಿಗೂ ಹೆಚ್ಚಿನ ಹಾನಿ ಸಂಭವಿಸಿದ್ದು, 291 ಅಂಗನವಾಡಿಗಳಿಗೆ 643.50 ಲಕ್ಷ ರೂ , 556 ಶಾಲೆಗಳಿಗೆ 1529.60 ಲಕ್ಷ ರೂ, 9 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 21 ಲಕ್ಷ ರೂ, 114 ಸೇತುವೆ ಮತ್ತು ಮೋರಿಗಳಿಗೆ 3138.70 ಲಕ್ಷ ರೂ, 398 ಕಿಮೀ ರಸ್ತೆ ಗೆ 2778.15 ಲಕ್ಷ ರೂ, 191 ಕಿ.ಮೀ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗೆ 11642 ಲಕ್ಷ ರೂ ಸೇರಿದಂತೆ ಒಟ್ಟು 19752.95 ಲಕ್ಷ ರೂ ಗಳ ಹಾನಿಯ ಪ್ರಾಥಮಿಕ ವರದಿ ಸಲ್ಲಿಕೆಯಾಗಿದೆ.
ಜಿಲ್ಲೆಯಲ್ಲಿ ತೀವ್ರ ಮಳೆಯಿಂದಾಗಿ 4667 ವಿದ್ಯುತ್ ಕಂಬಗಳು ಧರೆಗುಳಿದಿದ್ದು, 374 ಟ್ರಾನ್ಸ್ ಫರ್ಮರ್ ಗಳಿಗೆ ಹಾನಿ ಮತ್ತು 204.83 ಕಿ,ಮೀ ದೂರದ ವಿದ್ಯುತ್ ತಂತಿಗಳಿಗೆ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ.