Slide
Slide
Slide
previous arrow
next arrow

ಮಂಗನ ಕಾಟಕ್ಕೆ ಬೇಸತ್ತ ರೈತರಿಂದ ಸೂಕ್ತ ಕ್ರಮಕ್ಕೆ ಆಗ್ರಹ

300x250 AD

ಸಿದ್ದಾಪುರ :  ಮಂಗಗಳು ಅಡಿಕೆ ತೋಟ, ಭತ್ತದ ಗದ್ದೆ ಹಾಗೂ ಇನ್ನಿತರ ಬೆಳೆಗಳನ್ನು ನಿತ್ಯ ನಿರಂತರ ತಿಂದು ಹಾಳು ಮಾಡುತ್ತಿದ್ದು ಅಪಾರ ಪ್ರಮಾಣದ ಹಾನಿಯನ್ನುಂಟು ಮಾಡುತ್ತಿವೆ. ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕಣ್ಣೆದುರಿಗೇ ನಾಶಪಡಿಸುತ್ತಿವೆ. ಇದರಿಂದ ರೈತರ ಆದಾಯಕ್ಕೆ ಕುತ್ತು ಬರುತ್ತಿದ್ದು, ರೈತಾಪಿ ಕೆಲಸಗಳನ್ನು ನಿಲ್ಲಿಸುವಂತಾಗಿದೆ. ಇದಲ್ಲದೇ ಮಂಗಗಳಿಂದ ಆದ ನಷ್ಟಕ್ಕೆ ಯಾವುದೇ ಪರಿಹಾರ ಸಿಗುತ್ತಿಲ್ಲ, ಇದರ ಜೊತೆ ಇತರ ಕಾಡುಪ್ರಾಣಿಗಳ ಹಾವಳಿ ಮಿತಿ ಮೀರಿದ್ದು ಈ ಕುರಿತು ಪರಿಹಾರ ನೀಡುತ್ತಿದ್ದರೂ ಸರಿಯಾಗಿ ದಾಖಲೆಗಳ ನಿರ್ವಹಣೆಗೂ ಸಾಕಾಗುತ್ತಿಲ್ಲ, ಆದ ಕಾರಣ ದಯಮಾಡಿ ಮಂಗಗಳನ್ನು ಕೂಡಲೇ ನಿಯಂತ್ರಿಸಲು ಶೀಘ್ರ & ಸೂಕ್ತ ಹಾಗೂ ನಿರ್ವಹಣಾ ಕಾನೂನುಗಳನ್ನು ಜಾರಿಗೊಳಿಸಿಕೊಟ್ಟು ರೈತರನ್ನು ಹಾಗೂ ರೈತರು ಬೆಳೆದ ಬೆಳೆಗಳನ್ನು ಉಳಿಸಿ ಕೊಡಬೇಕೆಂದು ಶ್ರೀರಾಮೇಶ್ವರ ಕೃಷಿ ಪರಿವಾರ ಹೋರಾಟ  ಸಮಿತಿಯವರು ವಾಜುಗೋಡು ಗ್ರಾಮ ಪಂಚಾಯತಿಗೆ ಮನವಿ ನೀಡಿದರು.

 ಮಂಗಗಳ ಹಾವಳಿ ಕುರಿತು ತಮಗೂ ತಿಳಿದಿದ್ದು, ಶೀಘ್ರವೇ ಈ ಕುರಿತು ಗ್ರಾಮ ಪಂಚಾಯತದಿಂದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.ಆ.8ರ ಬೆಳಿಗ್ಗೆ ಸೂಕ್ತ ಕ್ರಮದ ಕುರಿತು ಸಮಿತಿಗೆ ಹಾಗೂ ಸಮಸ್ತ ರೈತ ಬಾಂಧವರಿಗೆ ಉತ್ತರ ನೀಡಬೇಕು ಒಂದು ವೇಳೆ ಸರಿಯಾದ ಕ್ರಮ ಜಾರಿಯಾಗದಿದ್ದಲ್ಲಿ ಆ.9 ರ ನಂತರ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ನಮ್ಮ ಸಮಿತಿಗೆ ಹಾಗೂ ಸರ್ವ ಸದಸ್ಯ ರೈತ ಬಾಂಧವರಿಗೆ ಪ್ರಥಮ ಸರ್ಕಾರವಾದ ಗ್ರಾಮ ಪಂಚಾಯತನಿಂದ ‘ವಿಶೇಷ ಗ್ರಾಮ’ ಸಭೆಯನ್ನು  ಕರೆದು, ಅಂದಿನ ಈ ಸಭೆಗೆ ಸಂಬಧಪಟ್ಟ ಇಲಾಖಾ ಮೇಲಾಧಿಕಾರಿಗಳನ್ನು ಆಹ್ವಾನಿಸಿ, ಈ ಕುರಿತು ನಮ್ಮೊಟ್ಟಿಗೆ ಚರ್ಚಿಸಿ ಸೂಕ್ತ ಕ್ರಮವನ್ನು ಸ್ಥಳದಲ್ಲಿಯೇ ನಿಗದಿಗೊಳಿಸಿ ಅನುಮೋದಿಸಿಕೊಡಬೇಕೆಂದು ವಿನಂತಿಸಿದ್ದಾರೆ.

300x250 AD

ಈ ಸಂದರ್ಭದಲ್ಲಿ ಪ್ರಮುಖರಾದ ಎಂ.ಎನ್. ಹೆಗಡೆ ತಲೆಕೇರಿ, ಕೃಷ್ಣಮೂರ್ತಿ ಐಸೂರ್, ರಾಮಚಂದ್ರ ನಾಯ್ಕ್, ಅಣ್ಣಪ್ಪ ಹೆಗಡೆ, ಜಯಂತ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top