Slide
Slide
Slide
previous arrow
next arrow

ರಚನಾತ್ಮಕ ಚರ್ಚೆಗೆ ವಿರೋಧ ಪಕ್ಷಗಳು ಸಹಕಾರ ನೀಡಲಿ: ದೀಪಕ್ ದೊಡ್ಡೂರು

300x250 AD

ಶಿರಸಿ: ವಾಲ್ಮೀಕಿ ನಿಗಮದಲ್ಲಿ ಆಗಿರಬಹುದಾದ ಆರ್ಥಿಕ ಅವ್ಯವಹಾರಗಳ ಕುರಿತು, ಉನ್ನತ ಮಟ್ಟದ ತನಿಖೆಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಆ ಮೂಲಕ ಸರ್ಕಾರವು ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ನೀಡಿರುವ ಆದ್ಯತೆಯನ್ನು ಎತ್ತಿ ಹಿಡಿದ  ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆಂದು ಕಾಂಗ್ರೆಸ್ ಮುಖಂಡ ದೀಪಕ್ ಹೆಗಡೆ ದೊಡ್ಡೂರು ಹೇಳಿದ್ದಾರೆ.

ವಿಧಾನಸಭಾ ಅಧಿವೇಶನದಲ್ಲಿ ವಿಪಕ್ಷಗಳು ಸಮಯಹರಣ ಮಾಡುತ್ತಿರುವ ಕುರಿತು ಪ್ರತಿಕ್ರಯಿಸಿದ ಅವರು, ಇಂಥ ಮಹತ್ವದ ನಿರ್ಧಾರವನ್ನು ಸ್ವಾಗತಿಸುವ ಬದಲು ವಿರೋಧಪಕ್ಷಗಳು ವಿನಾಕಾರಣ ರಾಜಕಾರಣ ಮಾಡುತ್ತಿವೆ. ರಾಜ್ಯ ಎದುರಿಸುತ್ತಿರುವ ಭೀಕರ ನೆರೆಯಂತ ಗಂಭೀರ ವಿಷಯಗಳ ಕುರಿತು ಚರ್ಚೆ ಮಾಡುವ ಬದಲು ವಿನಾಕಾರಣ ಸದನದ ಸಮಯವನ್ನು ಹಾಳು ಮಾಡುತ್ತಿದ್ದಾರೆ ಎಂದು ಅಸಮಾಧಾನ‌ ವ್ಯಕ್ತಪಡಿಸಿದ್ದಾರೆ.

ಹಿರಿಯ ನಾಯಕ ಹಾಗೂ ಶಾಸಕ ಆರ್.ವಿ. ದೇಶಪಾಂಡೆ, ಮಾತನಾಡುವಾಗ ಅವರನ್ನು ವ್ಯಂಗ್ಯಾರ್ಥದಲ್ಲಿ ಹೀಯಾಳಿಸುವಷ್ಟು ವಿರೋಧ ಪಕ್ಷಗಳು ನೈತಿಕ ದಿವಾಳಿತನ ತೋರಿಸುತ್ತಿವೆ. ಶಾಸಕರಾದ ಭೀಮಣ್ಣ ನಾಯ್ಕ ಮಾತನಾಡುವಾಗಲೂ ಸಹ ಇಂತಹದೇ ಅವಮಾನ ಮಾಡಿದ್ದಾರೆ.
ಶಾಸಕರಾದ ಶಿವಲಿಂಗೇಗೌಡ, ಪ್ರದೀಪ್ ಈಶ್ವರ್ ಮುಂತಾದವರು ಮಾತನಾಡುವಾಗ ಅತಿ ಕೆಳಮಟ್ಟದ ಮಾತುಗಳೊಂದಿಗೆ ಅವರನ್ನು ಹೀಯಾಳಿಸುವ ಕಾರ್ಯ ಮಾಡುತ್ತಿದ್ದಾರೆ. ಇವೆಲ್ಲ ತೀರ ಖಂಡನಾರ್ಹವಾದ ನಡವಳಿಕೆಯಾಗಿದೆ. ಜೊತೆಗೆ ನಮ್ಮ ನಾಡಿನ ಸದನದ ಗೌರವಕ್ಕೆ ಇವರ ನಡುವಳಿಕೆ  ಚ್ಯುತಿ ತರುತ್ತಿವೆ.

300x250 AD

ಹೀಗಾಗಿ, ವಿರೋಧಪಕ್ಷಗಳು ಇಂತಹ ಕ್ಷುಲ್ಲಕ ರಾಜಕಾರಣ ತಕ್ಷಣ ಕೈಬಿಡಬೇಕು.  ಈ ಅಧಿವೇಶನದ ಉಳಿದ ಸಮಯದಲ್ಲಾದರೂ ರಚನಾತ್ಮಕ ಚರ್ಚೆಗೆ ಹಾದಿ ಮಾಡಿಕೊಡುವ ಉತ್ತಮ ಸಂಸದೀಯ ವರ್ತನೆಯನ್ನು ತೋರಿಸಬೇಕೆಂದು ದೀಪಕ್ ದೊಡ್ಡೂರು ಆಗ್ರಹಿಸಿದ್ದಾರೆ.

Share This
300x250 AD
300x250 AD
300x250 AD
Back to top