Slide
Slide
Slide
previous arrow
next arrow

ವಿಷ್ಣು ಸಹಸ್ರನಾಮದ ವಿಶಿಷ್ಟ ಸ್ತೋತ್ರಗಳು

300x250 AD

“ಯಜ್ಞ ಇಜ್ಯೋ ಮಹೇಜ್ಯಶ್ಚ ಕೃತುಃ ಸತ್ರಂ ಸತಾಂ ಗತಿಃ| ಸರ್ವದರ್ಶೀ ವಿಮುಕ್ತಾತ್ಮಾ ಸರ್ವಜ್ಞೋ ಜ್ಞಾನ ಮುತ್ತಮಮ್”||        

ಭಾವಾರ್ಥ:
ಎಲ್ಲಾ ಯಜ್ಞರೂಪಗಳಿಂದಿರುವ ಕಾರಣದಿಂದ ‘ಯಜ್ಞನು’. ಯಜ್ಞವೇ ಇವನ ಸ್ವರೂಪ. ದೇವತೆಗಳಿಗೆ ಮತ್ತು ಮಾನವರಿಗೆ ಶುಭವಾಗಲೆಂದು ಯಜ್ಞ ಸ್ವರೂಪ ದಿಂದ ಇರುತ್ತಾನೆ. ಯಜ್ಞದಿಂದ ಪೂಜಿಸಲ್ಪಡುವಾತನನೂ ಈತನೇ. ಎಲ್ಲಾ ದೇವತಾ ಸ್ವರೂಪನೂ ಇವನೇ ಆಗಿರುವುದರಿಂದ ಸಮಸ್ತ ಯಜ್ಞ ಪೂಜಾದಿಗಳ ಮೂಲಕ ಆರಾಧಿಸಲ್ಪಡುವವನೂ ಇವನೇ. ಆದ್ದರಿಂದ ‘ಇಜ್ಯನು’. ಆರಾಧಿಸಲ್ಪಡಲು ಅತ್ಯಂತ ಶ್ರೇಷ್ಠನಾದವನು. ಯಾಕೆಂದರೆ ಇವನು ಶಾಶ್ವತವಾದ ಆನಂದ ಹಾಗೂ ಶಾಂತಿಯನ್ನು ಕೊಡುತ್ತಾನೆ. ಮೋಕ್ಷಫಲವನ್ನೂ ಕೊಡುತ್ತಾನೆ. ಆದ್ದರಿಂದ ‘ಮಹೇಜ್ಯನು’. ಪಶುಬಲಿ ಇರುವ(ಯುಪ) ಯಜ್ಞವೂ ಇವನೇ.ಆದ್ದರಿಂದ ‘ಕ್ರತುವು’.ಸತ್ಪುರುಷರನ್ನು ಕಾಪಾಡುತ್ತಾನೆ. ಸತ್ರವೆಂಬ ಯಾಗದ ಸ್ವರೂಪನು. ಆದ್ದರಿಂದ ‘ಸತ್ರಮ್’. ಸಂತರಿಗೆ ಆಶ್ರಯ ಪುರುಷನು. ಸಂತರಿಗೆ ಗಮ್ಯಸ್ಥಾನನು. ಆದ್ದರಿಂದ ‘ಸತಾಂಗತಿಃ’.  ಇಂದ್ರಿಯ,ಮನಸ್ಸು,ಬುದ್ಧಿಯನ್ನು ಪ್ರಕಾಶ ಪಡಿಸುವವನು. ಎಲ್ಲವನ್ನೂ  ತಿಳಿಯುತ್ತಾನೆ, ನೋಡುತ್ತಾನೆ. ಹಾಗಾಗಿ ‘ಸರ್ವದರ್ಶಿಯು’. ಸದಾ ವಿಮುಕ್ತನಾದವನು ಎಂದಿಗೂ ಬಂಧನಕ್ಕೆ ಬೀಳಲೇ ಇಲ್ಲ. ಆದ್ದರಿಂದ ‘ವಿಮುಕ್ತಾತ್ಮಾ’.ಎಲ್ಲವೂ ಆಗಿರುವ ‘ಜ್ಞನು’. ಅಂದರೆ ಅರಿಯುವಾತನು.ಆದ್ದರಿಂದ ಸರ್ವಜ್ಞನು.ಯಾವುದೇ ಎಲ್ಲೆ, ಕಟ್ಟಿಲ್ಲದ, ಹುಟ್ಟದೆ ಇರುವ ಉತ್ತಮವಾದದ್ದು ಎಲ್ಲರಿಗೂ ಸಾಧಕತಮವಾದದ್ದು, ಬ್ರಹ್ಮವು. ಆದ್ದರಿಂದ ಇದು ‘ಜ್ಞಾನಮುತ್ತಮಮ್’ಎನಿಸಿದೆ. ಸತ್ಯವೂ ಜ್ಞಾನವೂ ಅನಂತವೂ ಆದ ಬ್ರಹ್ಮ ಎಂಬ ಶ್ರುತಿಯಿಂದ ಈ ನಾಮಕ್ಕೆ ಹೀಗೆ ಅರ್ಥ.

ಈ ಸ್ತೋತ್ರದ ವೈಶಿಷ್ಟ್ಯ:

300x250 AD

ಉತ್ತರ ನಕ್ಷತ್ರದೆ 4ನೇ ಪಾದದಲ್ಲಿ ಜನಿಸಿದವರು ಪ್ರತಿ ನಿತ್ಯವೂ 11 ಬಾರಿ ಹೇಳಿಕೊಳ್ಳಬೇಕಾದ  ಸ್ತೋತ್ರವು ಇದಾಗಿದೆ.ಉನ್ನತ ಸ್ತರದ ಚಿಂತನ ಲಭ್ಯವಾಗಬೇಕಾದರೆ, ಉತ್ತಮ ವಿಚಾರ ಉತ್ಕೃಷ್ಟ ಜ್ಞಾನ ಪ್ರಾಪ್ತವಾಗಬೇಕಾದರೆ,ಯಾವುದೇ ಒಂದು ವಿಚಾರದಲ್ಲಿ ಅತ್ಯುತ್ತಮ ಪರಿಣಿತಿ ಗಳಿಸಬೇಕಾದರೆ, ಎಲ್ಲವನ್ನೂ ಗ್ರಹಿಸಬಲ್ಲ ದೂರದರ್ಶಿತ್ವ ಹಾಗೂ ತಲಸ್ಪರ್ಶಿ ಪಾಂಡಿತ್ಯ ಲಭ್ಯವಾಗಬೇಕು ಎಂದೆಲ್ಲಾ ಅಪೇಕ್ಷೆ ಮಾಡುವವರು ಈ ಸ್ತೋತ್ರ ಹೇಳಿಕೊಳ್ಳಬೇಕು. ಹಾಗೆ ನಾವು ಮಾಡುವ ಯಜ್ಞ ಯಾಗ,ಹವನ,ಹೋಮ,ದೇವತಾಕಾರ್ಯ,ಮಂಗಳ ಕಾರ್ಯ ನಿರ್ವಿಘ್ನವಾಗಿ ನಡೆದು ಅದರ ಸಂಪೂರ್ಣ ಫಲ ನಮಗೆ ಪ್ರಾಪ್ತಿಯಾಗಬೇಕು ಎಂದು ಬಯಸುವವವರೂ ಈ ಮೇಲಿನ ಸ್ತೋತ್ರ ಹೇಳಿಕೊಳ್ಳಬೇಕು.
(ಸಂಗ್ರಹ:- ಡಾ. ಚಂದ್ರಶೇಖರ ಎಲ್.ಭಟ್ ಬಳ್ಳಾರಿ)

Share This
300x250 AD
300x250 AD
300x250 AD
Back to top