ಹೊನ್ನಾವರ: ತಾಲೂಕಿನ ಹಳದೀಪುರದಲ್ಲಿ ಶಿರಸಿಯ ಕೆ.ಡಿ.ಸಿ.ಸಿ ಬ್ಯಾಂಕ್ನ 62ನೇ ಶಾಖೆಗೆ ನಿರ್ದೆಶಕ ಶಿವಾನಂದ ಹೆಗಡೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ನಂತರ ಮಾತನಾಡಿ 104 ವರ್ಷಗಳ ಇತಿಹಾಸವುಳ್ಳ ಜಿಲ್ಲೆಯ ಜನತೆಯ ಮನೆಮಾತಾಗಿರುವ ಕೆಡಿಸಿಸಿ ಬ್ಯಾಂಕ್ ನಿರಂತರವಾಗಿ ಲಾಭಗಳಿಸುತ್ತಾ ಸಹಕಾರಿ ಕ್ಷೇತ್ರದಲ್ಲಿ ಇತಿಹಾಸ ರಚಿಸಿದೆ ಎನ್ನುವುದಕ್ಕೆ ಹೆಮ್ಮೆ ಎನಿಸುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಸಿಬ್ಬಂದಿಗಳಿಂದ ಸರಿಯಾದ ಸಹಕಾರ ಸಿಗುವುದಿಲ್ಲ. ಹಲವು ಅಧಿಕಾರಿಗಳಿಗೆ ಸ್ಥಳಿಯ ಭಾಷೆಯೇ ಬರುವುದಿಲ್ಲ. ಹಾಗಾಗಿ ಗ್ರಾಹಕರು ತುಂಬಾ ಕಷ್ಟ ಅನುಭವುಸುವ ಪರಿಸ್ಥಿತಿ ಎದುರಾಗಲಿದೆ. ಆದರೆ ನಮ್ಮ ಬ್ಯಾಂಕಿನಲ್ಲಿ ಸ್ಥಳೀಯರೇ ಹೆಚ್ಚಿನ ಸಿಬ್ಬಂದಿಗಳಿದ್ದು, ಅವರಿಗೆ ಗ್ರಾಹಕರ ಕಷ್ಟ ಸುಖಗಳ ಅರಿವಿದ್ದು ಸದಾ ಸಹಕಾರ ನೀಡುತ್ತಾರೆ. ಹಲವು ವರ್ಷಗಳ ಬೇಡಿಕೆಯ ನಂತರ ಇಂದು ನಮ್ಮ ಶಾಖೆ ಉದ್ಗಾಟನೆಗೊಂಡಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿ.ಜಿ.ಸಭಾಹಿತ್ ಮಾತನಾಡಿ ಹಂತ ಹಂತವಾಗಿ ಅಭಿವೃದ್ದಿ ಹೊಂದಿ ಜಿಲ್ಲೆಯಾದ್ಯಂತ ಶಾಖೆಯನ್ನು ಹೊಂದಿ ಬೃಹದಾಕಾರವಾಗಿ ಬೆಳೆದು ನಿಂತಿದೆ ಎನ್ನುತ್ತಾ ತಾವು ನಿರ್ದೇಶಕನಾಗಿದ್ದ ಸಂದರ್ಭವನ್ನು ನೆನಪಿಸಿಕೊಂಡರು.
ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್, ಗ್ರಾ.ಪಂ. ಸದಸ್ಯರಾದ ಗೋವಿಂದ ಜೋಶಿ ನವೀನ ನಾಯ್ಕ, ವಿ.ಎಸ್.ಎಸ್ ಅಧ್ಯಕ್ಷರಾದ ಅಜಿತ್ ನಾಯ್ಕ, ಎಚ್.ಎಂ.ಪೈ ಸ್ಥಳ ದಾನಿಗಳಾದ ಗಣೇಶ ಪೈ, ವಿ.ಎಸ್.ಎಸ್ ಉಪಾಧ್ಯಕ್ಷರಾದ ರಾಜು ನಾಯ್ಕ, ಅಲ್ಲದೆ ಇಂಜಿನಿಯರ್ ಶ್ರೀನಿವಾಸ ನಾಯ್ಕ, ಹಳದಿಪುರ ಶಾಖಾ ವ್ಯವಸ್ಥಾಪಕ ನಿರ್ದೇಶಕರಾದ ಶಿಲ್ಪಾ ನಾಯ್ಕ ಹಾಗು ಸಿಬ್ಬಂದಿಗಳ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಕೆ.ಡಿ.ಸಿ.ಸಿ ಸಾಲ್ಕೋಡ್ ಶಾಖಾ ವ್ಯವಸ್ಥಾಪಕ ನಾಗರಾಜ ಹೆಗಡೆ, ಕಾರ್ಯಕ್ರಮ ನಿರ್ವಹಿಸಿದರು. ಗಿರೀಶ ಮಾಡಗೇರಿ ಸರ್ವರನ್ನ ಸ್ವಾಗತಿಸಿ ವಂದಿಸಿದರು.