Slide
Slide
Slide
previous arrow
next arrow

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ

300x250 AD

“ಅನಿರ್ವಣ್ಣಃ ಸ್ಥವಿಷ್ಠೋSಭೂರ್ ಧರ್ಮಯೂಪೋ ಮಹಾಮಖಃ| ನಕ್ಷತ್ರನೇಮಿರ್ನಕ್ಷತ್ರೀ ಕ್ಷಮಃ ಕ್ಷಾಮಃ ಸಮೀಹನಃ” ||

ಭಾವಾರ್ಥ: 

ವಿಷಾದ ರಹಿತನು ಸಂಪೂರ್ಣವಾಗಿ ಪ್ರಶಾಂತ ಮನಸ್ಕನಾದುದರಿಂದ ಇವನಿಗೆ ದುಃಖ ಉಂಟಾಗಲು ಅವನಲ್ಲಿ ಯಾವ ಆಸೆ,ನಿರಾಸೆ ಇತ್ಯಾದಿ ಇಲ್ಲ. ಆದ್ದರಿಂದ ‘ಅನಿರ್ವಣ್ಣನು’ ಅವನು, ವಿರಾಟ್ ಸ್ವರೂಪದವನು.ಅವನಿಗೆ ಆಕಾಶವೇ ತಲೆ,ಸೂರ್ಯ ಚಂದ್ರರೇ ಕಣ್ಣುಗಳು.ಹೀಗೆ ಸಮಸ್ತ ವಿಶ್ವವೇ  ಅವನ ಸಶರೀರವಾಗಿದೆ.ಆದ್ದರಿಂದ ‘ಸ್ಥವಿಷ್ಟನು’. ಜನ್ಮವಿಲ್ಲದವನಾಗಿದ್ದರಿಂದ ‘ಅಭೂಃ’.ಯಜ್ಞದಲ್ಲಿ ಪಶುಗಳು ಯೂಪ(ಕಂಭ)ಕ್ಕೆ ಬಂಧಿಸಲ್ಪಟ್ಟಂತೆ ಒಳ್ಳೆಯ ಧರ್ಮಗಳು ಇವನಲ್ಲಿ ಇವೆ. ಆದ್ದರಿಂದ ‘ಧರ್ಮಯೂಪನು’. ಯಾವಾತನಲ್ಲಿ ಸಮರ್ಪಿತವಾದ ‘ಮಖ’ಗಳು ಎಂದರೆ ಯಜ್ಞಗಳು ನಿರ್ಮಾಣರೂಪವಾದ ಫಲವನ್ನು ಕೊಡುವವನಾಗಿ ಮಹಾ ಯಜ್ಞಗಳಾಗುವವೋ ಆ ಈತನು ‘ಮಹಾಮಖನು’ ಅಥವಾ ಇವನು ಮಹಾ ಯಜ್ಞಸ್ವರೂಪಿಯಾಗಿ ತನಗೆ ಅರ್ಪಿಸಿದ ಯಜ್ಞಾಪೂಜಾದಿಗಳಿಗೆ ಫಲವಾಗಿ ಮೋಕ್ಷವನ್ನೇ ಕೊಡುತ್ತಾನೆ ಎಂದೂ ಅರ್ಥೈಸಬಹುದು.ನಕ್ಷತ್ರ ಗಳಿಂದೊಡಗೂಡಿದ ಸಮಸ್ತ ಜ್ಯೋತಿರ್ಮಂಡಲವನ್ನು ಧ್ರುವನಕ್ಷತ್ರವನ್ನು ಕೇಂದ್ರವಾಗಿಸಿಕೊಂಡು ತಿರುಗಿಸುವವನು. ಆದ್ದರಿಂದ ‘ನಕ್ಷತ್ರನೇಮಿಯು’. ಚಂದ್ರನ ರೂಪದಲ್ಲಿರುವವನು.ಆದ್ದರಿಂದ ‘ನಕ್ಷತ್ರೀ’. ‘ನಕ್ಷತ್ರಗಳಿಗೆ ನಾನು ಶಶಿ’ ಎಂಬ ಭಗವದ್ವಚನ (ಗೀ.೧೦-೨೧) ದಿಂದ ಈ ಅರ್ಥವು ಹೊರಡುತ್ತದೆ. ಎಲ್ಲಕಾರ್ಯಗಳಲ್ಲಿಯೂ ಸಮರ್ಥವಾಗಿರುವುದರಿಂದ ‘ಕ್ಷಮನು’.ಅಥವಾ ಭಕ್ತರ ಮೂರ್ಖತನವನ್ನು ತಾಳ್ಮೆಯಿಂದ ಕ್ಷಮಿಸುತ್ತಾನೆ.’ಕ್ಷಾಮಃ’ಎಂದರೆ ನಾಶವಿಲ್ಲದವನು.ಸಂಪೂರ್ಣ ವಿಶ್ವವು ಲಯ ಹೊಂದಿದರೂ ಇವನು ಮಾತ್ರ ಶಾಶ್ವತವಾಗಿ ಇರುತ್ತಾನೆ.ಸೃಷ್ಟಿಯೇ ಮುಂತಾದವುಗಳಲ್ಲಿ ಈತನೇ ವ್ಯವಹರಿಸುತ್ತಾನಾದ್ದರಿಂದ ಸಮೀಹನನು.

ಸ್ತೋತ್ರದ ವೈಶಿಷ್ಟ್ಯ: 

300x250 AD

ಈ ಮೇಲಿನ ಸ್ತೋತ್ರವು ಉತ್ತರ ನಕ್ಷತ್ರದ ೩ನೇ(ಮೂರನೇ) ಪಾದದವರು ಪ್ರತಿ ನಿತ್ಯ ೧೧ ಬಾರಿ  ಹೇಳಿಕೊಳ್ಳಬೇಕಾದ ಶ್ಲೋಕ.ಆದರೂ ನಕ್ಷತ್ರ ದೋಷವಿರುವವವರು,ಜನ್ಮ ನಕ್ಷತ್ರದಲ್ಲಿ ದೋಷವಿದೆ ಎಂದು ಭಾವಿಸುವವವರು, ಮೂಲಾ, ರೇವತಿ ನಕ್ಷತ್ರ,ಮುಂತಾದ ನಕ್ಷತ್ರಗಳಿಂದ ನಮಗೆ ತುಂಬಾ ತೊಂದರೆಯ ಸಂಭವವಿದೆ ಎಂದು ಭಾವಿಸುವವವರು, ಕೆಟ್ಟ ನಕ್ಷತ್ರದಲ್ಲಿ ತೀರಿಕೊಂಡಿದ್ದಾರೆ, ಬದುಕಿ ಉಳಿದವರು ನಾವೇನು ಮಾಡಬೇಕು ಎಂದು ಒದ್ದಾಡುತ್ತಿರುವವರು,ದುಷ್ಟ ನಕ್ಷತ್ರಗಳಿಂದ ದುಷ್ಫಲ ಪ್ರಾಪ್ತಿಯಾದರೆ ಏನುಗತಿ ಎನಿಸುತ್ತಿರುವವರಿಗೆ,ನಕ್ಷತ್ರ ಗಳನ್ನು ನೇಮಿಸಿ, ಅವುಗಳಲ್ಲಿಯ ಕ್ಷಮಗುಣವನ್ನು ಪರಿವರ್ತನೆ ಮಾಡಿ ಕ್ಷೇಮಗುಣ ವನ್ನಾಗಿ ಮಾರ್ಪಡಿಸುವ ಮಹಾವಿಷ್ಣುವಿನ ದಿವ್ಯ ಮಂತ್ರ ವಾದ ಮೇಲಿನ ಸ್ತೋತ್ರವನ್ನು ಹೇಳಿಕೊಳ್ಳಬೇಕು.

(ಸಂಗ್ರಹ:-ಡಾ. ಚಂದ್ರಶೇಖರ.ಎಲ್.ಭಟ್. ಬಳ್ಳಾರಿ).

Share This
300x250 AD
300x250 AD
300x250 AD
Back to top