Slide
Slide
Slide
previous arrow
next arrow

ಮಳೆ ನಿಮಿತ್ತ ಶಾಲೆಗಳಿಗೆ ಮಾತ್ರ ರಜೆ, ಆಟಕ್ಕಿಲ್ಲ

300x250 AD

ದಾಂಡೇಲಿ : ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ತಾಲೂಕುಗಳ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆಯೆಂದು ಜಿಲ್ಲಾಧಿಕಾರಿಯವರು ಭಾನುವಾರ ಸಂಜೆಯೇ ಘೋಷಿಸಿದ್ದರು.

ಸೋಮವಾರದ ರಜೆಯು ದಾಂಡೇಲಿ ತಾಲೂಕಿಗೂ ಅನ್ವಯವಾಗಿತ್ತು. ತಾಲೂಕಿನ ಎಲ್ಲ ಶಾಲೆಗಳಿಗೆ ಹಾಗೂ ಎಲ್ಲಾ ಪದವಿಪೂರ್ವ ಕಾಲೇಜುಗಳಿಗೆ ರಜೆಯನ್ನು ಸಾರಲಾಗಿತ್ತು.

300x250 AD

ಶಾಲೆ – ಕಾಲೇಜುಗಳಿಗೆ ರಜೆ ನೀಡಿದ್ದು ಹೌದು, ಆದರೆ ಮಕ್ಕಳಿಗೆ ಶಾಲೆ ಕಾಲೇಜುಗಳಿಗೆ ಹೋಗಲು ಅಷ್ಟೇ ರಜೆ ನೀಡಲಾಗಿದೆ ಎಂದು ತಿಳಿದು ದಾಂಡೇಲಿಯ ಮಕ್ಕಳು ಅಲ್ಲಿ ಇಲ್ಲಿ ಎಂದು ಅಡ್ಡಾಡಿದ್ದೇ ಅಡ್ಡಾಡಿದ್ದು, ಸಿಕ್ಕಸಿಕ್ಕ ಮೈದಾನದಲ್ಲಿ ಆಡಿದ್ದೇ ಆಡಿದ್ದು. ಒಟ್ಟಿನಲ್ಲಿ ಸೋಮವಾರದ ರಜೆಯನ್ನು ದಾಂಡೇಲಿಯ ಮಕ್ಕಳು ಸಂಭ್ರಮಿಸಿದ್ದಂತು ಹೌದು.

Share This
300x250 AD
300x250 AD
300x250 AD
Back to top