Slide
Slide
Slide
previous arrow
next arrow

ವಿಎಸ್ಎಸ್ ನೂತನ ಅಧ್ಯಕ್ಷರಾಗಿ ವಿಜಯ್‌ಕುಮಾರ್ ಆಯ್ಕೆ

300x250 AD

ಬನವಾಸಿ: ಸ್ಥಳೀಯ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಭಾಶಿ ಗ್ರಾಮದ ವಿಜಯಕುಮಾರ್ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಸಭಾಭವನದಲ್ಲಿ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ಸದಸ್ಯರು ವಿನಯಕುಮಾರ್ ಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.

ಹಿಂದಿನ ಅಧ್ಯಕ್ಷರಾಗಿದ್ದ ಬಾಲಚಂದ್ರ ಗೌಡ ಅವರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆಯಾದ ಕಾರಣ ವಿನಯಕುಮಾರ್ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ಡಿ.ಡಿಸೋಜ ತಿಳಿಸಿದರು.

300x250 AD

ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಬಾಲಚಂದ್ರ ಗೌಡ, ರಾಜಶೇಖರ ಗೌಡ, ಉಪಾಧ್ಯಕ್ಷ ದೇವಾನಂದ ಬೊಂಗಾಳೆ, ಪ್ರಮುಖರಾದ ಶಿವಕುಮಾರ್ ದೇಸಾಯಿ ಗೌಡ, ದ್ಯಾಮಣ್ಣ ದೊಡ್ಮನಿ, ಬಸವರಾಜ ನಾಯ್ಕ್, ಸುಧಾಕರ ನಾಯ್ಕ್, ಭಾಶಿ ಗಜಾನನ ಗೌಡ, ವೀರಭದ್ರ ಗೌಡ, ಸತೀಶ್ ಗೌಡ ಅಜ್ಜರಣಿ, ಪುಟ್ಟು ಸವಣೂರು ಮತ್ತಿತರರು ಇದ್ದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರನ್ನು ಸಂಘದಿಂದ ಸತ್ಕರಿಸಲಾಯಿತು. ರೈತರು, ವ್ಯವಸಾಯ ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top