ರಾಘವೇಂದ್ರ ಬೆಟ್ಟಕೊಪ್ಪ, ತುಳಸಿ ಬೆಟ್ಟಕೊಪ್ಪಗೆ ಸನ್ಮಾನ
ಶಿರಸಿ: ‘ಮಾಧ್ಯಮ ಶ್ರೀ’ ಪ್ರಶಸ್ತಿ ಪುರಸ್ಕೃತರಾಗಲಿರುವ ರಾಘವೇಂದ್ರ ಬೆಟ್ಟಕೊಪ್ಪ, ಅತ್ಯಂರತ ಕಿರಿಯ ವಯಸ್ಸಿನಲ್ಲೇ ಯಕ್ಷ ನೃತ್ಯದ ಮೂಲಕ ವಿಶ್ವಶಾಂತಿ ಸಂದೇಶ ಸಾರುತ್ತಿರುವ ಶಿರಸಿ ಮಾರಿಕಾಂಬಾ ಪ್ರೌಢಶಾಲೆಯ ಹತ್ತನೇ ವರ್ಗದ ವಿದ್ಯಾರ್ಥಿನಿ ತುಳಸಿ ಹೆಗಡೆ ಅವಳನ್ನು ಶಾಸಕ ಭೀಮಣ್ಣ ನಾಯ್ಕ ಸನ್ಮಾನಿಸಿ ಅಭಿನಂದಿಸಿದರು.
ಬಳಿಕ ಮಾತನಾಡಿದ ಅವರು, ಉತ್ತರ ಕನ್ನಡದ ಮಾಧ್ಯಮ ಕ್ಷೇತ್ರ ಪವಿತ್ರವಾಗಿದೆ. ಪ್ರಾಮಾಣಿಕ ಕಾರ್ಯ ಮಾಡುತ್ತಿದ್ದಾರೆ. ಅಂಥವರಲ್ಲಿ ರಾಘವೇಂದ್ರರೂ ಒಬ್ಬರು ಎಂದರು. ಅತ್ಯಂತ ಕಿರಿಯ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಾದ ತುಳಸಿಯ ಸಣ್ಣ ವಯಸ್ಸಿನ ಸಾಧನೆ ಹೆಮ್ಮೆ ಮೂಡಿಸುತ್ತದೆ. ಓದಿನ ಜೊತೆ ಕಲೆ ಬಿಡದೇ ಕರ್ನಾಟಕದ ಈ ಅಪರೂಪದ ಕಲೆಯನ್ನು ಎಲ್ಲರಿಗೂ ಪರಿಚಯಿಸುವ ಕಾರ್ಯ ತುಳಸಿ ಮಾಡಲಿ ಎಂದರು.
ಎಸ್.ಕೆ.ಭಾಗ್ವತ್ ಮಾತನಾಡಿ, ತುಳಸಿಯ ಸಾಧನೆ ಬೆರಗು ಮೂಡಿಸುವಂತದ್ದು. ಅಪ್ಪ ಮಗಳಿಗೆ ಒಂದೇ ವೇದಿಕೆಯಲ್ಲಿ ಸನ್ಮಾನ ಮಾಡುವ ಸಂದರ್ಭ ಒದಗಿದೆ ಎಂದರು. ಪ್ರಮುಖರಾದ ಜಗದೀಶ ಗೌಡ, ಅಬ್ಬಾಸ್ ತೋನ್ಸೆ, ದೀಪಕ ದೊಡ್ಡೂರು, ಸುಮಾ ಉಗ್ರಾಣಕರ್, ಪ್ರಸನ್ನ ಶೆಟ್ಟಿ, ಖಾದರ ಆನವಟ್ಟಿ, ಜ್ಯೋತಿ ಗೌಡ ಇತರರು ಇದ್ದರು.