Slide
Slide
Slide
previous arrow
next arrow

ಕೊಂಕಣ ರೈಲಿನಲ್ಲಿ ಕಳ್ಳರ ಕಾಟ: ಮಹಿಳೆಯ ಐಫೋನ್ ಕಳ್ಳತನ

300x250 AD

ಅಂಕೋಲಾ: ಮಂಗಳೂರಿನಿಂದ ಪೋರಬಂದರ್‌ಗೆ ಸಂಚರಿಸುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಂಗಳೂರಿನ ಮೀನಾಕ್ಷಿ ಗಂಗೋರಿ ಎಂಬಾತರ ಐಫೋನ್’ನ್ನು ಕಳ್ಳರು ದೋಚಿದ್ದಾರೆ.

ಇದರ ಜೊತೆ ಅವರ ಬಳಿಯಿದ್ದ ಪಾನ್ ಕಾರ್ಡ ಹಾಗೂ 500ರೂ. ಸಹ ಕಳ್ಳರ ಪಾಲಾಗಿದೆ. ಜೂನ್ 24ರಂದು ಸ್ಲೀಪರ್ ಕ್ಲಾಸಿನ ಟಿಕೆಟ್ ಪಡೆದು ಅವರು ಪ್ರಯಾಣ ಮಾಡುತ್ತಿದ್ದರು. ರೈಲು ಬೆಳಗ್ಗೆ 1.15ರ ವೇಳೆಗೆ ಗೋಕರ್ಣದಲ್ಲಿ ನಿಂತಾಗ ಕಳ್ಳರು ತಮ್ಮ ಕೈ ಚಳಕ ಪ್ರದರ್ಶಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಆರ್‌ಪಿಎಫ್ ಪೊಲೀಸರು ಇದಿಗ ಪ್ರಕರಣವನ್ನು ಅಂಕೋಲಾ ಪೊಲೀಸರಿಗೆ ವರ್ಗಾಯಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top