ಸಿದ್ದಾಪುರ: ಪಟ್ಟಣದ ವಿದ್ಯುತ್ ಕಾರ್ಯ ಮತ್ತು ಪಾಲನ ಉಪವಿಭಾಗದಲ್ಲಿ ಶುಕ್ರವಾರ ವಿದ್ಯುತ್ ಸುರಕ್ಷತಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಿರ್ವಹಣಾ ಸಿಬ್ಬಂದಿಗಳಿಗೆ ವಿದ್ಯುತ್ ಸುರಕ್ಷತೆಯ ಕುರಿತು ಪ್ರಮಾಣ ಬೋಧಿಸಿದರು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ಕೇಂದ್ರ ಕಾರ್ಯಕಾರಿಣಿ ಸದಸ್ಯ ರವಿ ನಾಯ್ಕ ವಿದ್ಯುತ್ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಉಪಯೋಗಿಸಬಹುದಾದ ಸುರಕ್ಷತಾ ಸಾಮಗ್ರಿಗಳ ಕುರಿತು ಮಾಹಿತಿ ನೀಡೀದರು. ಮತ್ತೊಬ್ಬ ಕೇಂದ್ರ ಕಾರ್ಯಕಾರಿಣಿ ಸದಸ್ಯ ಹರೀಶ ಪಟಗಾರ ವಿದ್ಯುತ್ತಿನ ಕೆಲಸ ನಿರ್ವಹಿಸುವಾಗ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ನಿರ್ವಹಣಾ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕಿನ ಶಾಖಾಧಿಕಾರಿಗಳಾದ ಸಂದೀಪ ಅರಳೇಶ್ವರ, ಶಾಮೀದಸಾಬ, ಪ್ರಕಾಶ ನಾಯ್ಕ,ಮಧು ಕೆ, ಗಣೇಶ ಮಡಿವಾಳ ಹಾಗೂ ಶೋಭಾ ಭಟ್, ಪ್ರಾಥಮಿಕ ಸಮಿತಿ ಅಧ್ಯಕ್ಷ ಮಂಜು ಟಿ ನಾಯ್ಕ ಮತ್ತು ಸಿಬ್ಬಂದಿಗಳು ಇದ್ದರು. ಹೊನ್ನಪ್ಪ ಕಾರ್ಯಕ್ರಮ ನಿರ್ವಹಿಸಿದರು.