ದಾಂಡೇಲಿ : ಜನಸೇವಕರು, ಉದ್ಯಮಿ, ಕೊಡುಗೈದಾನಿಯಾಗಿದ್ದ ಎ.ಎಂ.ಕನ್ಯಾಡಿ ಬೆಂಗಳೂರಿನಲ್ಲಿ ವಿಧಿವಶರಾದರು. ಮೃತರಿಗೆ 86 ವರ್ಷ ವಯಸ್ಸಾಗಿತ್ತು.
ದಾಂಡೇಲಿಯಲ್ಲಿ ಕಳೆದ ಅನೇಕ ವರ್ಷಗಳಿಂದ ವ್ಯಾಪಾರಸ್ಥರಾಗಿ, ಉದ್ಯಮಿಯಾಗಿ, ಜನ ಸೇವಕರಾಗಿ ಗಮನ ಸೆಳೆದಿದ್ದ ಎ.ಎಂ.ಕನ್ಯಾಡಿ ಅವರು ನಗರದ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳ ಬಲವರ್ಧನೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಹಳೆದಾಂಡೇಲಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಕನ್ಯಾ ವಿದ್ಯಾಲಯ ಶಿಕ್ಷಣ ಸಂಸ್ಥೆ, ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಉದಯಕ್ಕೆ ಬಹುಮೂಲ್ಯ ಕೊಡುಗೆಯನ್ನು ನೀಡಿದ್ದರು.
ಮೃತ ಎ. ಎಂ.ಕನ್ಯಾಡಿ ಅವರು ಓರ್ವ ಪುತ್ರ, ಇಬ್ಬರು ಸುಪುತ್ರಿಯರನ್ನು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ ಮೃತರ ನಿಧನಕ್ಕೆ ನಗರದ ಗಣ್ಯರನೇಕರು ಕಂಬನಿಯನ್ನು ಮಿಡಿದು ಸಂತಾಪವನ್ನು ಸೂಚಿಸಿದ್ದಾರೆ.