Slide
Slide
Slide
previous arrow
next arrow

KCET, NEET ತರಬೇತಿ ಉದ್ಘಾಟನೆ

300x250 AD

ಅಂಕೋಲಾ: ಇಲ್ಲಿನ ಹಿಮಾಲಯ ಕಾಲೇಜಿನಲ್ಲಿ ಟೀಚರ್ ಸಂಸ್ಥೆಯಿಂದ KCET ಹಾಗೂ NEET ತರಬೇತಿಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಅಂಕೋಲಾದ ಹಿಮಾಲಯ ಕಾಲೇಜಿನಲ್ಲಿ ವಿಜ್ಞಾನ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮಕ್ಕಳಿಗೆ ಒಂದು ವರ್ಷಗಳ ಕಾಲ KCET ಹಾಗೂ NEET ತರಬೇತಿಯನ್ನು ನೀಡುವ ಉದ್ದೇಶದಿಂದ ಟೀಚರ್ ಸಂಸ್ಥೆಯ ಸಹಯೋಗದೊಂದಿಗೆ ರಾಜ್ಯದ ಬೇರೆ ಬೇರೆ ಭಾಗದ ಉತ್ತಮ ಅನುಭವಿ ಶಿಕ್ಷಕರನ್ನು ಕರೆಸಿ ಮಕ್ಕಳಿಗಾಗಿ ಕಾಲೇಜಿನಲ್ಲಿಯೇ ತರಬೇತಿ ನೀಡುವ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.

ಉದ್ಘಾಟಕರಾಗಿ ಆಗಮಿಸಿದ ಟೀಚರ್ ಸಂಸ್ಥೆಯ ಅಭಿರಾಮ ವಿ. ಮಕ್ಕಳಿಗೆ ನಮ್ಮ ಸಂಸ್ಥೆಯಿಂದ ಉತ್ತಮ ಶಿಕ್ಷಕರ ತಂಡವಿದ್ದು ಈ ತಂಡದವರು ಹಿಮಾಲಯ ಕಾಲೇಜಿಗೆ ಪ್ರತಿ ವಾರ ಆಗಮಿಸಿ ತರಗತಿಗಳನ್ನು ನಡೆಸುತ್ತಾರೆ. ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರ ಆಸಕ್ತಿ ಇಂದ ಇಂದು ಈ ಕೆಸಿಇಟಿ ಹಾಗೂ ನೀಟ್ ತರಬೇತಿ ಕಾರ್ಯಕ್ರಮ ಉದ್ಘಾಟನೆ ಆಗಿದೆ. ಮಕ್ಕಳ ಭವ್ಯಭವಿಷ್ಯದ ದೃಷ್ಟಿಯಿಂದ ಕಾಲೇಜು ಸರ್ವ ಪ್ರಯತ್ನ ಮಾಡುತಿದ್ದು ನಾವು ಸಹ ಈ ಪ್ರಯತ್ನಕ್ಕೆ ಜೊತೆಯಾಗಲಿದ್ದೇವೆ ಎಂದು ತಿಳಿಸಿದರು.

ಡಾ. ನೀತಿನ್ ಹೊಸಮಾಲೆಕರ್ ಅವರು ಮಾತನಾಡಿ ವಿಧ್ಯಾರ್ಥಿಗಳಿಗೆ ಕೊರ್ಸ್ ಬಗ್ಗೆ ತಿಳಿಸಿ ಮುಂದೆ ಕಾಂಪಿಟೇಟಿವ್ ಪರೀಕ್ಷೆಗಳ ಎದುರಿಸುವ ಬಗ್ಗೆ ತಯಾರಿ ಹೇಗೆ ಇರಬೇಕೆಂದು ಮಾರ್ಗದರ್ಶನ ನೀಡಿದರು. ಪಾಲಕರು ಮಕ್ಕಳ ಬಗ್ಗೆ ಗಮನ ಹರಿಸಬೇಕು ಮತ್ತು ಮಕ್ಕಳ ಮೇಲೆ ಹೇರಿಕೆ ಹೇರಬಾರದೆಂದು ಹೇಳಿದರು. ಮಕ್ಕಳಿಗೆ ಭವಿಷ್ಯದಲ್ಲಿ ಉತ್ತಮ ವಿದ್ಯಾರ್ಥಿಗಳಾಗಿ ಹೊರಬನ್ನಿ ಎಂದು ತಿಳಿಸಿದರು.

ಡಾ. ವಸಂತ ಶಾಸ್ತ್ರಿ ಅವರು ಮಾತಾಡಿ ಟೀಚರ್ ಯಾವ ರೀತಿ ಬೆಳೆದು ಬಂದಿದೆ , ವಿದ್ಯಾರ್ಥಿಗಳಿಗೆ ಅರ್ಥಮಾಡಿಸುವ ಮೂಲಕ ಯಾವ ರೀತಿ ಪಾಠ ನಡೆಯುತ್ತದೆ ಎಂಬುದನ್ನು ತಿಳಿಸಿದರು. ಪ್ರತಿ ವಾರ ಉತ್ತಮ ಶಿಕ್ಷಕರ ತಂಡ ಹಿಮಾಲಯನ್ ಕಾಲೇಜಿಗೆ ಪಾಠ ಮಾಡುತ್ತಾರೆ.ಇವತ್ತಿನ ಟೆಕ್ನಾಲಜಿ ಯುಗದ ಜೊತೆಗೆ ನಾವು ಮುಂದುವರೆಯಬೇಕಿದೆ. ಕಲಿಯುವ ವಿದ್ಯಾರ್ಥಿಗಳಿಗೆ ಈ ಆ್ಯಪ್ ಇಂದ ಗೋಲ್ಡನ್ ಅವಕಾಶ ಇದೆ. ಇವೆಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.ಮಕ್ಕಳ ಉತ್ತಮ ಭವಿಷ್ಯದ ದೃಷ್ಟಿಯಿಂದ ಹತ್ತನೆ ತರಗತಿಯ ವಿಧ್ಯಾರ್ಥಿಗಳಿಗಾಗಿ ಒಂದು ವರ್ಷಗಳ ಕಾಲ ಪೌಂಡೇಶನ ಕೋರ್ಸ್ ಕಾಲೇಜಿನಲ್ಲಿ ನಡೆಯಲಿದೆ.

300x250 AD

ಹಿಮಾಲಯ ಸೆಂಟ್ರಲ್ ಶಾಲೆಯ ಮುಖ್ಯಗುರುಗಳಾದ ಸವೀತಾ ಕಾನೂಜಿಯವರು ಮಾತನಾಡಿ ಹಿಂದೆ ಕಲಿಯುವಾಗ ಇಂತಹ ಯಾವುದೇ ರೀತಿಯ ವ್ಯವಸ್ಥೆ ಇರಲಿಲ್ಲ ಆದರೆ ಈವಾಗ ಉತ್ತಮ ಪರ್ಸಂಟೇಜ್ ದೊರೆಯಬೇಕು ಎನ್ನುವದು ಪಾಲಕರ ಮಾನಸಿಕತೆ. ಆ ಮಾನಸಿಕತೆಗೆ ತಕ್ಕಂತೆ ಪಾಲಕರು ಮಕ್ಕಳಿಗೆ ಸಹಕಾರಿ ಆಗಬೇಕು. ಈ ತರಹದ ಕೋರ್ಸ್ ಬೇರೆ ಕಡೆ ಹೊದರೆ ಲಕ್ಷಗಟ್ಟಲೆ ಕೊಟ್ಟು ಕಲಿಯಬೇಕು ಆದರೆ ನಮ್ಮ ಕಾಲೇಜಿನಲ್ಲಿಯೇ ಉತ್ತಮ ರೀತಿಯ ಕೋಚಿಂಗ್ ಕೊಡುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದೇವೆ. ಮಕ್ಕಳು ಸಹ ತಮ್ಮ ಗುರಿಯನ್ನು ಇಟ್ಟುಕೊಂಡು ಪರೀಕ್ಷೆಗಳನ್ನು ಹಬ್ಬವನ್ನಾಗಿ ತೆಗೆದುಕೊಂಡು ಪ್ರಯತ್ನ ಪಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಎಂ ಐ ಮಹಾಲೆಯವರು ಮಾತನಾಡಿ ಈ ಭಾಗದ ವಿಧ್ಯಾರ್ಥಿಗಳು ಬೆಸ್ಟ್ ಕೋಚಿಂಗ್ ಗಾಗಿ ಬೇರೆ ಬೇರೆ ಕಡೆ ಹೋಗುತಿದ್ದಾರೆ, ಮುಂದಿನ ದಿನದಲ್ಲಿ ನಮ್ಮ ಹಿಮಾಲಯನ್ ಕಾಲೇಜ್, ಟೀಚರ್ ಸಂಸ್ಥೆಯೊಂದಿಗೆ ಸೇರಿ ಬೆಸ್ಟ್ ಕೊಚಿಂಗ್ ಕೊಡಲಾಗುವದು ಎಂದರು. ಎಲ್ಲಾ ಕಾಂಪಿಟೇಟಿವ್ ಪರೀಕ್ಷೆ ಬರೆಯುವ ವಿಧ್ಯಾರ್ಥಿಗಳಿಗೆ ಹಿಮಾಲಯ ಕಾಲೇಜಿನಲ್ಲಿ ಉತ್ತಮ ಅವಕಾಶ ಸಿಗಲಿದೆ ಹಾಗೂ ನಿಮ್ಮ ವಿದ್ಯಾಭ್ಯಾಸದ ಎಲ್ಲಾ ಸಮಯದಲ್ಲಿ ಬೇಕಾದ ಎಲ್ಲಾ ರೀತಿಯ ಸಹಕಾರ ಮಾಡುವದಾಗಿ ಹೇಳಿದರು. ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಫೌಂಡೇಶನ್ ಕೋರ್ಸ್ ನಡೆಯಲಿದ್ದು, ಈ ಮೂಲಕ ಮುಂದಿನ ಭವಿಷ್ಯಕ್ಕೆ ಈಗಿನಿಂದಲೆ ತಯಾರಿ ಮಾಡಲು ಯೋಚಿಸಲಾಗಿದೆ ಎಂದರು.

ಈ ಕಾರ್ಯಕ್ರಮವನ್ನು ನಿಶಾ ಎಂ ಎಚ್ ಅವರು ನಿರೂಪಿಸಿದರು, ಮದುರಾ ನಾಯಕ ಸ್ವಾಗತಿಸಿದರು, ಈ ಸಮಯದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಪಾಲಕರು, ಶಿಕ್ಷಕವರ್ಗ, ಟೀಚರ್ ಸಂಸ್ಥೆಯ ಬ್ಯುಸಿನೆಸ್ ಡೆವಲಪ್ಮೆಂಟ್ ಎಕ್ಸಿಕ್ಯೂಟಿವ್ ಅಣ್ಣಪ್ಪ ನಾಯ್ಕ ಹಾಗೂ ಶಾಲಾ – ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.

Share This
300x250 AD
300x250 AD
300x250 AD
Back to top