Slide
Slide
Slide
previous arrow
next arrow

ಇಂದಿನಿಂದ ‘ಭಾವ ಭಾಷಾ ವಿಲಾಸ’ ತಾಳಮದ್ದಲೆ ಸರಣಿ ಆರಂಭ

300x250 AD

ಹೊನ್ನಾವರ: ಜಿಲ್ಲೆಯ ಮೂರು ತಾಲೂಕಿನ ಎರಡು ಪ್ರಮುಖ ನದಿ ದಂಡೆಯ ಊರುಗಳಲ್ಲಿ ಶ್ರೀರಾಮಾಯಣ ಕುರಿತಾದ ತಾಳಮದ್ದಳೆ ಪ್ರಸಂಗ ಸರಣಿ ಭಾವ ಭಾಷಾ ವಿಲಾಸ ಜುಲೈ 6 ರಿಂದ 14ರ ತನಕ ಒಂಬತ್ತು ದಿನಗಳ ಕಾಲ ನಡೆಯಲಿದೆ.

ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಇದು ನಡೆಯಲಿದ್ದು, ಶ್ರೀರಾಮ ಪಾತ್ರದಲ್ಲಿ ಪ್ರಸಿದ್ಧ ಅರ್ಥದಾರಿ, ಹವ್ಯಕ ಮಹಾ‌ ಮಂಡಲದ ಅಧ್ಯಕ್ಷ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ (ಕರ್ಕಿ) ಹೆರವಟ್ಟ ಅವರು ಒಂಬತ್ತೂ ದಿನ ಪಾತ್ರ‌ ಮಾಡಲಿದ್ದು, ಕಥಾನಕ ಕಟ್ಟಿಕೊಡಲಿದ್ದಾರೆ.

ಜು.6 ರಂದು ಹೊನ್ನಾವರ ಅಗ್ರಹಾರದ ಗಣಪತಿ ದೇವಸ್ಥಾನದಿಂದ ಆರಂಭವಾಗಲಿದ್ದು, ಎಂಟೂ ದಿನ ಸಂಜೆ 5ರಿಂದ 8.30ರ ತನಕ ನಡೆಯಲಿದೆ. ಧರ್ಮದರ್ಶಿಗಳಾದ ಡಾ. ಜಿ.ಜಿ.ಸಭಾಹಿತ, ಹಿರಿಯ ಯಕ್ಷಗಾನ ಕಲಾವಿದ ಕೃಷ್ಣ ಯಾಜಿ‌ ಬಳಕೂರು ಉದ್ಘಾಟಿಸಲಿದ್ದಾರೆ.

ಪ್ರಥಮ ದಿನ ಸಿದ್ದಾಶ್ರಮ- ಮಿಥಿಲೆ ಪ್ರಸಂಗದಿಂದ ಸರಣಿ ಆರಂಭವಾಗಲಿದೆ. ಹಿಮ್ಮೇಳದಲ್ಲಿ ಸರ್ವೇಶ್ವರ‌ ಮುರೂರು, ಬೋಳ್ಗೆರೆ ಗಜಾನನ ಭಂಡಾರಿ, ಅರ್ಥದಾರಿಗಳಾಗಿ‌ ಡಾ. ಜಿ‌.ಎಲ್.ಹೆಗಡೆ ಕುಮಟಾ, ಜಂಬೆ ಬಾಲಕೃಷ್ಣ ಭಟ್ಟ, ಜಿ.ವಿ.ಹೆಗಡೆ, ಕೆ.ವಿ.ಹೆಗಡೆ, ಅಂಬಾ ಪ್ರಸಾದ ಪಾತಾಳ ಭಾಗವಹಿಸುವರು.

ಎರಡನೇ‌ ದಿನ ಜು.7ರಂದು‌ ಕರ್ಕಿ ದೈವಜ್ಞ ಮಠದಲ್ಲಿ ಅಯೋಧ್ಯಾ ತಾಳಮದ್ದಳೆ ನಡೆಯಲಿದೆ. ಹಿಮ್ಮೇಳದಲ್ಲಿ ಶಂಕರ ಬ್ರಹ್ಮೂರು, ದತ್ತಾರಾಮ ಭಟ್ಟ, ಮಯೂರ ಹರಿಕೇರಿ, ಗಜಾನನ ಸಾಂತೂರು, ಅರ್ಥಧಾರಿಗಳಾಗಿ ವಿ.ಉಮಾಕಾಂತ ಭಟ್ಟ‌ ಕೆರೇಕೈ, ವಿ.ಗಣಪತಿ ಸಂಕದಗುಂಡಿ, ಲಕ್ಷ್ಮೀಕಾಂತ‌ ಕೊಂಡದಕುಳಿ, ಮಂಗಳಾ ಟಿ.ಎಸ್. ಬೆಂಗಳೂರು. ಸುಜಾತ ದಂಟಕಲ್ ಭಾಗವಹಿಸುವರು.
ಜು.8ರಂದು ಗೋಕರ್ಣದ ಅಶೋಕೆಯ ಸೇವಾಸೌಧದಲ್ಲಿ ಮಧ್ಯಾಹ್ನ 1ರಿಂದ ಚಿತ್ರಕೂಟ ತಾಳಮದ್ದಲೆ ನಡೆಯಲಿದೆ. ಹಿಮ್ಮೇಳದಲ್ಲಿ ರಾಮಕೃಷ್ಣ ಹಿಲ್ಲೂರು, ಎನ್.ಜಿ.ಹೆಗಡೆ ಭಾಗವಹಿಸುವರು. ಅರ್ಥಧಾರಿಗಳಾಗಿ ಪವನ್ ಕಿರಣಕೆರೆ, ಜಿ.ವಿ.ಹೆಗಡೆ, ಶಂಕರ‌ ನೀಲ್ಕೋಡು, ಅಂಬಾಪ್ರಸಾದ್ ಪಾತಾಳ ಭಾಗವಹಿಸುವರು.

ಜು.9ರಂದು‌ ಮೂರೂರು ಕೋಣಾರೆ‌ ಮಹಾವಿಷ್ಣು ದೇವಸ್ಥಾನದಲ್ಲಿ ‌ಪಂಚವಟಿ ತಾಳಮದ್ದಳೆ ನಡೆಯಲಿದ್ದು, ಹಿಮ್ಮೇಳದಲ್ಲಿ ಸೃಜನ್ ಹೆಗಡೆ ಗುಂಡೂಮನೆ, ನೃಸಿಂಹ ಮುರೂರು ಭಾಗವಹಿಸುವರು.ಅರ್ಥಧಾರಿಗಳಾಗಿ ಡಾ.ಜಿ.ಎಲ್.ಹೆಗಡೆ, ಸವಿತಾ ಶಾಂತಾರಾಮ ಹಿರೇಮನೆ, ಸುಬ್ರಹ್ಮಣ್ಯ ಮೂರೂರು, ಇಡಗುಂಡಿ ಚಂದ್ರಕಲಾ ಭಟ್ಟ ಭಾಗವಹಿಸುವರು. 10,11ರಂದು ಕಿಷ್ಕಿಂದಾ ಹಾಗೂ ಕನಕ ಲಂಕಾ ಪ್ರಸಂಗ ಮುರ್ಡೇಶ್ವರದ ಆಚಾರ್ಯ ಸಭಾಂಗಣದಲ್ಲಿ ನಡೆಯಲಿದೆ. 10ಕ್ಕೆ ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಪರಮೇಶ್ವರ ಭಂಡಾರಿ, ಅರ್ಥಧಾರಿಗಳಾಗಿ ವಾಸುದೇವ ರಂಗಾ ಭಟ್ಟ, ಡಾ. ಜಿ.ಕೆ.ಹೆಗಡೆ, ರಾಮಚಂದ್ರ ಕೊಂಡದಕುಳಿ ಭಾಗವಹಿಸುವರು.

300x250 AD

11ರಂದು ಗೋಪಾಲಕೃಷ್ಣ ಜೋಗಿಮನೆ, ಪಿ.ಕೆ.ಹೆಗಡೆ ಹಿಮ್ಮೇಳದಲ್ಲಿ, ವಾಸುದೇವ ರಂಗಾ ಭಟ್ಟ, ರಾಮಚಂದ್ರ ಕೊಂಡದಕುಳಿ, ಸೀತಾರಾಮ ಚಂದು, ನಾರಾಯಣ ಯಾಜಿ ಅರ್ಥಧಾರಿಗಳಾಗಿ ಭಾಗವಹಿಸುವರು.

12ರಂದು ಮೇಲಿನ ಖರ್ವಾ ದೇವಸ್ಥಾನದಲ್ಲಿ ಸಾಕೇತ ತಾಳಮದ್ದಳೆ ನಡೆಯಲಿದ್ದು, ಸರ್ವೇಶ್ವರ‌ ಮುರೂರು, ಅನಂತ ಪಾಠಕ್ ಹಿಮ್ಮೇಳದಲ್ಲಿ, ಅಂಬಾಪ್ರಸಾದ ಪಾತಾಳ, ನಾರಾಯಣ ಯಾಜಿ, ಪ್ರಸಾದ ಭಟಕಳ, ವಿ.ಪ್ರಸನ್ನ ಮಾಗೋಡು ಭಾಗವಹಿಸುವರು.

13ರಂದು ಶಂಭುಲಿಂಗ ದೇವಸ್ಥಾನ ಹಡಿನಬಾಳದಲ್ಲಿ ತಮಸಾತೀರಾ ಪ್ರಸಂಗದಲ್ಲಿ ಕೊಳಗಿ, ಪರಮೇಶ್ವರ ಭಂಡಾರಿ ಹಿಮ್ಮೇಳದಲ್ಲಿ, ಅರ್ಥಧಾರಿಗಳಾಗಿ ವಿ.ಕೆರೇಕೈ, ಪ್ರಸಾದ ಭಟಕಳ, ಇಡಗುಂದಿ ಚಂದ್ರಕಲಾ ಭಟ್ಟ, ಶ್ರೀಧರ ಕಾಸರಕೋಡ ಭಾಗವಹಿಸಲಿದ್ದಾರೆ.
ಜು.15ರಂದು ಕರಿಕಾನ ಪರಮೇಶ್ವರಿ ದೇವಸ್ಥಾನದಲ್ಲಿ ಸರಯೂ ತೀರ ತಾಳಮದ್ದಲೆ ನಡೆಯಲಿದ್ದು, ಅಲ್ಲೇ‌ ಸಮಾರೋಪಗೊಳ್ಳಲಿದೆ. ಗೋಪಾಲಕೃಷ್ಣ ಜೋಗಿಮನೆ, ಪಿ.ಕೆ.ಹೆಗಡೆ, ಮಯೂರ ಹರಿಕೆರಿ ಹಿಮ್ಮೇಳದಲ್ಲಿ, ರಾಧಾಕೃಷ್ಣ ಕಲ್ಚಾರ್, ಜಿ.ಕೆ.ಹೆಗಡೆ, ಸುಬ್ರಹ್ಮಣ್ಯ‌ ಮುರೂರು ಅರ್ಥಧಾರಿಗಳಾಗಿ ಭಾಗವಹಿಸಲಿದ್ದಾರೆ.
ಪ್ರತಿ‌ ದಿನವೂ ಒಬ್ಬೊಬ್ಬ ಸಾಧಕರು ದೀಪ ಬೆಳಗಿಸಲಿದ್ದು, 12 ಜನ ಸಾಧಕರಿಗೆ ರಜತ ಗೌರವ ಸಮರ್ಪಣೆ ಕೂಡ ನಡೆಸಲಾಗುತ್ತದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಭಟ್ಟ, ಕಬ್ಬಿನಗದ್ದೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ರಾಮಾಯಣ ತಾಳಮದ್ದಲೆ ಯಲ್ಲಿ ಭಾಗವಹಿಸಿ ಪಾವನರಾಗಿ. ಕುಟುಂಬ ಸಹಿತ ಬಂದು ಸಮಗ್ರ ರಾಮಾಯಣವನ್ನು ಕೇಳಿ, ಅನುಸಂಧಾನ ಮಾಡಿ. ಮನನ ಮಾಡಿ, ಮಕ್ಕಳಿಗೂ ಮನನ ಮಾಡಿಸಿ. ಇದು ಶ್ರೇಷ್ಠ ಸಂಸ್ಕಾರ ನೀಡುತ್ತದೆ. ಮನೆಯಲ್ಲಿ ಶಾಂತಿ ನೆಲೆಸುತ್ತದೆ, ವಾಕ್ ಸಿದ್ಧಿ ಹಾಗು ಸಂಪದಭಿವೃದ್ಧಿ ಇದರ ಫಲ. ಮಳೆಯಿದ್ದರೂ ಆಲಸ್ಯ ಮಾಡದೇ ಶ್ರದ್ಧೆಯಿಂದ ಬನ್ನಿ, ಇದು ರಾಮಾಯಣದ ಶ್ರವಣ ಯಜ್ಞ ಕೃತಾರ್ಥರಾಗಿ.-ಎಸ್.ಜಿ.ಭಟ್ಟ, ಕಬ್ಬಿನಗದ್ದೆ
ಸಂಘಟಕರು.

Share This
300x250 AD
300x250 AD
300x250 AD
Back to top