Slide
Slide
Slide
previous arrow
next arrow

ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಲು ಆಗ್ರಹ: ಕರವೇಯಿಂದ ಮನವಿ

300x250 AD

ದಾಂಡೇಲಿ : ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ನಿಟ್ಟಿನಲ್ಲಿ ಸರ್ಕಾರ ಸಮಗ್ರ ಕಾಯ್ದೆ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾ) ಬಣದ ವತಿಯಿಂದ ತಹಶೀಲ್ದಾರರ‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಮುಖ್ಯಮಂತ್ರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆಯ ಅನ್ವಯ ರಾಜ್ಯ ಸರ್ಕಾರ ಕಠಿಣ ಕಾನೂನು ರೂಪಿಸಿ ಕನ್ನಡಿಗರಿಗೆ ಉದ್ಯೋಗಗಳಲ್ಲಿ ಮೀಸಲಾತಿ ಒದಗಿಸಬೇಕು. ಖಾಸಗಿ ಸಂಸ್ಥೆಗಳ ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳಲ್ಲಿ ಶೇ 100ರಷ್ಟು ಮೀಸಲಾತಿ, ಉಳಿದ ಹುದ್ದೆಗಳಲ್ಲಿ ಶೇ 80ರಷ್ಟು ಮೀಸಲಾತಿಯನ್ನು ಕನ್ನಡಗರಿಗೆ ನೀಡಬೇಕು.

ಡಾ.ಸರೋಜಿನಿ ಮಹಿಷಿ ಸಮಿತಿಯು ರಾಜ್ಯದಲ್ಲಿ ಉದ್ಯೋಗ ಮೀಸಲಾತಿಗೆ ಸಂಬಂಧಿಸಿದಂತೆ 1986ರಲ್ಲಿ ವರದಿ ಸಿದ್ಧಪಡಿಸಿ, 58 ಶಿಫಾರಸ್ಸುಗಳನ್ನು ಮಾಡಿತ್ತು. ಆದರೆ, ಈ ವರದಿ ಸಮರ್ಪಕವಾಗಿ ಜಾರಿಯಾಗಲೇ ಇಲ್ಲ. ಸರಕಾರ ಜಾರಿಗೊಳಿಸಿದ ಕೆಲ ಅಂಶಗಳನ್ನು ಖಾಸಗಿ ಸಂಸ್ಥೆಗಳು ಗಾಳಿಗೆ ತೂರಿ, ಹೊರರಾಜ್ಯದ ನೌಕರರಿಗೆ ಉದ್ಯೋಗ ನೀಡುತ್ತಿವೆ. ಇಂತಹ ಖಾಸಗಿ ಸಂಸ್ಥೆಗಳ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳಬೇಕು. ಕನ್ನಡಿಗರಿಗೆ ಉದ್ಯೋಗ ನೀಡದ ಸಂಸ್ಥೆಗಳ ಮಾನ್ಯತೆ ರದ್ದುಗೊಳಿಸಬೇಕು ಮತ್ತು ಅಂತಹ ಸಂಸ್ಥೆಗಳಿಗೆ ಭೂಮಿ ಹಂಚಿಕೆ ಮಾಡಿದ್ದರೆ ವಾಪಸ್ ಪಡೆಯಬೇಕು. ಸರ್ಕಾರದಿಂದ ಸವಲತ್ತುಗಳನ್ನು ನೀಡಿದ್ದರೆ ಹಿಂದಕ್ಕೆ ಪಡೆದು ದಂಡ ವಿಧಿಸಿ ಕ್ರಿಮಿನಲ್ ಮೊಕದ್ದೆಮೆ ಹೂಡಬೇಕು.  ಸರೋಜನಿ ಮಹಿಷಿ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

300x250 AD

ಈ ಸಂದರ್ಭದಲ್ಲಿ‌ಕರವೇ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷರಾದ ಅಶೋಕ.ಮಾನೆ, ಕರವೇ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ನೀಲಾ.ಮಾದರ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಮುಜೀಭಾ ಛಬ್ಬಿ, ಸಂಘಟನೆಯ ಪ್ರಮುಖರುಗಳಾದ ರಾಜೇಶ್ವರಿ ಬೇಂದ್ರೆ, ರವಿ ಮಾಳಿ, ಸೈಯದ್ ಸಮೀರ್, ಉಮೇಶ ಬಡಿಗೇರ. ಶಿವರಾಜ ಜೆರಕಲ್ ಮೆಹಬೂಬ್ ಶೇಖ್, ಶ್ಯಾಮ್ ಬೆಂಗಳೂರು, ಅಜಯ್ ಪಾಟನಕರ್, ಸಮೀರ್, ಮಂಜು ಶೀರೋಡ್ಕರ್, ರೇಣುಕಾ ಆಲೂರ್, ವಿಜಯಲಕ್ಷ್ಮಿ ಅಕ್ಕಿ, ಲೀಲಾವತಿ ಕೊಳಚಿ, ಈರಮ್ಮಾ ಉಳ್ಳಾಗಡ್ಡಿ, ಸಂಗೀತ ಅಂಬ್ರೆ, ಕಮಲಾ, ಅನಸೂಯಾ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top