Slide
Slide
Slide
previous arrow
next arrow

ಹಿರಿಯ ಸಹಕಾರಿ ಜಿ.ಎಲ್ ಹೆಗಡೆ ನಿಧನಕ್ಕೆ ಕಂಬನಿ

300x250 AD

ಶಿರಸಿ: ನಗರದ ಟಿಎಸ್‌ಎಸ್ ಸಂಸ್ಥೆಯ ಮಾಜಿ ಪ್ರಧಾನ ವ್ಯವಸ್ಥಾಪಕ, ಹಿರಿಯ ಸಹಕಾರಿ, ಇಲ್ಲಿನ ಸಹ್ಯಾದ್ರಿ ಕಾಲೋನಿ ನಿವಾಸಿ ಗಣಪತಿ ಲಕ್ಷ್ಮೀನಾರಾಯಣ ಹೆಗಡೆ (ಜಿ.ಎಲ್. ಹೆಗಡೆ-94) ವಯೋಸಹಜ ಕಾಯಿಲೆಯಿಂದ ಮಂಗಳವಾರ ನಿಧನರಾದರು.

ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಜಿ.ಎಲ್. ಹೆಗಡೆ ಅವರು ಶ್ರೀಪಾದ ಹೆಗಡೆ ಕಡವೆ, ಡಿ.ಡಿ. ವಿಶ್ವಾಮಿತ್ರರಂತಹ ಸಹಕಾರಿಗಳೊಂದಿಗೆ ಹಿರಿಯ ಕೆಲಸ ಮಾಡುತ್ತ ಟಿಎಸ್‌ಎಸ್‌ನಲ್ಲಿ ಸೇವೆ ಸಲ್ಲಿಸಿದ್ದರು. ನಂತರದಲ್ಲಿ 32 ವರ್ಷಗಳ ಸುದೀರ್ಘ ಅವಧಿ ಟಿಎಸ್‌ಎಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು. ಕಡವೆ ಹೆಗಡೆ ಅವರ ಆಶಯದಂತೆ ಟಿಎಸ್‌ಎಸ್ ಸಂಸ್ಥೆಯನ್ನು ಮುನ್ನಡೆಸಿದ ಕೀರ್ತಿ ಅವರದ್ದು. ಸಂಘದ ಅಭಿವೃದ್ಧಿಗೆ ನಿರಂತರ ಶ್ರಮಿಸಿದ್ದರು. ಜಿ.ಎಲ್. ಹೆಗಡೆ ಅವರ ಆಡಳಿತ ಅವಧಿಯಲ್ಲಿ ಆರ್ಥಿಕ ಶಿಸ್ತನ್ನು ತಂದಿದ್ದರು. ಸಂಸ್ಥೆಯ ಸದಸ್ಯರ ಏಳಿಗೆಗೆ ಸದಾ ಹಂಬಲಿಸುತ್ತಿದ್ದ ಅವರು ಕೆಲವರಿಗೆ ಕಠೋರವಾಗಿಯೂ ಕಾಣುತ್ತಿದ್ದರು. ಆದರೆ, ಅವರ ಕಠಿಣ ಮನಸ್ಸಿನ ಹಿಂದೆ ಸಂಸ್ಥೆಯ ಮತ್ತು ಸದಸ್ಯರ ಹಿತ ಪ್ರಮುಖವಾಗಿತ್ತು ಎನ್ನುವುದಾಗಿ ಅವರ ಒಡನಾಡಿಗಳು ನೆನಪಿಸಿಕೊಳ್ಳುತ್ತಾರೆ.

300x250 AD

ಟಿಎಸ್‌ಎಸ್ ಆಸ್ಪತ್ರೆಯಲ್ಲಿಯೂ ಕಾರ್ಯದರ್ಶಿಯಾಗಿ ಅವರೊಂದಿಗೆ ಸೇವೆ ನೀಡಿದ್ದರು. ಮೃತರಾಗುವವರೆಗೂ ಅವರು ಟ್ರಸ್ಟಿನ ಸದಸ್ಯರಾಗಿ ಮುಂದುವರೆದಿದ್ದರು. ಜಿ.ಎಲ್ ಹೆಗಡೆ ಅವರ ನಿಧನಕ್ಕೆ ಸಹಕಾರಿ ಕ್ಷೇತ್ರದ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

Share This
300x250 AD
300x250 AD
300x250 AD
Back to top