ಶಿರಸಿ: ಶಿರಸಿಯ ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್ ಶಿರಸಿ, ಲಿಯೋ ಕ್ಲಬ್ ಶಿರಸಿ, ಹಾಗೂ ಲಿಯೋ ಕ್ಲಬ್ ಶ್ರೀನಿಕೇತನದ 2024-25 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಅತ್ಯಂತ ಸಡಗರದಿಂದ ಜರುಗಿತು.
ಲಯನ್ಸ್ ಜಿಲ್ಲೆ 317ಬಿ ಯ ಎರಡನೇ ಉಪ ಗೌವರ್ನರ್ ಆಗಿ ಚುನಾಯಿತರಾಗಿರುವ ಎಂಜೆಎಫ್ ಲಯನ್ ರಾಜಶೇಖರ ಹಿರೇಮಠ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಲಯನ್ಸ್ ಕ್ಲಬ್ ಶಿರಸಿಯ 2024-25 ನೇ ಸಾಲಿನ ಅಧ್ಯಕ್ಷರಾಗಿ ಲಯನ್ ಅಶ್ವಥ್ ಹೆಗಡೆ, ಕಾರ್ಯದರ್ಶಿಯಾಗಿ ಎಂಜೆಎಫ್ ಲಯನ್ ವಿನಾಯಕ ಭಾಗ್ವತ್, ಹಾಗೂ ಖಜಾಂಚಿಯಾಗಿ ಲಯನ್ ಸಿಎ ವೇಣುಗೋಪಾಲ ಹೆಗಡೆ ಅಧಿಕಾರವನ್ನು ಸ್ವೀಕರಿಸಿದರು. ಲಿಯೋ ಕ್ಲಬ್ ಶಿರಸಿಯ 2024-25 ನೇ ಸಾಲಿನ ಅಧ್ಯಕ್ಷರಾಗಿ ಲಿಯೋ ಸಮೀಕ್ಷಾ ರಾಯ್ಕರ್, ಕಾರ್ಯದರ್ಶಿಯಾಗಿ ಲಿಯೋ ವನ್ಯಾ ಹೆಗಡೆ, ಹಾಗೂ ಖಜಾಂಚಿಯಾಗಿ ಲಿಯೋ ಅನಘಾ ಹೆಗಡೆ ಪ್ರಮಾಣವಚನ ಸ್ವೀಕರಿಸಿದರು. ಲಿಯೋ ಕ್ಲಬ್ ಶ್ರೀನಿಕೇತನದ 2024-25 ನೇ ಸಾಲಿನ ಅಧ್ಯಕ್ಷರಾಗಿ ಲಿಯೋ ಭುವನ್ ಹೆಗಡೆ, ಕಾರ್ಯದರ್ಶಿಯಾಗಿ ಲಿಯೋ ಧ್ರುತಿ ಪಟೇಲ್, ಹಾಗೂ ಖಜಾಂಚಿಯಾಗಿ ಲಿಯೋ ಯುಕ್ತಾ ಹನಗೋಡಿಮಠ್ ಪ್ರಮಾಣವಚನ ಸ್ವೀಕರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಎಂಜೆಎಫ್ ಲಯನ್ ಡಾ॥ ಅಶೊಕ ಹೆಗಡೆ ಮಾತನಾಡಿ ಸಂಸ್ಥೆಯ ಕಳೆದ ವರ್ಷದ ಸಾಧನೆಗಳನ್ನು ವಿವರಿಸಿದರು. ನೂತನ ಅಧ್ಯಕ್ಷರಾದ ಲಯನ್ ಅಶ್ವಥ್ ಹೆಗಡೆ ಮಾತನಾಡಿ ಸಂಸ್ಥೆಯ ಸಂಸ್ಥಾಪಕರನ್ನು ಸ್ಮರಿಸಿ ಅವರು ಹಾಕಿಕೊಟ್ಟ ಮೈಲಿಗಲ್ಲುಗಳ ನಿರ್ವಹಣೆಯ ಜೊತೆಗೆ ಮುಂದಿನ ಕಾರ್ಯ ಚಟುವಟಿಕೆಗಳ ಕುರಿತು ತಿಳಿಸಿದರು. ಇದೇ ಸಂದರ್ಭದಲ್ಲಿ 7 ಜನ ಗಣ್ಯರು ಸಂಸ್ಥೆಗೆ ನೂತನವಾಗಿ ಸೇರ್ಪಡೆಗೊಂಡರು.
ಕಳೆದ ವರ್ಷ ಸಮಾಜಸೇವೆಯಲ್ಲಿ ಗಮನಾರ್ಹ ಸಾಧನೆಗೈದ ಸಂಸ್ಥೆಯ ಕೆಲವು ಸದಸ್ಯರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಶಿರಸಿ, IMA ಶಿರಸಿ, ಬಾರ್ ಅಸೋಸಿಯೇಶನ್ ಶಿರಸಿ, ವನಿತಾ ಸಮಾಜ ಶಿರಸಿ, ಲಯನ್ಸ್ ಕ್ಲಬ್ ಬನವಾಸಿ, ಲಿಯೋಲಯನ್ಸ್ ಕ್ಲಬ್ ಶಿರಸಿ ಸಹ್ಯಾದ್ರಿ, ಮುಂತಾದ ಹಲವು ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ನಿಕಟಪೂರ್ವ ಕಾರ್ಯದರ್ಶಿ ಲಯನ್ ಜ್ಯೋತಿ ಅಶ್ವಥ್ ಹೆಗಡೆ ಸ್ವಾಗತಿದರು. ನೂತನ ಕಾರ್ಯದರ್ಶಿ ಎಂಜೆಎಫ್ ಲಯನ್ ವಿನಾಯಕ ಭಾಗ್ವತ್ ವಂದಿಸಿದರು. ಲಯನ್ ಅಶ್ವಥ್ ಹೆಗಡೆ ಮುಳಖಂಡ ಹಾಗೂ ಲಯನ್ ಪ್ರತಿಭಾ ಹೆಗಡೆ ಕಾರ್ಯಕ್ರಮವನ್ನು ನಿರೂಪಿಸಿದರು.