Slide
Slide
Slide
previous arrow
next arrow

ಅಧಿಕಾರಿಗಳು ಜನರ ಕೆಲಸಕ್ಕೆ ಮೊದಲ ಆದ್ಯತೆ ನೀಡಬೇಕು; ಶಾಸಕ ಭೀಮಣ್ಣ

300x250 AD

ಜನಸ್ಪಂದನ ಕಾರ್ಯಕ್ರಮದಲ್ಲಿ ಜನರ ಮಾತಿಗೆ ಕಿವಿಯಾದ ಶಾಸಕರು | ನಾನಾ ಥರಹದ ಸಮಸ್ಯೆ, ದೂರಿತ್ತ ಜನರು

ಶಿರಸಿ: ಸಮಾಜದಲ್ಲಿರುವ ಜನರಿಗೆ ಯಾವುದೇ ವಿಷಯದಲ್ಲಿಯೂ ತೊಂದರೆಯಾಗಕೂಡದು. ತೊಂದರೆ ಕೊಡುವವರು ಯಾರೇ ಆದರೂ ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಶಾಸಕ ಭೀಮಣ್ಣ ಅಧಿಕಾರಿಗಳಿಗೆ ದಿಟ್ಟ ನಿರ್ದೇಶನ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕಾ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿರಸಿ ತಾಲೂಕಿನಲ್ಲಿರುವ ಸಮಸ್ಯೆ ಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಈ ಜನಸ್ಪಂದನ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ. ಜನಸ್ಪಂದನ ಕಾರ್ಯಕ್ರಮದಲ್ಲಿ ಬಂದ ಅರ್ಜಿಗಳನ್ನು ಯಾವೋಬ್ಬ ಅಧಿಕಾರಿಯೂ ಉದಾಸೀನ ಮಾಡುವಂತಿಲ್ಲ. ಅಧಿಕಾರಿಗಳು ಎಂದ ಮಾತ್ರಕ್ಕೆ ನಾವು ಮಾಡಿದ್ದೇ ಸರಿ ಎಂಬ ಗರ್ವ ಇದ್ದರೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಸಾಧ್ಯವಿಲ್ಲ ಎಂದರು.

ನಗರದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ನಗರಸಭೆಗೆ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಶಿರಸಿ ನಗರದಲ್ಲಿ ಫಾರಂ 3 ಸಮಸ್ಯೆ ಇದೆ. ಈ ಬಗ್ಗೆ ಮೊದಲ ಸದನದಲ್ಲೇ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಸಿಟಿ ಸರ್ವೆ ಯನ್ನು ತರಬೇಕು ಎಂದ ಬಗ್ಗೆ ಸಭೆಯನ್ನು ನಡೆಸಲಾಗಿದೆ. ನಗರಸಭೆ ವತಿಯಿಂದ ಹಣ ಪಾವತಿ ಮಾಡಬೇಕಾಗುತ್ತದೆ. ಆ ವಿಚಾರದಲ್ಲಿ ಈ ಸರ್ವೆ ನಿಂತಿದೆ. 31 ವಾರ್ಡ್ ಗಳನ್ನು ಸಿಟಿ ಸರ್ವೆ ವ್ಯಾಪ್ತಿಗೆ ತರುತ್ತೇವೆ ಎಂದರು.

ನ್ಯಾಯದ ಪರವಾಗಿ ಕೆಲಸ ಮಾಡಿದ್ದರೆ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸಾರ್ವಜನಿಕರಿಗೆ ತೊಂದರೆ ಕೊಡುವ ಯಾವುದೇ ವ್ಯಕ್ತಿ ಯಾದರೂ ಎಷ್ಟೇ ಪ್ರಭಾವಿ ವ್ಯಕ್ತಿಯಾದರು ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆ ಗೆ ಖಡಕ್ ಆದೇಶ ನೀಡಿದರು. ಅಂಗವಿಕಲ ವ್ಯಕ್ತಿ ಯೋರ್ವ ತನ್ನ ಸಮಸ್ಯೆ ಯನ್ನು ಹೇಳಿಕೊಳ್ಳಲು ಬಂದಾಗ ಇದನ್ನು ಗಮನಿಸಿದ ಶಾಸಕರು ಸಭೆಯಿಂದ ಇಳಿದು ಅಂಗವಿಕಲನ ಬಳಿಯೇ ಬಂದು ಸಮಸ್ಯೆ ಆಲಿಸಿದರು. ಶಾಸಕರ ಅನುದಾನದಲ್ಲಿ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.

300x250 AD

ಶಿರಸಿಯಲ್ಲಿ 25ಸಾವಿರಕ್ಕೂ ಅಧಿಕ ಮನೆಗಳಿಗೆ ಮಾಲೀಕತ್ವ ಇಲ್ಲ. ಹಾಗಾಗಿ ಸರ್ಕಾರ ಈ ಬಗ್ಗೆ ಗಮನಹರಿಸಬೇಕು.‌ ನಮಗೆ ಸಾಲ ಸೌಲಭ್ಯ ಸಿಗುತ್ತಿಲ್ಲ ಎಂದು ಶಿರಸಿಯ ಜಿ.ಎನ್ ಭಟ್ ಶಾಸಕರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಭೀಮಣ್ಣ ನಾಯ್ಕ ನಗರದ 31ವಾರ್ಡ್ ಗಳನ್ನೂ ಸಿಟಿ ಸರ್ವೆ ವ್ಯಾಪ್ತಿಗೆ ತರಲು ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.

ನಗರಸಭೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಮಗ ಮೃತಪಟ್ಟಿದ್ದಾನೆ. ಆದರೆ ಅಲ್ಲಿ ಆತ ಖಾಯಂ ನೌಕರನಾಗಿರಲಿಲ್ಲ. ನಮಗೆ ಮನೆ, ಆದಾಯವಿಲ್ಲ. ನನ್ನ ಸೊಸೆಗೆ ಒಂದು ಕೆಲಸ ಕೊಟ್ಟು ನಮಗೆ ಬದುಕಲು ದಾರಿ ತೋರಿಸಬೇಕು ಎಂದು ಶಾಸಕರ ಎದುರು ಕಸ್ತೂರಬಾ ನಗರದ ವೃದ್ದೆಯೋರ್ವರು ತಮ್ಮ ಅಳಲನ್ನು ತೋಡಿಕೊಂಡರು. ವೃದ್ಧೆಯ ಸಮಸ್ಯೆಗೆ ಪರಿಪಾರ ಕಲ್ಪಿಸುವ ಭರವಸೆಯನ್ನು ಶಾಸಕ ಭೀಮಣ್ಣ ನೀಡಿದರು.

ದೇವನಹಳ್ಳಿ ಭಾಗದಲ್ಲಿ ಅತಿಕ್ರಮಣ ಜಾಗದಲ್ಲಿ ನಿರ್ಮಿಸಿಕೊಂಡ ಬಾವಿಗಳಿಗೆ ಕೃಷಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ದೇವನಹಳ್ಳಿ ಭಾಗದ ಜನರು ಮನವಿ ಸಲ್ಲಿಸಿದರು. ಮಾರಿಗುಡಿ ರಸ್ತೆಯಲ್ಲಿ ಸದಾಕಾಲ ಜನಜಂಗುಳಿ ಯಿಂದ ಕೂಡಿರುತ್ತದೆ. ಪಾದಾಚಾರಿಗಳು ಓಡಾಡಲು ಆಗುತ್ತಿಲ್ಲ. ಈ ರಸ್ತೆಯನ್ನು ಏಕಮುಖ ಸಂಚಾರ ವ್ಯವಸ್ಥೆ ಮಾಡಬೇಕು . ದೇವಸ್ಥಾನದ ಮುಂಭಾಗದಲ್ಲಿ ಬಸ್ ಗಳನ್ನು ನಿಲ್ಲಿಸುತ್ತಾರೆ ಎಂದು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಭೀಮಣ್ಣ ನಾಯ್ಕ, ನಗರಸಭೆ ಹಾಗೂ ಪೊಲೀಸ್ ಇಲಾಖೆ ನಗರದಲ್ಲಿ ಎಲ್ಲೆಲ್ಲಿ ಏಕಮುಖ ಸಂಚಾರ ಮಾಡಬಹುದು ಎಂದು ಚಿಂತನೆ ನಡೆಸಬೇಕು. ದೇವಸ್ಥಾನದ ಮುಂಭಾಗದಲ್ಲಿ ಬಸ್ ಗಳನ್ನು ನಿಲ್ಲಿಸಿದಂತೆ ನೋಡಿಕೊಳ್ಳಬೇಕು ಎಂದರು.

ಶಾಲಾ ಮಕ್ಕಳು, ವೃದ್ಧರು ಹೆಚ್ಚು ಓಡಾಡುವ ಮುರೇಗಾರ್ ಫಾಲ್ಸ್ ಗೆ ಹೋಗುವ ರಸ್ತೆ ಸುಧಾರಣೆ ಆಗಬೇಕು. ಅಂಗವಿಕಲರೂ ಸಹ ಊರಿನಲ್ಲಿದ್ದಾರೆ ಎಂದು ಮುರೇಗಾರಿನ ಜನರು ಶಾಸಕರಿಗೆ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕ ಭೀಮಣ್ಣ ಇನ್ನು 15 ದಿನದೊಳಗೆ ಸಾರ್ವಜನಿಕ ಓಡಾಟಕ್ಕೆ ಸುಲಭವಾಗುವಂತೆ ರಸ್ತೆ ರಿಪೇರಿ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

Share This
300x250 AD
300x250 AD
300x250 AD
Back to top