Slide
Slide
Slide
previous arrow
next arrow

ತೈಲ ಬೆಲೆ ಹೆಚ್ಚಳ: ಸಿದ್ದಾಪುರದಲ್ಲಿ ಪ್ರತಿಭಟನೆ

300x250 AD

ಸಿದ್ದಾಪುರ: ತೈಲ ಬೆಲೆಯನ್ನು ಹೆಚ್ಚಿಸಿರುವ ರಾಜ್ಯ ಸರಕಾರದ ವಿರುದ್ಧ ಗುರುವಾರ ಭಾರತೀಯ ಜನತಾ ಪಾರ್ಟಿ ಹಾಗೂ ಪ್ರಯಾಣಿಕರ ಮತ್ತು ಲಗೇಜ್ ಆಟೋ ಚಾಲಕ,ಮಾಲಕ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಸಭೆ ಹಾಗೂ ರಸ್ತೆ ತಡೆ ನಡೆಯಿತು.

ಪಟ್ಟಣದ ರಾಮಕೃಷ್ಣ ಹೆಗಡೆ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ.ಮಾತನಾಡಿ ರಾಜ್ಯದ ಕಾಂಗ್ರೆಸ್ ಸರಕಾರ ಪೆಟ್ರೋಲ್,ಡೀಸೆಲ್ ಮಾತ್ರವಲ್ಲದೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಯನ್ನೂ ಹೆಚ್ಚಿಸಿದೆ. ರೈತರಿಗೆ ಅಗತ್ಯವಾದ ಬಿತ್ತನೆ ಬೀಜದ ಬೆಲೆಯನ್ನು ದುಪ್ಪಟ್ಟು ಹೆಚ್ಚಿಸಿದೆ. ರಾಜ್ಯದ ಭೃಷ್ಟ ಸರಕಾರ ತೊಲಗಬೇಕು ಎಂದರು.
ಮಂಡಲ ನಿಕಟಪೂರ್ವ ಅಧ್ಯಕ್ಷ ಮಾರುತಿ ನಾಯ್ಕ ಹೊಸೂರು ಮಾತನಾಡಿ ಹಿಂದಿನ ಬಿಜೆಪಿ ಸರಕಾರದ ಮೇಲೆ ಆರೋಪ ಹೊರಿಸುತ್ತಿದ್ದ ಕಾಂಗ್ರೆಸ್ ಈಗ ತನ್ನ ಸರಕಾರದ ಮೂಲಕ ಹಗಲು ದರೋಡೆ ನಡೆಸುತ್ತಿದೆ. ನುಡಿದಂತೆ ನಡೆದಿದ್ದೇವೆ ಎನ್ನುವವರು ಈಗ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ ಮಾತನಾಡಿ ತನ್ನ ಆಡಳಿತದ ಮೂಲಕ ಸಮಾಜದಲ್ಲಿ ಅರಾಜಕತೆ ಹುಟ್ಟಿಸಿರುವ ಕಾಂಗ್ರೆಸ್ ಸರಕಾರ ರಾಜ್ಯವನ್ನು ದಿವಾಳಿ ಮಾಡುವ ಯೋಜನೆಗಳನ್ನು ತಂದಿದೆ. ಮಾತ್ರವಲ್ಲ ಬೆಲೆ ಏರಿಕೆಯ ಮೂಲಕ ಜನಸಾಮಾನ್ಯರಿಗೆ ಸಂಕಷ್ಠ ತಂದಿದೆ. ಈ ಸರಕಾರದ ವಿರುದ್ಧ ತೀವ್ರವಾದ ಹೋರಾಟ ನಡೆಸಲಾಗುವದು ಎಂದರು.
ಪ್ರಮುಖರಾದ ಡಾ.ಶಶಿಭೂಷಣ ಹೆಗಡೆ ಮಾತನಾಡಿ ಬೆಲೆ ಏರಿಕೆಯ ಮೂಲಕ ಹಣದುಬ್ಬರ ಹೆಚ್ಚಾಗುವ ದುಷ್ಪರಿಣಾಮ ರಾಜ್ಯ ಸರಕಾರದ ಯೋಜನೆಗಳಿಂದಾಗುತ್ತಿದೆ. ಒಂದು ಕಡೆ ಬಿಟ್ಟಿ ಭಾಗ್ಯ ,ಇನ್ನೊಂದೆಡೆ ಜನರ ತಲೆ ಒಡೆಯುವ ಕಾರ್ಯ ಈ ಸರಕಾರದಿಂದ ಆಗುತ್ತಿದೆ.ಈ ಕೂಡಲೇ ಬೆಲೆ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

300x250 AD

ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಕೆ.ಮೇಸ್ತ, ತೋಟಪ್ಪ ನಾಯ್ಕ, ಪ್ರಮುಖರಾದ ಗುರುರಾಜ ಶಾನಭಾಗ, ಕೃಷ್ಣಮೂರ್ತಿ ಕಡಕೇರಿ, ಸುರೇಶ ಬಾಲಿಕೊಪ್ಪ.ನಂದ ಬರ‍್ಕರ, ಜೆಡಿಎಸ್ ತಾಲೂಕಾಧ್ಯಕ್ಷ ಸತೀಶ ಹೆಗಡೆ, ಪದಾಧಿಕಾರಿ ಶ್ರೀಧರ ಕೊಂಡ್ಲಿ ಹಾಗೂ ಪ್ರಯಾಣಿಕರ ಮತ್ತು ಲಗೇಜ್ ಆಟೋ ಚಾಲಕ,ಮಾಲಕ ಸಂಘದವರು ಮುಂತಾಗಿ ಹಲವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವೃತ್ತದ ಮಧ್ಯಭಾಗದಲ್ಲಿ ನಿಂತ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು.

Share This
300x250 AD
300x250 AD
300x250 AD
Back to top