ಜೋಯಿಡಾ:ತಾಲೂಕಾ ಕೇಂದ್ರದ ಮನೆಗಳಿಗೆ ಜಲಜೀವನ ಯೋಜನೆಯಡಿ ಮಂಜೂರಾದ ಕಾಮಗಾರಿಯನ್ನು ಮಾಡಲು ಮೊರಾರ್ಜಿ ಶಾಲೆಯ ಹತ್ತಿರ ಹೋಗುವ ಕಾಂಕ್ರೀಟ್ ರಸ್ತೆಯ ಮಧ್ಯೆ ಪೈಪ್ ಲೈನ್ ಹಾಕಿದ್ದು,ಮಳೆಗಾಲ ಆರಂಭವಾದ ಕಾರಣ ರಸ್ತೆಯಲ್ಲಿ ನೀರು ನಿಂತು ಕೆಸರಾಗಿ ವಾಹನ ಸವಾರರಿಗೆ,ಶಾಲಾ ಮಕ್ಕಳಿಗೆ ಸಂಚರಿಸಲು ತೀವ್ರ ತೊಂದರೆಯಾಗಿದೆ. ಜನವಸತಿ ಪ್ರದೇಶಗಳಲ್ಲಿ ಬೇಸಿಗೆ ಕಾಲದಲ್ಲಿ ಕಾಮಗಾರಿ ಮುಗಿಸಿದ್ದರೆ, ಮಳೆಗಾಲದಲ್ಲಿ ಈ ತರಹದ ಅಧ್ವಾನ ಆಗುತ್ತಿರಲಿಲ್ಲ.ಟೌನ್ ಶಿಪ್ ಪ್ರದೇಶದಲ್ಲಿ ಸದರಿ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲಾಗಿದ್ದು,ಲಕ್ಷಾಂತರ ರೂಪಾಯಿ ಹಣ ವ್ಯಯವಾಗಿದ್ದು,ಈಗ ಮತ್ತೊಮ್ಮೆ ರಸ್ತೆ ಸರಿಪಡಿಸಬೇಕಾದರೆ ಮತ್ತೇ ಹಣ ಉಪಯೋಗಿಸಬೇಕಾಗುತ್ತದೆ.
ಕಾರಣ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು,ಗುತ್ತಿಗೆದಾರರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ವಾಹನ ಸವಾರರಿಗೆ,ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮಾದ್ಯಮದ ಮೂಲಕ ಗ್ರಾಮಸ್ಥರು ಆಗ್ರಹಿಸಿದ್ದಾರೆ.