Slide
Slide
Slide
previous arrow
next arrow

ಸೇನೆಯಲ್ಲಿ ಸೇವೆ ಸಲ್ಲಿಸಿ ಮರಳಿದ ಸೈನಿಕನಿಗೆ ಗೌರವ ಸನ್ಮಾನ

300x250 AD

ದಾಂಡೇಲಿ : ಕಳೆದ 22 ವರ್ಷಗಳಿಂದ ಭಾರತೀಯ ಸೈನ್ಯದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಮರಳಿ ತಮ್ಮೂರಿಗೆ ಮರಳಿದ ಬಾಳು ಅಶೋಕ್ ಪಾಟೀಲ್ ಅವರಿಗೆ ದಾಂಡೇಲಿ ನಗರದ ಸಮೀಪದಲ್ಲಿರುವ ಕೋಗಿಲಬನದಲ್ಲಿ ಗೌರವಪೂರ್ವಕವಾಗಿ ಸ್ವಾಗತಿಸಿ, ಸನ್ಮಾನಿಸಲಾಯಿತು.

ಬಾಳು ಅಶೋಕ್ ಪಾಟೀಲ್ ಕೋಗಿಲಬನ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅದ್ದೂರಿ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ಆನಂತರ ಕೋಗಿಲಬನ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷರಾದ ಅಶೋಕ್ ನಾಯಕ್ ಗ್ರಾಮ ಪಂಚಾಯಿತಿಯ ಸದಸ್ಯರಾದ ರಮೇಶ್ ನಾಯ್ಕ ಸೇರಿದಂತೆ ಗ್ರಾಮದ ಗಣ್ಯರು ಸನ್ಮಾನಿಸಿ ಬಾಳು ಅಶೋಕ್ ಪಾಟೀಲ್ ಅವರ ದೇಶ ಸೇವೆಯನ್ನು ವಿಶೇಷವಾಗಿ ಸ್ಮರಿಸಿಕೊಂಡರು.

300x250 AD

ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top