ಶಿರಸಿ: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಅತ್ಯುನ್ನತ ಠೇವಣಿ ದರಗಳನ್ಮು ಪರಿಚಯಿಸುತ್ತಿದ್ದು, 666 ದಿನಗಳ ಫಿಕ್ಸೆಡ್ ಡೆಪಾಸಿಟ್ ಅನ್ನು ಪ್ರಾರಂಭಿಸಿದೆ. ಈ ಯೋಜನೆ (80 ವರ್ಷ ಮೇಲ್ಪಟ್ಟು) ಸೂಪರ್ ಹಿರಿಯ ನಾಗರೀಕರಿಗೆ ಶೇ. 7.95ರ ವರೆಗೆ ಬಡ್ಡಿ ದರವಿದ್ದು, 666 ದಿನಗಳವರೆಗೆ 2 ಕೋಟಿ ರೂ. ಗಿಂತ ಕಡಿಮೆ ಠೇವಣಿ ಮೊತ್ತಕ್ಕೆ ಈ ಬಡ್ಡಿ ದೊರೆಯುತ್ತದೆ. ಗ್ರಾಹಕರು ಮತ್ತು ಸಾರ್ವಜನಿಕರು 666 ದಿನಗಳ ಫಿಕ್ಸೆಡ್ ಡೆಪಾಸಿಟ್ ಅನ್ನು ತೆರೆಯುವ ಮೂಲಕ ಈ ಹೂಡಿಕೆ ಅವಕಾಶದ ಲಾಭ ಪಡೆಯಬಹುದು. ಇದು ಸ್ಥಿರ ಠೇವಣಿಗಳ ಮೇಲೆ ಅತ್ಯಧಿಕ ಲಾಭ ನೀಡುತ್ತದೆ. ಈ ಯೋಜನೆ ಹಿರಿಯ ನಾಗರಿಕರಿಗೆ (60 ರಿಂದ 79 ವರ್ಷದೊಳಗೆ) ಶೇ. 7.80 ಬಡ್ಡಿ ಇದೆ.
ಈ ಯೋಜನೆ ಜೂನ್ 1ರಿಂದ ಜಾರಿಗೆ ಬಂದಿದ್ದು, ಶಿರಸಿಯ ಬ್ಯಾಂಕ್ ಆಫ್ ಇಂಡಿಯಾ ಟಿ.ಎಸ್.ಎಸ್ ರೋಡ್ ಶಾಖೆಗೆ ಭೇಟಿ ನೀಡಬಹುದು ಎಂದು ಶಿರಸಿ ಶಾಖೆಯ ವ್ಯವಸ್ಥಾಪಕರಾದ ಸಂಪತ್ ಕುಮಾರ ಗಾಣಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.