Slide
Slide
Slide
previous arrow
next arrow

ಉಚಿತ ಯೋಗ ಶಿಕ್ಷಣ ತರಬೇತಿಗೆ ಚಾಲನೆ

300x250 AD

ಶಿರಸಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ನೂತನ ಶಾಖೆ ಹಾಗೂ 48 ದಿನಗಳ ಉಚಿತ ಯೋಗ ಶಿಕ್ಷಣ ತರಗತಿಯನ್ನು ಶಿರಸಿಯ ನೆಮ್ಮದಿ ರಂಗಧಾಮದಲ್ಲಿ ಉದ್ಘಾಟಿಸಲಾಯಿತು.

ನಗರದ ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಶರೀರ, ಮನಸ್ಸು ಮತ್ತು ಉಸಿರನ್ನು ಜೋಡಿಸುವುದೇ ಯೋಗ. ಆಧುನಿಕತೆಯ ವ್ಯಾಮೋಹಕ್ಕೆ ಒಳಗಾಗಿ ರಾಸಾಯನಿಕಯುಕ್ತ ಆಹಾರವನ್ನು ಸೇವಿಸುತ್ತಾ ನಮ್ಮ ಆರೋಗ್ಯವನ್ನು ಕೆಡಿಸಿಕೊಂಡು ರೋಗಿಗಳಾಗುತ್ತಿದ್ದೇವೆ. ಭಾರತದ ಸನಾತನ ಸಂಸ್ಕೃತಿ, ಋಷಿ ಪರಂಪರೆಯನ್ನು ಅಳವಡಿಸಿಕೊಂಡು ಬ್ರಾಹ್ಮಿ ಮಹೂರ್ತದಲ್ಲಿ ಯೋಗವನ್ನು ಮಾಡುತ್ತಾ ದೇಹ ಉಸಿರು ಮತ್ತು ಮನಸ್ಸು ಜೋಡಿಸಿಕೊಂಡು ಸದೃಢ ಶರೀರವನ್ನು ಹೊಂದಿ ಸ್ವಸ್ಥ ಸಮಾಜವನ್ನು ನಿರ್ಮಾಣಕ್ಕಾಗಿ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಾರಿಕಾಂಬಾ ಶಾಖೆಯ ಯೋಗ ಬಂಧು ಸುಧಾ ವಹಿಸಿದ್ದರು. ಅವರು ಮಾತನಾಡಿ ಸಮಿತಿಯು ನೀಡುತ್ತಿರುವ ಸಾಮಾಜಿಕ, ದೈಹಿಕ, ಮಾನಸಿಕ, ಕೌಟುಂಬಿಕ ಹಾಗೂ ಆದ್ಯಾತ್ಮಿಕ ಎಂಬ ಪಂಚಮುಖಿ ಶಿಕ್ಷಣದ ಪರಿಚಯ ನೀಡಿದರು.

ಸಂತೋಷ್ ಪ್ರಾಸ್ತಾವಿಕವಾಗಿ ಮಾತನಾಡಿ ಎಸ್. ಪಿ.ವೈ.ಎಸ್.ಎಸ್‌. ಸಮಿತಿಯ ಪರಿಚಯ ಮಾಡಿದರು. ಸಂಸ್ಕಾರ ಸಂಘಟನೆ ಸೇವೆಯೆಂಬ ಮೂಲ ಧ್ಯೇಯವನ್ನು ಆಧಾರವಾಗಿರಿಸಿಕೊಂಡು 1980 ರಲ್ಲಿ ಮೂಲಶಿಲ್ಪಿ ಆ.ರ. ರಾಮಸ್ವಾಮಿ ನೇತೃತ್ವದಲ್ಲಿ ಎಸ್.ಪಿ.ವೈ.ಎಸ್.ಎಸ್. ಸಮಿತಿ ಪ್ರಾರಂಭವಾಯಿತು. ಯೋಗ ಮಾರ್ಗದ ಮೂಲಕ ಪ್ರತೀ ಮಾನವನ ದಿವ್ಯತೆಯನ್ನು ಕ, ಪರಿಚಯಿಸಿ ಸಂಸ್ಕಾರಯುತ ಮಾದರಿ ಜೀವನ ಶೈಲಿಯನ್ನು ರೂಪಿಸಿ ಸಂಘಟನೆಯಿಂದ ಬಲಗೊಳಿಸಿ ಯೋಗಪಥದಲ್ಲಿ ಮುನ್ನಡೆದು ಬಂದ ಸಮಿತಿಯ ಬಗ್ಗೆ ತಿಳಿಸಿದರು.

300x250 AD

ಅಭ್ಯಾಗತರಾಗಿ ಉಪಸ್ಥಿತರಿದ್ದ ಸೋಮಪ್ರಕಾಶ್‌ ಶೇಟ್ ಮಾತನಾಡಿ, ಯೋಗದ ಜೊತೆಗೆ ರಕ್ತದಾನ, ನೇತ್ರದಾನದಂತಹ ಮಹಾಕಾರ್ಯದಲ್ಲಿ ಕೈ ಜೋಡಿಸುವಂತೆ ಕರೆ ನೀಡಿದರು. ವಿ. ಪಿ.ಹೆಗಡೆ ಅವರು ಮಾತನಾಡಿ, ನೂತನ ಯೋಗ ಶಾಖೆಗೆ ಶುಭ ಹಾರೈಸಿದರು.

ಮಾರಿಕಾಂಬಾ ಶಾಖೆಯ ಯೋಗಬಂಧು ವೀಣಾ ಸ್ವಾಗತಿಸಿದರು. ಗಿರಿಜಾ ವಂದಿಸಿದರು. ಶಿಕ್ಷಕರಾದ ನೀನಾ ಹೊಸಯೋಗ ಬಂಧುಗಳಿಗೆ ಸೂಚನೆಗಳನ್ನು ನೀಡಿದರು. ಶಿಕ್ಷಕರಾದ ರೇಣುಕಾ ಕಾರ್ಯಕ್ರಮವನ್ನು ನಿರೂಪಿಸಿದರು.

Share This
300x250 AD
300x250 AD
300x250 AD
Back to top