Slide
Slide
Slide
previous arrow
next arrow

ನಾವು ಪ್ರತಿಯೊಬ್ಬರಿಂದಲೂ ಋಣಭಾರ ಹೊಂದುತ್ತೇವೆ: ವಿಜಯ ಹೆಗಡೆ

300x250 AD

ಸಿದ್ದಾಪುರ: ಜೀವ ಇರುವ ಪ್ರತಿಯೊಬ್ಬ ಮನುಷ್ಯರೂ, ಪ್ರಾಣಿ-ಪಕ್ಷಿ-ಗಿಡಮರಗಳೂ ಪರಾವಲಂಬಿಗಳು. ನಾವು ತಂದೆ, ತಾಯಿ, ಸಮಾಜ, ಪ್ರಕೃತಿ, ಗುರುಗಳಿಂದ ಋಣ ಭಾರ ಹೊಂದುತ್ತೇವೆ. ನಾವು ಪಡೆದಿದ್ದರಲ್ಲಿ ಕೆಲವಷ್ಟನ್ನಾದರೂ ಸಮಾಜಕ್ಕೆ ಮರಳಿಸಬೇಕು ಎಂದು ಇಲ್ಲಿಯ ಶಂಕರಮಠದ ಧರ್ಮಾಧಿಕಾರಿಗಳು, ವಿದ್ಯಾಪೋಷಕದ ಪ್ರಮುಖರೂ ಆದ ದೊಡ್ಮನೆ ವಿಜಯ ಹೆಗಡೆ ಹೇಳಿದ್ದಾರೆ.

ಅವರು ಶಂಕರಮಠದಲ್ಲಿ ವಿದ್ಯಾರ್ಥಿಗಳಿಗಾಗಿ ಸಂಘಟಿಸಿದ್ದ “ಸೇತುಬಂಧ ಶಿಬಿರ”ದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಲೌಕಿಕ ಶಿಕ್ಷಣದಿಂದ ಜೀವನದಲ್ಲಿ ಸಂಪೂರ್ಣ ಯಶಸ್ಸು ಸಿಗುವುದೆಂದು ನಿರೀಕ್ಷಿಸಲಾಗದು. ಅದರ ಜೊತೆಯಲ್ಲಿ ಕೌಶಲ್ಯವೂ ಅಗತ್ಯ. ಇಂತಹ ಶಿಬಿರಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ನಡವಳಿಕೆ ಹಾಗೂ ಜೀವನದಲ್ಲಿ ಬಹಳಷ್ಟು ಬದಲಾವಣೆಯಾಗಿದ್ದನ್ನು ಗಮನಿಸುತ್ತಿದ್ದೇವೆ. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳು ತಮಗೆ ಧಾರೆ ಎರೆದ ವಿಷಯಗಳೆಲ್ಲವನ್ನೂ ಮನನ ಮಾಡುತ್ತಾ ಜೀವನದಲ್ಲಿ ಅಳವಡಿಸಿಕೊಂಡು ಸತ್ಪ್ರಜೆಗಳಾಗಿ ಬಾಳಿ ಎಂದು ಅವರು ಕರೆ ನೀಡಿದರು.

300x250 AD

ಮುಖ್ಯ ಅತಿಥಿಗಳಾಗಿದ್ದ ತೋಟಗಾರಿಕಾ ಇಲಾಖೆಯ ಅಧಿಕಾರಿ ಮಹಾಬಲೇಶ್ವರ, ಭಾರತ ಸೇವಾದಳದ ತಾಲೂಕಾ ಘಟಕದ ಅಧ್ಯಕ್ಷ ಕೆಕ್ಕಾರ ನಾಗರಾಜ ಭಟ್ಟ ಹಿತನುಡಿಗಳನ್ನಾಡಿದರು. ವಿದ್ಯಾಪೋಷಕದ ಸ್ವಯಂಸೇವಕರಾದ ಪ್ರಸನ್ನ ಹೆಗಡೆ ನೀರಗಾನ, ಎಸ್.ಜಿ.ಹೆಗಡೆ ಭತ್ತಗೆರೆ ಹಾಗೂ ರಾಜು ಹೆಗಡೆ ಸಾಂದರ್ಭಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿ ಶಿಬಿರದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕು.ಧಾತ್ರಿ ಭಟ್ಟ ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕು.ನಾಗವೇಣಿ ನಾಯ್ಕ ಸ್ವಾಗತಿಸಿದಳು. ಪ್ರಾಜೆಕ್ಟ ಮ್ಯಾನೇಜರ್ ಎ.ಎಂ.ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಸುನೀಲ ಹುಬ್ಬಳ್ಳಿ, ಮಹೇಶ ವಿಜಯಪುರ, ಲಕ್ಷö್ಮಣ, ತರಂಗಿಣಿ ಮುಂತಾದವರು ಅನಿಸಿಕೆ ವ್ಯಕ್ತಪಡಿಸಿದರು. ಕು.ಚಂದನಾ ಹರಿಹರ, ಕು.ವೈಷ್ಣವಿ, ಕು.ಗಂಗಾ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top