ಶಿರಸಿ: ಶಿರಸಿಯ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಕಚೇರಿಯಲ್ಲಿ 18ನೇ ವಾರ್ಷಿಕ ಆಚರಣೆ ಮತ್ತು ವಿಮಾಸಲಹೆಗಾರರ ಪ್ರಗತಿ ಪರಿಶೀಲನಾ ಸಭೆಯನ್ನು ಮೇ.28ರಂದು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ವಲಯದ ಸೀನಿಯರ್ ಏರಿಯಾ ಮ್ಯಾನೇಜರ್ ಮೇಲ್ವಿನ್ ಡಿಸೋಜ ಮತ್ತು ಮಂಗಳೂರು ವಲಯದ ತರಬೇತುದಾರರಾದ ಸಂತೋಷ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಎಲ್ಲಾ ವಿಮಾ ಸಲಹೆಗಾರರಿಗೆ ತರಬೇತಿಯನ್ನು ಕೊಟ್ಟರು. ಈ ವರ್ಷ ಉತ್ತಮ ಕೆಲಸ ಮಾಡಿದ ವಿಮಾ ಸಲಹೆಗಾರರಿಗೆ “ಸ್ಟಾರ್ ಪರ್ಫಾರ್ಮರ್” ಪ್ರಶಸ್ತಿಯನ್ನು ಕೊಟ್ಟು ಅಭಿನಂದಿಸಿದರು. ಶಿರಸಿ ಬ್ರಾಂಚಿನ ವ್ಯವಸ್ಥಾಪಕರಾದ ಸಂತೋಷ್ ಭಟ್ಕಳ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಿರಸಿ ಶಾಖೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.