Slide
Slide
Slide
previous arrow
next arrow

ವಿಶ್ವದರ್ಶನ ಕೇಂದ್ರೀಯ ಶಾಲಾ ಶಿಕ್ಷಕರಿಗೆ ತರಬೇತಿ ಕಾರ್ಯಗಾರ

300x250 AD

ಯಲ್ಲಾಪುರ: ಜ್ಞಾನವೇ ಶ್ರೇಷ್ಠವಾದ ಸಂಪತ್ತು ಎಂಬ ಧ್ಯೇಯದೊಂದಿಗೆ ಸದಾ ಸಂಸ್ಕಾರಯುತ ಮತ್ತು ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯು ಮುಂಚೂಣಿಯಲ್ಲಿ ಸಾಗುತ್ತಿದೆ. ನಮ್ಮ ವಿಶ್ವದರ್ಶನ ಕೇಂದ್ರೀಯ ಶಾಲೆಯಲ್ಲಿ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಪ್ರತಿವರ್ಷವೂ ಶಿಕ್ಷಕರ ಕಲಿಕಾ ಕೌಶಲ್ಯ ಮತ್ತು ಸಾಮರ್ಥ್ಯ ವೃದ್ಧಿಗಾಗಿ ತರಬೇತಿ ಕಾರ್ಯಗಾರವನ್ನು ಆಯೋಜಿಸುತ್ತದೆ.

ಅದೇ ರೀತಿಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ತರಬೇತಿ ಕಾರ್ಯಕ್ರಮವು ಮೇ. 27 ಮತ್ತು 28 ರಂದು ನಡೆಯಿತು. ಕಾರ್ಯಕ್ರಮವನ್ನು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಕಾಶ ಕೋಣೆಮನೆ ಉದ್ಘಾಟಿಸಿದರು.ನಿವೃತ್ತ ಉಪನ್ಯಾಸಕರಾದ ಎಂ.ಎನ್. ಹೆಗಡೆ, ಪ್ರಾಂಶುಪಾಲರಾದ ಶ್ರೀಮತಿ ಮಹಾದೇವಿ ಭಟ್, ಪಿ.ಯು. ವಿಭಾಗದ ಪ್ರಾಚಾರ್ಯರಾದ ಡಿ.ಕೆ.ಗಾಂವ್ಕರ್, ಸಂಸ್ಥೆಯ ವ್ಯವಸ್ಥಾಪಕರಾದ ಅಜಯ್, ಭಾರತೀಯ ಕೇಂದ್ರೀಯ ಶಾಲೆಯ ಉಪ ಪ್ರಾಂಶುಪಾಲರಾದ ಶ್ರೀಮತಿ ಆಸ್ಮಾ ಶೇಖ್ ಹಾಗೂ ಎಲ್ಲ ಶಿಕ್ಷಕರು ಉಪಸ್ಥಿತರಿದ್ದರು.

ರಾಷ್ಟ್ರೋತ್ಥಾನ ಪರಿಷತ್‌ನ ‘ಪ್ರಶಿಕ್ಷಣ ಭಾರತೀ’ಯ ಸಹಯೋಗದಲ್ಲಿ ಪಂಚಮುಖಿ ಶಿಕ್ಷಣದ ಪ್ರಾಮುಖ್ಯತೆ, ಶಿಕ್ಷಕರು ತರಗತಿಗಳಲ್ಲಿ ಪಂಚಮುಖಿ ಶಿಕ್ಷಣದ ಅಂಶಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ಅದನ್ನು ಕಲಿಸುವ ಪದ್ಧತಿಗಳ ಕುರಿತು ಒಂದು ದಿನದ ತರಬೇತಿ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಉಪನ್ಯಾಸಕರಾದ ಎಂ.ಎನ್.ಹೆಗಡೆ ‘ಸಂತೋಷದಾಯಕ ತರಗತಿ ನಿರ್ವಹಣೆ’,ಉಪನ್ಯಾಸಕರಾದ ಡಾ. ಮಹೇಶ್ ಭಟ್ ‘ಪಂಚಮುಖಿ ಶಿಕ್ಷಣ, ಸನಾತನ ಶಿಕ್ಷಣ ಪದ್ಧತಿ’, ಶ್ರೀಮತಿ ಕೀರ್ತಿವತಿ ಮಾತಾಜಿಯವರು ‘ಕಲಿಕಾ ಚಟುವಟಿಕೆ ಆಧಾರಿತ ತರಗತಿ ನಿರ್ವಹಣೆ’ ವಿಷಯಗಳ ಕುರಿತು ತರಬೇತಿ ನೀಡಿದರು.

300x250 AD

ಅಂತೆಯೇ ಎರಡನೇ ದಿನ ಬೆಂಗಳೂರಿನ ಮ್ಯಾಕ್ ಮಿಲನ್ ಸಂಸ್ಥೆಯಿಂದ ‘ತರಗತಿ ನಿರ್ವಹಣೆಯಲ್ಲಿ ಶಿಕ್ಷಕರ ಪಾತ್ರ’ ಮತ್ತು ಮ್ಯಾಕ್ ಮಿಲನ್ ಸಂಸ್ಥೆಯ ಪಠ್ಯ ಪುಸ್ತಕಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ  ಶಿಕ್ಷಕರು ತಮ್ಮ ಕಲಿಕಾ ಕೌಶಲ್ಯವನ್ನು  ಹೆಚ್ಚಿಸಿಕೊಂಡು ತರಗತಿಯನ್ನು ಸುಗಮಗೊಳಿಸುವ ಕುರಿತು ತರಬೇತಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಅನುಭವಿ ಪ್ರಾಚಾರ್ಯರಾದ  ಶ್ರೀಮತಿ ಸುಜಾತ ಹಿರೇಮಠ್ ಭಾಗವಹಿಸಿದ್ದರು.

ನಗರಗಳಲ್ಲಿ ದೊರೆಯುವ ಉತ್ತಮ ಗುಣಾತ್ಮಕ ಶಿಕ್ಷಣ ನಮ್ಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಿಗಬೇಕು ಎಂಬ ಉದ್ದೇಶದೊಂದಿಗೆ ವಿಶ್ವದರ್ಶನ ಶಿಕ್ಷಣ ಸಂಸ್ಥೆಯು ಸದಾ ಅಗತ್ಯ, ರಚನಾತ್ಮಕವಾದ ಚಟುವಟಿಕೆ ಮತ್ತು ಕಾರ್ಯಕ್ರಮಗಳೊಂದಿಗೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ.

Share This
300x250 AD
300x250 AD
300x250 AD
Back to top