Slide
Slide
Slide
previous arrow
next arrow

ಕೃಷಿಯೆಡೆಗೆ ನಮ್ಮೆಲ್ಲರ ಗಮನವಿರಲಿ; ಸ್ವರ್ಣವಲ್ಲೀ ಶ್ರೀ

300x250 AD

ಶಿರಸಿ: ಕೃಷಿ ನಮ್ಮ ದೇವರು. ಆ ಸ್ಮರಣೆ ಜನರಿಗೆ ತರುವ ಕಾರಣಕ್ಕಾಗಿ ಈ ಸಂದರ್ಭದಲ್ಲಿ ಕೃ಼ಷಿ ಜಯಂತಿ ಮಾಡಲಾಗುತ್ತಿದೆ. ದೇಶವನ್ನು ಪೋಷಣೆ ಮಾಡುವಂತೆ ಕೃಷಿ ಜಯಂತಿ ಬೆಳೆಯಲಿ ಎಂಬುದು ಉದ್ಧೇಶವಾಗಿದೆ ಎಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.


ಅವರು ತಾಲೂಕಿನ ಸ್ವರ್ಣವಲ್ಲೀ ಶ್ರೀಮಠದಲ್ಲಿ ಮಂಗಳವಾರ ಆರಂಭಗೊಂಡಿರುವನೃಸಿಂಹ ಜಯಂತಿ, ಕೃಷಿ ಜಯಂತಿ ಉದ್ಘಾಟನಾ ಕಾರ್ಯಕ್ರಮವನ್ನುದ್ಧೇಶಿಸಿ ಆಶೀರ್ವದಿಸಿದರು. ಜನರಲ್ಲಿ, ಸರ್ಕಾರದಲ್ಲಿ ಕೃಷಿ ಕುರಿತಾಗಿ ಅನಾದರ ಕಾಣುತ್ತಿದೆ. ಕೃಷಿಕರಿಗೆ ವಿವಾಹ ಆಗದೆ ಇರುವುದೂ ಸಹ ಕೃಷಿಯೆಡೆಗಿನ ಅನಾಸಕ್ತಿಗೆ ಒಂದು ಕಾರಣವಾಗಿದೆ. ಸಮಸ್ಯೆ ಇಲ್ಲದ ಸ್ಥಳವಿಲ್ಲ. ಅದರಂತೆ ಕೃಷಿಯಲ್ಲಿಯೂ ಸಮಸ್ಯೆಯಿದೆ. ಆದರೆ ಅದನ್ನು ಎದುರಿಸಿ ನಿಲ್ಲಬೇಕು.

ಕೃಷಿಯನ್ನು ಪರಾಂಬರಿಸಿ ನೋಡುವ ಪದ್ಧತಿ ಬೆಳೆಯಬೇಕು. ಗಮನವನ್ನು ಹೆಚ್ಚಿಸಬೇಕು. ಸಮಸ್ಯೆಗಿಂತ ಒಳ್ಳೇಯದೇ ಇದೆ. ಯಾವುದೋ ಆಕರ್ಷಣೆಯ ಕಾರಣಕ್ಕೆ ಕೃಷಿಯ ಅನಾದರ ಯೋಗ್ಯವಲ್ಲ. ಕೃಷಿ ಕೆಲಸಗಳಿಗೆ ಉದಾಸೀನ ಸಲ್ಲದು. ಕೃಷಿ ಬಿಟ್ಟು ಹೋದವರಿಗೆ ಸುಖ, ನೆಮ್ಮದಿ ದೊರಕಿದ್ದು ಕಡಿಮೆ. ನೆಮ್ಮದಿಯೆಡೆಗೆ ಸಾಗಬೇಕು ಎಂಬುದು ಕೃಷಿ ಜಯಂತಿಉ ಮುಖ್ಯ ಉದ್ಧೇಶ ಎಂದರು.

ಜಡೆ ಮಠದ ಡಾ. ಮಹಾಂತ ಮಹಾಸ್ವಾಮಿಗಳು ಆಶೀರ್ವದಿಸಿ ನುಡಿದು, ಕೃಷಿಯನ್ನು ಸಂಭ್ರಮದಿಂದ ಆಚರಿಸಬಹುದು ಎಂಬುದನ್ನು ತೋರಿಸಿಕೊಟ್ಟವರು ಸ್ವರ್ಣವಲ್ಲೀ ಶ್ರೀಗಳಾಗಿದ್ದಾರೆ. ಕೃಷಿಯ ಮೂಲಕ ನಾಡಿಗೆ ಸಂದೇಶ ನೀಡುವ ಮಹತ್ ಕಾರ್ಯವನ್ನು ಸ್ವರ್ಣವಲ್ಲೀ ಶ್ರೀಮಠ ಮಾಡುತ್ತಿರುವುದು ಹೆಮ್ಮೆಯ ವಿಷಯ. ನಮ್ಮ ಭಾಗದಲ್ಲಿ ಬೆಳೆಯುವ ಭತ್ತದ ತಳಿಗಳು ರಾಜ್ಯದ ಜನರಿಗೆ ಉತ್ತಮ ಆರೋಗ್ಯ ನೀಡುತ್ತಿವೆ. ಜೀವ ವೈವಿಧ್ಯ, ಅರಣ್ಯ, ನದಿ ಸಂರಕ್ಷಣೆಯಲ್ಲಿ ಶ್ರೀಗಳ ಕಾರ್ಯ ಮಹತ್ತರವಾದುದು. ಬದುಕಿಗೆ ದಾರಿದೀಪವಾಗಿರುವ ಭಗವದ್ಗೀತೆಯನ್ನು ದೇಶದಾದ್ಯಂತ ಜನರಿಗೆ ನೀಡಿರುವ ಕೆಲಸ ಶ್ರೀಮಠದಿಂದಾಗಿದೆ ಎಂದರು.

300x250 AD

ಬಾಗಲಕೋಟೆ ತೋಟಗಾರಿಕಾ‌ ವಿವಿ ವಿಸ್ತರಣಾ ನಿರ್ದೇಶಕ ಡಾ. ಲಕ್ಷ್ಮೀನಾರಾಯಣ ಭಟ್ಟ ಮಾತನಾಡಿ, ಕೃಷಿಗೆ ಸಂಬಂಧಿಸಿ ಓದಿಗೆ ಸೀಟುಗಳ ಸಂಖ್ಯೆಯೇ ಕಮ್ಮಿ ಇದೆ. ಕೃಷಿ ಪ್ರಧಾನವಾದ ದೇಶದಲ್ಲಿ ಕೇವಲ 5% ಸೀಟುಗಳು ಮಾತ್ರಕೃಷಿ ಪದವಿಗೆ ನೀಡಿರುವುದು ವಿಪರ್ಯಾಸ. ಇಂಜಿನಿಯರಿಂಗ್, ಮೆಡಿಕಲ್ ವಿದ್ಯಾಭ್ಯಾಸಕ್ಕೆ ನೀಡಿರುವಷ್ಟು ಮಹತ್ವ ಕೃಷಿ ಸಂಬಂಧಿಸಿದ ಓದಿಗೆ ನೀಡದಿರುವುದು ವಿಷಾದನೀಯ ಎಂದರು.

ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ವಾಸುದೇವ್ ಮಾತನಾಡಿ, ರೈತ ಎನ್ನುವ ಸ್ಟೇಟಸ್ ಇಂದಿನ ಜನರಿಗೆ ರುಚಿಸುತ್ತಿಲ್ಲ. ಕೃಷಿ ಎಂದಿಗೂ ಜೀವಂತದಿಂದ ಇರುವಂತದ್ದು. ಈ ಕೃಷಿ ಜಯಂತಿಯ ಸಂದರ್ಭದಲ್ಲಿ ಉತ್ತರ ಕನ್ನಡದಲ್ಲಿ ದೇಶಕ್ಕೆ ಮಾದರಿಯಾಗುವಂತಹ ನವೋದ್ಯಮ ಹೊರಬರಲಿ ಎಂದು ಅವರು ಆಶಿಸಿದರು.

ಇದೇ ವೇಳೆ ಉತ್ತಮ ಬೆಟ್ಟ ನಿರ್ವಹಣಾ ಪ್ರಶಸ್ತಿಯನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಅನಂತ ಅಶೀಸರ, ಶ್ರೀದೇವಾಲಯದ ಅಧ್ಯಕ್ಷ ವಿ.ಎನ್. ಹೆಗಡೆ ಸೇರಿದಂತೆ ಇನ್ನಿತರರು ಇದ್ದರು.

Share This
300x250 AD
300x250 AD
300x250 AD
Back to top