Slide
Slide
Slide
previous arrow
next arrow

ದಾಂಡೇಲಿಯಲ್ಲಿ ಗಗನಕ್ಕೇರಿದ ಎಳನೀರು ಬೆಲೆ : ದರ ಇಳಿಕೆಗೆ ಆಗ್ರಹ

300x250 AD

ದಾಂಡೇಲಿ : ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯ ತೊಡಗಿದೆ. ಅದೇ ರೀತಿ ದಾಂಡೇಲಿ ನಗರದಲ್ಲಿ ಎಳನೀರಿನ ಬೆಲೆಯು ಗಗನಕ್ಕೇರಿದೆ. ಗಗನಕ್ಕೇರುತ್ತಿರುವ ಎಳನೀರಿನ ಬೆಲೆಯಿಂದಾಗಿ ಗ್ರಾಹಕರಿಗೆ ತೀವ್ರ ತೊಂದರೆಯಾಗುತ್ತಿದೆ. ಎಳನೀರಿನ ದರವನ್ನು ಕೂಡಲೇ ಇಳಿಸುವಂತೆ ಕಾಂಗ್ರೆಸ್ ಮುಖಂಡರಾದ ಜಾಫರ್ ಮಸನಗಟ್ಟಿ ಆಗ್ರಹಿಸಿದ್ದಾರೆ.

ಅವರು ಶನಿವಾರ ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ, ಹಳಿಯಾಳ, ಜೋಯಿಡಾ, ರಾಮನಗರ ಮೊದಲಾದ ಕಡೆಗಳಲ್ಲಿ 30 ರಿಂದ 35 ರೂ. ದರ ಇದ್ದು, ದಾಂಡೇಲಿ ನಗರದಲ್ಲಿ ಮಾತ್ರ ಏಕಾಏಕಿ 50/- ರೂಪಾಯಿಯನ್ನು ಮಾಡಲಾಗಿದೆ. ದಾಂಡೇಲಿಯಲ್ಲಿ ಮನಸ್ಸಿಗೆ ಬಂದ ರೀತಿಯಲ್ಲಿ ಎಳನೀರಿಗೆ ದರವನ್ನು ನಿಗದಿಪಡಿಸಲಾಗುತ್ತಿದ್ದು, ಇದರಿಂದ ಬಡವರಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕೂಡಲೇ ನಗರಸಭೆಯವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಎಳನೀರಿನ ದರವನ್ನು ಇಳಿಕೆ ಮಾಡಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

300x250 AD
Share This
300x250 AD
300x250 AD
300x250 AD
Back to top