ಸಿದ್ದಾಪುರ: ತಾಲ್ಲೂಕಿನ ದೊಡ್ಮನೆ ಮಹಾಗಣಪತಿ ಪ್ರೌಢಶಾಲೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ದಾಖಲಿಸಿದೆ.
2023-24 ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ಪ್ರೌಢಶಾಲೆಯ ಒಟ್ಟು 42 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಪ್ರೌಢಶಾಲೆ ಕಳೆದ ಅನೇಕ ವರ್ಷಗಳಿಂದ ಶೇ.100 ರಷ್ಟು ದಾಖಲಿಸುವ ಫಲಿತಾಂಶವನ್ನು ಮುಂದುವರಿಸಿದೆ.
ಇನ್ನು ಪ್ರೌಢಶಾಲೆಯ ರಕ್ಷಿತಾ ವಿಶ್ವನಾಥ ಭಟ್ ಕಿಬ್ಳೆ (ಶೇ.96.96)ಪ್ರಥಮ, ಸುಬ್ರಹ್ಮಣ್ಯ ರಾಜು ನಾಯ್ಕ ಮೊರಸೆ(ಶೇ.94.24) ದ್ವಿತೀಯ, ದಿವ್ಯಾ ನಾರಾಯಣ ನಾಯ್ಕ ಮೇಲಿನಮನೆ (ಶೇ.92.16) ತೃತೀಯ ಹಾಗೂ ರಚನಾ ಅನಂತ ಗೌಡ ಬಿಳೆಗೋಡ (ಶೇ.87.20) ಚತುರ್ಥ ಸ್ಥಾನವನ್ನು ಪಡೆದಿದ್ದಾರೆ.
ಇನ್ನು ಪ್ರೌಢಶಾಲೆಯ ಒಟ್ಟು 6 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 30 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 6 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರೌಢಶಾಲೆಯ ಹಾಗೂ ವಿದ್ಯಾರ್ಥಿಗಳ ಸಾಧನೆಯನ್ನು ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷರು, ಸದಸ್ಯರು, ಶಾಲಾ ಮುಖ್ಯೋಧ್ಯಾಪಕರು, ಶಿಕ್ಷಕರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.