Slide
Slide
Slide
previous arrow
next arrow

ಏ.28ಕ್ಕೆ ಪ್ರಧಾನಿ ಮೋದಿ ಶಿರಸಿಗೆ; ಜಿಲ್ಲಾ ಕ್ರೀಡಾಂಗಣದಲ್ಲಿ ಭರದ ಸಿದ್ಧತೆ

300x250 AD

ಪೂರ್ವ ತಯಾರಿ ವೀಕ್ಷಿಸಿದ ಬಿಜೆಪಿ ಅಭ್ಯರ್ಥಿ ಕಾಗೇರಿ | ಜರ್ಮನ್ ಟೆಂಟ್ ಮಾದರಿಯಲ್ಲಿ ವೇದಿಕೆ ನಿರ್ಮಾಣ

ಶಿರಸಿ: ಪ್ರಧಾನಿ ನರೇಂದ್ರ ಮೋದಿ ಶಿರಸಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿರುವ ಹಿನ್ನಲ್ಲೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಪೂರ್ವ ಸಿದ್ಧತೆಯನ್ನು ವಿಕ್ಷೀಸಿದರು.

ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಮೋದಿ ಶಿರಸಿಗೆ ಆಗಮಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಮೋದಿಯವರ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗಿದೆ. ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದೆ. ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಸಭೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಸ್ವತಃ ಕಾಗೇರಿ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ತಯಾರಿಯ ಕುರಿತು ಮಾಹಿತಿ ಪಡೆದುಕೊಂಡರು.

ಬಳಿಕ ಮಾತನಾಡಿದ ಕಾಗೇರಿ, ಜನನಾಯಕ, ಪ್ರಧಾನಿ ನರೇಂದ್ರ ಮೋದಿಯವರು ಏ.28ರಂದು ನಗರಕ್ಕೆ ಆಗಮಿಸುತ್ತಿದ್ದು, ಅವರಿಂದ ಸೌಲಭ್ಯ ಪಡೆದ ಕ್ಷೇತ್ರದ ಬಹುದೊಡ್ಡ ಜನಸಮೂಹ ಅವರಿಗೆ ಧನ್ಯವಾದ ಸಲ್ಲಿಸಲು ಕಾತುರವಾಗಿದೆ ಎಂದರು.

300x250 AD

ಪ್ರಧಾನಿ ಮೋದಿಯವರಿಗೆ ಧನ್ಯವಾದ ಸಲ್ಲಿಸುವ ಜನಾಭಿಪ್ರಾಯ ಬಹುದೊಡ್ಡ ಪ್ರಮಾಣದಲ್ಲಿ ಕಾಣಿಸುತ್ತಿದೆ. ಶೌಚಾಲಯ, ಉಜ್ವಲ ಗ್ಯಾಸ್, ರೈತರು, ಮನೆ ಸೇರಿದಂತೆ ಅನೇಕ ಸೌಲಭ್ಯ ಪಡೆದ ಜನತೆ ಮೋದಿಯವರನ್ನು ಕಾಣಲು ಹಂಬಲಿಸಿದೆ. ಇಡೀ ಕ್ಷೇತ್ರದಲ್ಲಿ ಓಡಾಡಿದಾಗ ಜನತೆ ಮೋದಿಯವರನ್ನು ಕಾಣಲು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದುದನ್ನು ಕಂಡಿದ್ದೇನೆ. ಇನ್ನೊಂದೆಡೆ ರಾಮ ಮಂದಿರ ಕಟ್ಟಿದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಹೀಗಾಗಿ, ಮೋದಿಯವರನ್ನು ಕಂಡು ಧನ್ಯವಾದ ಸಮರ್ಪಿಸುವ ಉತ್ಸಾಹ ಜನರಲ್ಲಿ ಜಾಸ್ತಿ ಇದೆ. ಜನರ ಭಾವನಾತ್ಮಕ ಸ್ಪಂದನೆ ಹೇಗಿರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಹಲವರು ಬೈಕ್ ರ‍್ಯಾಲಿ, ಮೆರವಣಿಗೆ ಮೂಲಕವೂ ಇಲ್ಲಿಗೆ ಆಗಮಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದರು.

ನರೇಂದ್ರ ಮೋದಿಯವರು 2008ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಶಿರಸಿಗೆ ಆಗಮಿಸಿದ್ದರು. ವಿಕಾಸಾಶ್ರಮ ಬೈಲಿನಲ್ಲಿ ಅವರು ಸಾರ್ವಜನಿಕ ಸಭೆ ನಡೆಸಿದ್ದರು. ಶಿರಸಿ ಸಿದ್ದಾಪುರಕ್ಕೆ ಮೊದಲ ಬಾರಿ ನಿಂತಾಗ ಅವರು ಆಗಮಿಸಿ ನನಗಾಗಿ ಮತ ಯಾಚಿಸಿದ್ದರು. ಹಿಂದಿನ ವಿಧಾನಸಭಾ ಚುನಾವಣೆ ವೇಳೆ ಮೋದಿಯವರು ಜಿಲ್ಲೆಗೆ ಆಗಮಿಸಿ ಪ್ರಚಾರ ನಡೆಸಿದ್ದರು. ಶಿರಸಿಯ ಇತಿಹಾಸದಲ್ಲಿ ಪ್ರಧಾನಿಯೊಬ್ಬರು ಬರುತ್ತಿರುವುದು ಮೊದಲ ಬಾರಿಯಾಗಿದೆ ಎಂದ ಕಾಗೇರಿ, ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಸಭೆ ನಡೆಸಲು ಇಂದು ನಮಗೆ ಅನುಮತಿ ಲಭಿಸಿದೆ. ಒಂದೆರಡು ದಿನದಲ್ಲಿ ಪಾರ್ಕಿಂಗ್ ಸೇರಿದಂತೆ ಎಲ್ಲವೂ ಸ್ಪಷ್ಟ ಚಿತ್ರಣ ನೀಡಲಿದ್ದೇವೆ. ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಜರ್ಮನ್ ಟೆಂಟ್ ನಿರ್ಮಿಸುತ್ತಿದ್ದೇವೆ. ಶಿರಸಿಯಲ್ಲಿ ಮೊದಲ ಬಾರಿ ಈ ತಂತ್ರಜ್ಞಾನ ಬಳಸಿ ಸಾರ್ವಜನಿಕ ಕಾರ್ಯಕ್ರಮ ಮಾಡುತ್ತಿದ್ದು, ತಿಪ್ಪಾದೇವಿ ಟೆಂಟ್ ಹೌಸ್ ನ ಕೃಷ್ಣೇಗೌಡ್ರು ಸ್ಥಳದಲ್ಲಿಯೇ ಇದ್ದು ನಿರ್ಮಾಣದ ಜವಾಬ್ದಾರಿ ವಹಿಸಿದ್ದಾರೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾರ್ಯಕರ್ತರ 25 ತಂಡಗಳನ್ನು ರಚಿಸಿ ಬೇರೆ ಬೇರೆ ಜವಾಬ್ದಾರಿಗಳನ್ನು ಅವರಿಗೆ ವಹಿಸಿದ್ದೇವೆ. ಒಂದು ಲಕ್ಷಕ್ಕೂ ಮೀರಿ ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.

ಬಿಜೆಪಿ ಪ್ರಮುಖರಾದ ಸದಾನಂದ ಭಟ್, ಆನಂದ ಸಾಲೇರ, ನಾಗರಾಜ ನಾಯ್ಕ, ಶ್ರೀನಿವಾಸ ಹೆಬ್ಬಾರ್, ಸುರೇಶ್ಚಂದ್ರ ಹೆಗಡೆ, ಗಣಪತಿ ನಾಯ್ಕ, ನಂದನ ಸಾಗರ, ಗಣೇಶ ಪ್ರಭು, ಕುಮಾರ ಬೋರ್ಕರ್ ಇದ್ದರು.

Share This
300x250 AD
300x250 AD
300x250 AD
Back to top