ಶಿರಸಿ: ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದ ಲಿಂಗೈಕ್ಯ ವಿರಕ್ತ ಮಹಾಸ್ವಾಮಿಗಳವರ 31ನೇ ಸ್ಮರಣೋತ್ಸವ ಹಾಗೂ ಅಕ್ಕಮಹಾದೇವಿ ಜಯಂತಿ ಉತ್ಸವ ಪ್ರಯುಕ್ತ ಸಾಧಕ ಮಹಿಳೆಯರಿಗೆ ನೀಡುವ ‘ಅಕ್ಕ ಪ್ರಶಸ್ತಿ’ ಪ್ರದಾನ ಸಮಾರಂಭವು ಏಪ್ರಿಲ್ 23ರಂದು ಜರುಗಿತು.
ಈ ವರ್ಷದ ಅಕ್ಕ ಪ್ರಶಸ್ತಿಯನ್ನು ಶಿರಸಿಯ ಗಣೇಶನಗರದ ಸಾಹಸಿ ರೈತ ಮಹಿಳೆ ಶ್ರೀಮತಿ ಗೌರಿ ಸಿ. ನಾಯ್ಕ್ ಅವರಿಗೆ ನೀಡಲಾಯಿತು. ಪ್ರಶಸ್ತಿಯು 5,000 ನಗದು ಪ್ರಶಸ್ತಿ ಪತ್ರ ಪ್ರಶಸ್ತಿ ಫಲಕ ಗೌರವ ಸನ್ಮಾನಗಳನ್ನು ಒಳಗೊಂಡಿದೆ. ಹಾಗೂ ಜಮಖಂಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ಪ್ರಾಧ್ಯಾಪಕರು, ಸಾಧಕರಾದ ಡಾ. ಸುನಂದ ಶಿರೂರ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಶ್ರೀಮತಿ ಸಪ್ನಾ ಅನಿಗೋಳ್ ಇವರಿಗೆ ಗೌರವ ಸನ್ಮಾನವನ್ನು ನಡೆಸಲಾಯಿತು. ಚಿಮ್ಮಡ ವಿರಕ್ತ ಮಠದ ಪರಮಪೂಜ್ಯ ಪ್ರಭು ಸ್ವಾಮೀಜಿ, ಜಮಖಂಡಿ ಓಲೆ ಮಠದ ಡಾ. ಚನ್ನಬಸವ ಮಹಾಸ್ವಾಮಿಜಿ, ಡಾ. ಮಹಾಂತ ಸ್ವಾಮೀಜಿ ಡಾ. ವಿಶ್ವ ಪ್ರಭು ಶಿವಾಚಾರ್ಯ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಶಿವಾನಂದ ಸ್ವಾಮೀಜಿ ಶ್ರೀ ರಘುನಾಥ ಪ್ರಿಯ ಸಾಧು ಮಹಾರಾಜರ ಮಠದ ಜನಾರ್ಧನ ಮಹಾರಾಜರು ಗೌರವ ಸನ್ಮಾನವನ್ನು ನಡೆಸಿಕೊಟ್ಟರು. ಡಾ. ಗುರು ಹಿರೇಮಠ ಡಾ. ರವಿಕುಮಾರ್ ಬಿಕೆ ಪ್ರಕಾಶ್ ಬಡಿಗೇರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿರಸಿ ಮೂಲದ ಬಾವಿ ಗೌರಮ್ಮನವರಿಗೆ ರಾಜ್ಯಾದ್ಯಂತ ಗೌರವ ಸನ್ಮಾನ ಲಭಿಸುತ್ತಿರುವುದು ಶಿರಸಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.