ಶಿರಸಿ: ಇಲ್ಲಿನ ಕಾಲೇಜು ರಸ್ತೆಯಲ್ಲಿ ಬೈಕನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಅಪಾಯಕಾರಿ ರೀತಿಯಲ್ಲಿ ವೀಲ್ಹಿಂಗ್ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ನಗರದ ಕಸ್ತೂರ ಬಾ ನಗರದ ನಿವಾಸಿಯಾದ ಮಣಿಕಂಠ ಮಹಾಬಲೇಶ್ವರ ಕೊಡಿಯಾ ಎಂಬಾತನ ವಿರುದ್ದ ಶಿರಸಿ ಹೊಸ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿರಸಿ ಉಪವಿಭಾಗದ ಡಿಎಸ್ಪಿ ಎಂ.ಎಸ್. ಪಾಟೀಲ್, ಶಿರಸಿ ವೃತ್ತ ನಿರೀಕ್ಷಕರಾದ ಶಶಿಕಾಂತ ವರ್ಮಾ ಮಾರ್ಗದರ್ಶನದಲ್ಲಿ ಶಿರಸಿ ನಗರ ಪೊಲೀಸ್ ಠಾಣೆ ಪಿಎಸ್ಐ ನಾಗಪ್ಪ.ಬಿ, ಪಿಎಸ್ಐ ಶ್ರೀಮತಿ ಲತಾ ಕೆ.ಎನ್.ನೇತೃತ್ವದಲ್ಲಿ ನಗರ ಮತ್ತು ಮಾರುಕಟ್ಟೆ ಠಾಣೆಯ ಸಿಬ್ಬಂದಿಗಳಾದ ಮಹಾಂತೇಶ ಬಾರಿಕೇರ,
ಪ್ರಶಾಂತ ಪವಾಸ್ಕರ, ನಾಗಪ್ಪ ಹನುಮಂತ ಮಾಕಾಪುರರವರು ಕಾರ್ಯಾಚರಣೆ ನಡೆಸಿ ಬೈಕ್ ವಿಲ್ಹಿಂಗ್ ಮಾಡುತ್ತಿದ್ದ ಯುವಕನ ಮೇಲೆ ಕ್ರಮ ಕೈಗೊಂಡಿದ್ದಾರೆ.