ಶಿರಸಿ: ಆ ದಿನ ಮಕ್ಕಳ ಮುಖದಲ್ಲಿ ಏನೋ ಒಂದು ಉತ್ಸಾಹ, ತವಕ, ಭಯ. ಶೂ, ಸ್ಯಾಂಡಲ್ ಗಳನ್ನು ಧರಿಸಿ ನಡೆಯುವ ತಾವು ಮುಂದಿನ ದಿನಗಳಲ್ಲಿ ಗಾಲಿಗಳ ಮೇಲೆ ಓಡಾಡುತ್ತೇವೆ ಎಂಬ ಸಂತೋಷ. ಹೌದು ಈ ದೃಶ್ಯ ಕಂಡು ಬಂದಿದ್ದು ಶಿರಸಿಯ ಅದ್ವೈತ ಸ್ಕೇಟಿಂಗ್ ರಿಂಕಿನಲ್ಲಿ.
ಕಳೆದ ಐದು ವರ್ಷಗಳಿಂದ ವಿಶೇಷವಾದ ಸ್ಕೇಟಿಂಗ್ ಕ್ರೀಡೆಯ ತರಬೇತಿಯನ್ನು ಅದ್ವೈತ ಸ್ಕೇಟರ್ಸ್ & ಸ್ಪೋರ್ಟ್ಸ್ ಕ್ಲಬ್ ನೀಡುತ್ತಿದೆ. ಈ ವರ್ಷ ರೋಟರಿ ಕ್ಲಬ್ ಶಿರಸಿಯು ಸ್ಕೇಟಿಂಗ್ ಕ್ರೀಡೆಯನ್ನು ಪ್ರೋತ್ಸಾಹಿಸುವ ಉದ್ಧೇಶದಿಂದ ಅದ್ವೈತ ಸ್ಕೇಟಿಂಗ್ ಕ್ಲಬಿನೊಂದಿಗೆ ಕೈ ಜೋಡಿಸಿರುತ್ತದೆ.
ಈ ಏರಡೂ ಸಂಸ್ಥೆಗಳು ಜಂಟಿಯಾಗಿ ಆಯೋಜಿಸುತ್ತಿರುವ ಸ್ಕೇಟಿಂಗ್ ಸಮ್ಮರ ಕ್ಯಾಂಪಿಗೆ ರೋಟರಿ ಅಧ್ಯಕ್ಷರಾದ ರೊ ಶ್ರೀಧರ ಹೆಗಡೆ ಚಾಲನೆ ನೀಡಿದರು.
‘ಶಿರಸಿಯಲ್ಲಿ ರೋಟರಿ ಸಂಸ್ಥೆಯು ಒಂದಿಲ್ಲೊಂದು ಜನಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತದೆ.ಅದರಂತೆ ಈ ವರ್ಷ ವಿಶೇಷವಾದ ಸ್ಕೇಟಿಂಗ್ ಕ್ರೀಡೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜಂಟಿಯಾಗಿ ಅದ್ವೈತ ಸ್ಕೇಟಿಂಗ್ ಕ್ಲಬಿನೊಂದಿಗೆ ಜೊತೆಗೂಡಿ ಇಂದು ಸಮ್ಮರ ಕ್ಯಾಂಪಿಗೆ ಚಾಲನೆಯನ್ನು ನೀಡುತ್ತಿದ್ದು, ಮಕ್ಕಳು ಮೊಬೈಲ್ ಗೀಳಿನಿಂದ ದೂರವಾಗಿ ದೈಹಿಕ ಹಾಗೂ ಮಾನಸಿಕವಾಗಿ ಕಸರತ್ತು ನೀಡುವ ಸ್ಕೇಟಿಂಗ್ ಕ್ರೀಡೆಯನ್ನು ಕಲಿಯಿರಿ. ಶಿರಸಿಯ ರೋಟರಿ ಕ್ಲಬ್ ಯಾವತ್ತು ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ’ ಎಂದು ಕ್ಯಾಂಪಿಗೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ರೋಟರಿ ಸದಸ್ಯರು, ಅದ್ವೈತ ಸ್ಕೇಟಿಂಗ್ ಕ್ಲಬಿನ ಆಡಳಿತ ಮಂಡಳಿ ಹಾಗೂ ನೂರಾರು ಸಂಖ್ಯೆಯಲ್ಲಿ ಸ್ಕೇಟಿಂಗ್ ಕ್ರೀಡಾಪಟುಗಳ ಪಾಲಕ ಪೋಷಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸ್ಪೀಡ್ ಹಾಗೂ ರೊರಲ್ ಹಾಕಿ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪ್ರತಿನಿಧಿಸಿದ ಕ್ರೀಡಾಪಟುಗಳಿಗೆ ಪ್ರಶಸ್ತಿಪತ್ರಗಳನ್ನು ನೀಡಲಾಯಿತು.
Box Point :
ಶಿರಸಿಯ ವಿದ್ಯಾರ್ಥಿಗಳಲ್ಲಿ ಸ್ಕೇಟಿಂಗ್ ಕಲಿಯುವ ಆಸಕ್ತಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಿದ್ದು, ಇನ್ನಿತರ ಜಿಲ್ಲೆಯ ತರಬೇತಿ ಶುಲ್ಕವನ್ನು ಹೊಲಿಸಿದ್ದಲ್ಲಿ ನಮ್ಮಲ್ಲಿ ಅತೀ ಕಡಿಮೆ ಇರುವ ಕಾರಣ ಬೆಂಗಳೂರು, ಮೈಸೂರು ಹಾಗೂ ರಾಜ್ಯದ ಬೇರೆ ಬೇರೆ ಸ್ಥಳಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ತರಬೇತಿಯನ್ನು ಪಡೆಯಲು ನಮ್ಮಲ್ಲಿಗೆ ಬರುತ್ತಿರುವುದು ಸಂತೋಷದ ವಿಷಯ.
ರೊ. ಕಿರಣಕುಮಾರ್, ಅಧ್ಯಕ್ಷರು, ಅದ್ವೈತ ಸ್ಕೇಟಿಂಗ್ ಕ್ಲಬ್ ಶಿರಸಿ