ಅಂಕೋಲಾ: ಕಳೆದ 3 ವರ್ಷಗಳ ಅಂಕೋಲಾದ ನಾಗರಾಜ ಗಣಪತಿ ನಾಯ್ಕ ಎಂಬುವವರು ಮೀನುಹಿಡಿಯಲು ನದಿಗೆ ತೆರಳಿದ್ದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ತೀರ ಬಡ ಕುಟುಂಬದವರಾದ ಇವರಿಗೆ ಸರಕಾರದಿಂದ ಪರಿಹಾರವೇನು ಸಿಕ್ಕಿರಲಿಲ್ಲ. ಈ ಬಗ್ಗೆ ಸುಂಕಸಾಳ ಗ್ರಾ.ಪಂ ಸದಸ್ಯ ಚಂದು ನಾಯ್ಕ ಕೊಡ್ಲಗದ್ದೆ ಮೃತನ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಡುವ ಉದ್ದೇಶದಿಂದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರರಲ್ಲಿ ಕುಟುಂಬಸ್ಥರನ್ನು ಕರೆದುಕೊಂಡು ಹೋಗಿ ಮನವಿ ಮಾಡಿದಾಗ ಸಚಿವರು ಸಂಬಂಧಪಟ್ಟ ಇಲಾಖೆಯ ಜೊತೆ ಮಾತನಾಡಿ ಪರಿಹಾರ ನೀಡುವಂತೆ ಸೂಚಿಸಿ ಸ್ವತಃ ತಾವೇ ಮುಂದೆ ನಿಂತು ಕಾಳಜಿ ವಹಿಸಿದ್ದರು. ಇದೀಗ ಮೃತನ ಕುಟುಂಬಕ್ಕೆ ಸರಕಾರದಿಂದ 6 ಲಕ್ಷ ರೂ ಪರಿಹಾರ ಧನ ದೊರಕಿದೆ. ಇಂದು ಮೃತನ ಕುಟುಂಬಸ್ಥರು ಶಾಸಕ ಶಿವರಾಮ ಹೆಬ್ಬಾರ್ ರಲ್ಲಿ ತೆರಳಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶಿವರಾಮ ಹೆಬ್ಬಾರ್ ಅವರ ಪ್ರಯತ್ನದಿಂದ ಇಂದು ಆ ಬಡಕುಟುಂಬಕ್ಕೆ ಪರಿಹಾರ ದೊರಕಿದೆ. ಜನರ ಕಷ್ಟಗಳಿಗೆ ಸ್ಪಂದಿಸುವ ಗುಣ ಹೊಂದಿರುವ ನಾಯಕರನ್ನು ಪಡೆದಿರುವುದೇ ನಮ್ಮ ಹೆಮ್ಮೆ.
- ಚಂದು ನಾಯ್ಕ ಕೊಡ್ಲಗದ್ದೆ
(ಗ್ರಾ.ಪಂ ಸದಸ್ಯರು ಸುಂಕಸಾಳ)