Slide
Slide
Slide
previous arrow
next arrow

ಮತದಾನದ ಜಾಗೃತಿಗಾಗಿ ದಾಂಡೇಲಿಯಲ್ಲಿ ಬೈಕ್ ಜಾಥಾ

300x250 AD

ದಾಂಡೇಲಿ : ಕೆನರಾ ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನವು ಮೇ 7ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮತದಾನದ ಕುರಿತಂತೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪಂಚಾಯತ್ ಮಾರ್ಗದರ್ಶನದಲ್ಲಿ ದಾಂಡೇಲಿ ತಾಲ್ಲೂಕಾಡಳಿತ, ನಗರ ಸಭೆ ಮತ್ತು ತಾಲೂಕು ಪಂಚಾಯಿತಿ ಆಶ್ರಯದಡಿ ನಗರಸಭೆಯ ಆಶ್ರಯದಡಿ ಬೈಕ್ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಸೋಮವಾರ ಹಮ್ಮಿಕೊಳ್ಳಲಾಯಿತು.

ನಗರಸಭೆಯ ಆವರಣದಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ನಗರಸಭೆಯ ಪೌರಾಯುಕ್ತರಾದ ಸಿದ್ದಪ್ಪ ಮಹಾಜನ್ ಅವರು ಚಾಲನೆಯನ್ನು‌ ನೀಡಿ ಮಾತನಾಡುತ್ತಾ, ಮತದಾನ ಪವಿತ್ರವಾದ ಹಕ್ಕು. ಈ ಹಕ್ಕನ್ನು ಪ್ರತಿಯೊಬ್ಬ ಮತದಾರರನ್ನು ಕಡ್ಡಾಯವಾಗಿ ಚಲಾಯಿಸಬೇಕು. ಮತದಾನದ ಕುರಿತಂತೆ ಜನ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಈ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ನಗರಸಭೆಯ ಆವರಣದಿಂದ ಹೊರಟ ಬೈಕ್ ಜಾಥಾವು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೊನೆಯಲ್ಲಿ ಅಂಬೇವಾಡಿಯಲ್ಲಿರುವ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಸಂಪನ್ನಗೊಂಡಿತು.

300x250 AD

ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ನಗರ ಸಭೆಯ ವ್ಯವಸ್ಥಾಪಕರಾದ ಪರಶುರಾಮ ಶಿಂಧೆ, ನಗರ ಸಭೆಯ ಅಭಿಯಂತರರಾದ ವಿ.ಎಸ್.ಕುಲಕರ್ಣಿ, ಪರಿಸರ ಅಭಿಯಂತರರಾದ ಶುಭಂ‌ ರಾಯ್ಕರ್, ಅಧಿಕಾರಿಗಳಾದ ಮೈಕಲ್ ಫರ್ನಾಂಡೀಸ್, ಕರಣ್ ಜೋಶಿ, ಫಿಲೂಪ್ ಮಾದರ, ರಾಜೇಶ್ ಅಂಕೋಲೆಕರ, ಆದಿ‌ನಾರಾಯಣ, ಸಲೀಂ, ತಹಶೀಲ್ದಾರ್ ಕಚೇರಿಯ ಆರೋಗ್ಯ ನಿರೀಕ್ಷಕರಾದ ಗೋಪಿ ಚೌಹ್ವಾಣ್, ಕಂದಾಯ ನಿರೀಕ್ಷಕರಾದ ರಾಘವೇಂದ್ರ ಪಾಟೀಲ್, ಮುಕುಂದ ಬಸವಮೂರ್ತಿ, ಗೌಡಪ್ಪ ಬನಕದಿನ್ನಿ, ದಯಾನಂದ್ ಚಿಟ್ಟಿ, ರವಿ ಕಮ್ಮಾರ್, ತಾ.ಪಂ ಸಿಬ್ಬಂದಿ ಕವಿತಾ ಜೋಗಳೆಕರ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top