Slide
Slide
Slide
previous arrow
next arrow

‘ಹಲವು ಸಮಸ್ಯೆಗಳ ನಡುವೆಯೂ ಸಮಾಜವನ್ನು ಜಾಗೃತಗೊಳಿಸುತ್ತಿರುವುದು ಪತ್ರಿಕೋದ್ಯಮ’

300x250 AD

ಸಿದ್ದಾಪುರ: ಪತ್ರಿಕೋದ್ಯಮ ಹಲವಾರು ಸಮಸ್ಯೆಗಳ ನಡುವೆಯೂ ತಲೆ ಎತ್ತಿ ನಿಂತು ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ ಎಂದು ಹಿರಿಯ ಪತ್ರಕರ್ತ ತಿ.ನ. ಶ್ರೀನಿವಾಸ ಸಾಗರ ಹೇಳಿದರು.

ಪಟ್ಟಣದ ಬಾಲಭವನದಲ್ಲಿ ತಾಲ್ಲೂಕು ಪತ್ರಕರ್ತರ ಸಂಘ ಜಿಲ್ಲಾ ಪತ್ರಿಕಾ ಮಂಡಳಿಯ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ವಿಶೇಷ ಉಪನ್ಯಾಸದ ಉಪನ್ಯಾಸಕರಾಗಿ ಶನಿವಾರ ಅವರು ಮಾತನಾಡಿದರು. ದೇಶದಲ್ಲಿ ಇಂದು ಶಾಸಕಾಂಗ ಮತ್ತು ಕಾರ್ಯಾಂಗ ವಿಫಲವಾಗಿದೆ. ನ್ಯಾಯಾಧೀಶರೇ ನ್ಯಾಯಾಂಗದ ಮೇಲೆ ಅನುಮಾನ ವ್ಯಕ್ತಪಡಿಸುವ ಪರಿಸ್ಥಿತಿ ಬಂದಿದೆ. ವಿರೋಧ ಪಕ್ಷವಾಗಿ, ಅನಧೀಕೃತ ಜನಪ್ರತಿನಿಧಿಯಾಗಿ ಸಮಾಜದ ಸಮಸ್ಯೆಗಳನ್ನು ಗುರುತಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ. ಆಳುವ ವರ್ಗಕ್ಕೆ ಪತ್ರಕರ್ತರ ಮೇಲೆ ಆರೋಪ ಮಾಡುವ ಯಾವುದೇ ನೈತಿಕತೆ ಇಲ್ಲ.
ಪತ್ರಿಕೋದ್ಯಮ ಮತ್ತು ಪತ್ರಕರ್ತರಿಂದ ದೇಶದಲ್ಲಿ ಪ್ರಜಾಪ್ರಭುತ್ವ ಇನ್ನೂ ಜೀವಂತವಾಗಿದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪತ್ರಿಕಾ ಸಂಘ ರಾಜ್ಯದಲ್ಲಿರುವ ಉತ್ತಮ ಸಂಘಟನೆಗಳಲ್ಲಿ ಒಂದು. ನಮ್ಮ ಹಿಂದಿನ ತಲೆಮಾರಿನ ಪತ್ರಕರ್ತರ  ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ನೋಡಿ ಮುಂದಿನ ತಲೆಮಾರಿನ ಪತ್ರಕರ್ತರು ಅನುಸರಿಸಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಪಾಟೀಲ ಮುಂಡಗೋಡ ಮತ್ತು ಸಿದ್ದಾಪುರದ ಹಿರಿಯ ಸಾಹಿತಿ ಜಿ ಜಿ ಹೆಗಡೆ ಬಾಳಗೋಡು ಮುಖ್ಯ ಅತಿಥಿಗಳಾಗಿ ಭಾಗಿಯಾಗಿ ಮಾತನಾಡಿದರು.

300x250 AD

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಗಣೇಶ ಭಟ್ಟ ಸ್ವಾಗತಿಸಿದರು, ಜಿಲ್ಲಾ  ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ನಾಗರಾಜ ಭಟ್ಟ ಕೇಕ್ಕಾರ ವಂದಿಸಿದರು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ನಿರೂಪಿಸಿದರು.

Share This
300x250 AD
300x250 AD
300x250 AD
Back to top