ಶಿರಸಿ: ಕ್ಷತ್ರೀಯ ಮರಾಠಾ ಸಮುದಾಯಕ್ಕೆ ಸೇರಿರುವ ಖಾನಾಪುರ ಕ್ಷೇತ್ರದ ಮಾಜಿ ಶಾಸಕಿಯಾಗಿರುವ ಶ್ರೀಮತಿ ಅಂಜಲಿ ಹೇಮಂತ ಲಿಂಬಾಳ್ಕರರವರಿಗೆ ಕೆನರಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ನ್ನು ನೀಡುತ್ತಿರುವುದು ಜಿಲ್ಲೆಯ ಕ್ಷತ್ರೀಯ ಮರಾಠಾ ಸಮುದಾಯದವರಿಗೆ ಹಾಗೂ ಆ ಸಮುದಾಯದ ಉಪ ಪಂಗಡದವರಿಗೆ ತೀವ್ರ ಸಂತೋಷ ಉಂಟಾಗಿದೆಯೆಂದು ಜಿಲ್ಲೆಯ ಕ್ಷತ್ರೀಯ ಸಮಾಜದ ಮುಖಂಡ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವಿಭಾಗದ ಜಿಲ್ಲಾ ಕಾರ್ಯದರ್ಶಿ ಪಾಂಡುರಂಗ ಪಾಟೀಲ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೆನರಾ ಲೋಕಸಭಾ ವ್ಯಾಪ್ತಿಗೆ ಬರುವ ಬೆಳಗಾಂವ ಜಿಲ್ಲೆಯ ಖಾನಾಪುರದ ಮಾಜಿ ಶಾಸಕಿಯಾಗಿರುವ ಡಾ|| ಅಂಜಲಿ ಲಿಂಬಾಳ್ಕರರವರಿಗೆ ರಾಜ್ಯದ ಮರಾಠಾ ಜನಾಂಗದ ಕೋಟಾದಲ್ಲಿ ಟಿಕೆಟ್ನ್ನು ನೀಡಿರುತ್ತಾರೆ. ಈ ಲೋಕಸಭೆ ವ್ಯಾಪ್ತಿಯಲ್ಲಿ 4 ಲಕ್ಷಕ್ಕಿಂತ ಹೆಚ್ಚಿನ ಕ್ಷತ್ರಿಯ ಮರಾಠಾ ಸಮುದಾಯದ ಹಾಗೂ ಆ ಸಮುದಾಯದ ಉಪ ಪಂಗಡದ ಮತದಾರರಿದ್ದು ನಮ್ಮ ಸಮುದಾಯವೂ ಸಹ ಹಿಂದುಳಿದ ವರ್ಗಗಳ ಸಮುದಾಯವಾಗಿದ್ದು ಈ ಸಮುದಾಯಕ್ಕೆ ಟಿಕೆಟ್ನ್ನು ನೀಡಿರುವುದು ಜಿಲ್ಲೆಯ ಮರಾಠ ಸಮುದಾಯದವರಿಗೆ ಪಕ್ಷಾತೀತವಾಗಿ ಹರ್ಷವುಂಟಾಗಿದೆ ಎಂದು ತಿಳಿಸಿದ್ದಾರೆ.
ಕೆನರಾ ಲೋಕಸಭೆಗೆ ಕಾಂಗ್ರೆಸ್ನಿಂದ ಮರಾಠಾ ಸಮುದಾಯದ ಡಾ|| ಅಂಜಲಿ ಲಿಂಬಾಳ್ಕರರವರಿಗೆ ಟಿಕೆಟ್ ನೀಡುತ್ತಿರುವುದು ಜಿಲ್ಲೆಯ ಮರಾಠಿಗರಿಗೆ ಹರ್ಷವುಂಟಾಗಿದೆ.– ಪಾಂಡುರಂಗ ಪಾಟೀಲ್