ಹೊನ್ನಾವರ : ಮಾರ್ಚ 16 ರಿಂದ 20 ರವರೆಗೆ ಐದು ದಿನಗಳ ಕಾಲ ನಡೆಯುವ ಕೆರೆಮನೆ ಶಂಭು ಹೆಗಡೆ ‘ರಾಷ್ಟ್ರೀಯ ನಾಟ್ಯೋತ್ಸವ-14’ ಕಾರ್ಯಕ್ರಮ ಮಾ.16, ಶನಿವಾರ ಸಂಜೆ 4.30 ಕ್ಕೆ ಉದ್ಟಾಟನೆಗೊಳ್ಳಲಿದೆ.
ಕಾರ್ಯಕ್ರಮವನ್ನು ಮೀನುಗಾರಿಕೆ ಹಾಗೂ ಬಂದರು ಸಚಿವ ಹಾಗೂ ಉಸ್ತುವಾರಿ ಸಚಿವ ಮಂಕಾಳು ಎಸ್. ವೈದ್ಯ ಉದ್ಘಾಟಿಸಲಿದ್ದಾರೆ ಎಂದು ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ ನಿರ್ದೇಶಕ ಶಿವಾನಂದ ಹೆಗಡೆ ತಿಳಿಸಿದರು.
ಅವರು ಹೊನ್ನಾವರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾರ್ಚ 16ರಂದು ಚಲನಚಿತ್ರ ಹಾಗೂ ರಂಗಭೂಮಿ ಹಿರಿಯ ಕಲಾವಿದ ಶತಾವಧಾನಿ ಡಾ. ಆರ್ ಗಣೇಶ, ಬೆಂಗಳೂರು ಅವರಿಗೆ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ -2022 ಪ್ರದಾನ ಮಾಡಲಾಗುತ್ತಿದೆ. ಅರ್ಥಧಾರಿ ಕಲಾಚಿಂತಕ ದಿವಾಕರ ಹೆಗಡೆ ಕೆರೆಹೊಂಡ ಅಭಿನಂದನೆ ಸಲ್ಲಿಸಲಿದ್ದಾರೆ. ಕರ್ನಾಟಕ ವಿಧಾನ ಪರಷತ್ತಿನ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಉತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ,ಪೋಕ್ ಲ್ಯಾಂಡ್, ಕೇರಳ ಅಧ್ಯಕ್ಷ ಡಾ. ಜಯರಾಜನ್, ಉದ್ಯಮಿ ಉಪೇಂದ್ರ ಪೈ ಸಿರಸಿ, ಯಕ್ಷಗಾನ ಡಾ. ಸಂಜಯ ಎಚ್, ಆರ್ ಮೈಸೂರು ಇವರು ಆಗಮಿಸಲಿದ್ದಾರೆ. ಸಂಜೆ 6.30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಸುಕನ್ಯಾ ರಾಮ್ ಗೋಪಾಲ ತಂಡ ಇವರಿಂದ ಸ್ತ್ರೀ ತಾಳ ಘಟ ತರಂಗ ನಡೆಯಲಿದೆ. ಪೋಕ್ಲ್ಯಾಂಡ್ ಕೇರಳ ಇವರಿಂದ ನಟನಂ ಮತ್ತು ಮೋಹಿನಿ ಆಟ್ಟಂ ನೃತ್ಯ, ಲಿಂಗಯ್ಯ ಮತ್ತು ತಂಡ ಬೆಂಗಳೂರು ಇವರಿಂದ ಬೀಸು ಕಂಸಾಳೆ ಪ್ರಸ್ತುತಿಗೊಳ್ಳಲಿದೆ.
ಮಾರ್ಚ 17 ರಂದು 2ನೇ ದಿನದ ಉತ್ಸವದಲ್ಲಿ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಯನ್ನು ಹಿರಿಯ ಯಕ್ಷ ಕಲಾವಿದ ಎಮ್.ಎಲ್. ಸಾಮಗ ಮಲ್ಪೆ ಇವರಿಗೆ ನೀಡಿ ಗೌರವಿಸಲಾಗುತ್ತಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಮರ್ಶಕ ಡಾ. ಎಮ್ ಪ್ರಭಾಕರ ಜೋಶಿ ವಹಿಸಲಿದ್ದಾರೆ.
ಅದೇ ದಿನ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸನ್ಮಾನವನ್ನು ಹಿರಿಯ ಯಕ್ಷ ಕಲಾವಿದ ಐರೋಡಿ ಗೋವಿಂದಪ್ಪ, ಹಿರಿಯ ಪ್ರಸಂಗ ಕರ್ತ ಕಂದಾವರ ರಘುರಾಮ ಶೆಟ್ಟಿ, ಹಾಗೂ ಶಿಕ್ಷಣ ತಜ್ಜ ಡಾ. ಚಂದ್ರಶೇಖರ ದಾಮ್ಲೆ ಇವರಿಗೆ ನೀಡಿ ಗೌರವಿಸಲಾಗುತ್ತದೆ. ಮಾರ್ಚ್ 18 ರಂದು 3 ನೇ ದಿನ ಮುಂಜಾನೆ 11 ಗಂಟೆಗೆ ‘ಅನ್ಯಾಳ ಡೈರಿ’ ಎಂಬ ನಾಟಕವು ಕಿನ್ನರ ಮೇಳ ಇವರಿಂದ ಪ್ರದರ್ಶನಗೊಳ್ಳಲಿದೆ. ಅಂದಿನ ಸಭೆಯ ಅಧ್ಯಕ್ಷತೆಯನ್ನು ಬೆಂಗಳೂರು ಉತ್ತರ ವಿ.ವಿ ಉಪ ಕುಲಪತಿ ಡಾ. ನಿರಂಜನ ವಾನಳ್ಳಿ ವಹಿಸಲಿದ್ದಾರೆ. ಅಂದು ನಡೆಯುವ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸನ್ಮಾನವನ್ನು ಡಾ. ರಾಮಕೃಷ್ಣ ಗುಂದಿ, ಪ್ರೋ. ಕೆ.ಈ.ರಾಧಾಕೃಷ್ಣ, ಡಾ. ಗಜಾನನ ಶರ್ಮಾ ಇವರಿಗೆ ನೀಡಿ ಗೌರವಿಸಲಾಗುತ್ತದೆ.
ಮಾರ್ಚ 19ರಂದು ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ ಜಿಲ್ಲಾ ಅಧ್ಯಕ್ಷ ಬಿ.ಎನ್. ವಾಸರೆ ವಹಿಸಲಿದ್ದಾರೆ. ಅಂದು ನಡೆಯುವ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸನ್ಮಾನವನ್ನು ವಿಜಯ ಪಾತ್ರಪೇಕರ್, ಸೂರಾಲು ವೆಂಕಟರಮಣ ಭಟ್ಟ, ಶಿವಾನಂದ ಕಳವೆ ಇವರಿಗೆ ನೀಡಿ ಗೌರವಿಸಲಾಗುತ್ತದೆ.
ಮಾ.20ರಂದು ಉತ್ಸವದ ಕೊನೆಯ ದಿನ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಎಸ್ ಭಟ್ಟ ಮೈಸೂರು ವಹಿಸಲಿದ್ದಾರೆ. ಅಂದು ನಡೆಯುವ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸನ್ಮಾನವನ್ನು ಸಾಗರದ ಶುಂಠಿ ಸತ್ಯನಾರಾಯಣ ಭಟ್ಟ, ಡಾ.ಮೋಹನ ಕುಂಟಾರ್, ನಾರಾಯಣ ಚಂಬಲ್ತಿಮಾರ ಇವರಿಗೆ ನೀಡಿ ಗೌರವಿಸಲಾಗುತ್ತದೆ.
ನಿತ್ಯವು ಸಾಯಂಕಾಲ ದೇಶದ ಉದ್ದಗಲದ ವಿವಿಧ ಪ್ರಸಿದ್ದ ಕಲಾ ತಂಡದಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ದೆಹಲಿಯವರೆಗೂ ನಾಟ್ಯೋತ್ಸವದ ಪರಿಮಳ ಪಸರಿಸಿದ್ದರಿಂದ ಅಲ್ಲಿಂದಲೂ ಕಲಾ ತಂಡಗಳ ಜೊತಗೆ ಸುಸಂಸ್ಕೃತ ಪ್ರೇಕ್ಷಕ ವರ್ಗ ಕಾರ್ಯಕ್ರಮಕ್ಕೆ ಆಗಮಿಸಲಿದೆ ಎಂದು ಅವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀಧರ ಹೆಗಡೆ, ಕೆ.ಜಿ ಹೆಗಡೆ ಹಾಗೂ ಲಂಬೋದರ ಹೆಗಡೆ, ರಾಜೇಶ್ವರಿ ಹೆಗಡೆ ಉಪಸ್ಥಿತರಿದ್ದರು.