ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆ ಹಾಗೂ ಡಯಟ್ ಕುಮಟಾ ಇವರ ಸಹಯೋಗದಲ್ಲಿ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು (EXPO -2024) ಏರ್ಪಡಿಸಲಾಗಿತ್ತು. ಇದನ್ನು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕರಾದ ಈಶ್ವರ ಖಂಡು (ಐ.ಎ.ಎಸ್) ಅವರು ದೀಪ ಬೆಳಗಿಸಿ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲೇ ಮುಖ್ಯವಾದ ಜೀವನದ ಗುರಿಯನ್ನು ಇಟ್ಟುಕೊಂಡು ಅದಕ್ಕೆ ಸತತ ಪರಿಶ್ರಮ ಪಟ್ಟರೆ ಫಲ ಸಿಗುತ್ತದೆ. ಗುರಿ ಹಾಗೂ ಯೋಜನೆಗಳು ಉತ್ತಮ ಭವಿಷ್ಯ ರೂಪಿಸುತ್ತದೆ ಎಂದು ನುಡಿದರು. ಉತ್ತಮ ಹವ್ಯಾಸವನ್ನು ಬೆಳೆಸಿಕೊಂಡಾಗ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ವಿಶ್ಲೇಷಿಸಿ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಯನ್ನು ಶ್ಲಾಘಿಸಿದರು. ಇನ್ನೋರ್ವ ಅತಿಥಿಗಳಾದ ನಿವೃತ್ತ ಪ್ರಾಚಾರ್ಯ ಎಸ್. ವಿ. ನಾಯಕ ಮಾತನಾಡಿ ವಿಜ್ಞಾನ ಕೇವಲ ವಿಜ್ಞಾನ ಅಲ್ಲ ಅದೊಂದು ಕಲೆ. ಅದನ್ನು ನಾವು ಹೇಗೆ ಉಪಯೋಗಿಸುತ್ತೇವೊ ಅದು ಹಾಗೆ ನಮಗೆ ಪರಿಣಾಮವನ್ನುಂಟು ಮಾಡುತ್ತದೆ ಎಂದು ವಿವರಿಸಿ, ಸರ್. ಸಿ.ವಿ.ರಾಮನ್‌ರ ಬೆಳಕಿನ ಚದುರುವಿಕೆ ಕುರಿತು ಆಳವಾಗಿ ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ವಿಜ್ಞಾನದ ಮಾದರಿ ಪ್ರದರ್ಶನ ಮಾಡಿದ ವಿದ್ಯಾರ್ಥಿಗಳ ಪಾಲಕರನ್ನು ಸನ್ಮಾನಿಸಲಾಯಿತು. ಅದೇರೀತಿ ವಿದ್ಯಾರ್ಥಿಗಳಾದ ಕುಮಾರ ರಚನ್ ಎಸ್. ನಾಯ್ಕ, ಕುಮಾರಿ ಕೃತಿಕಾ ಗಾಂವಕರ ಅಲ್ಲದೇ ಕುಮಾರ ರಾಹುಲ್ ಎಮ್. ಭಟ್ಟ ಹಾಗೂ ಕುಮಾರಿ ಸಿಂಚನಾ ಜಿ. ಭಟ್ಟ ಇವರನ್ನು ಪ್ರೋತ್ಸಾಹಿಸಲಾಯಿತು. ವೇದಿಕೆಯಲ್ಲಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಭಟ್ಟ, ಕುಮಟಾ ಡಯಟ್ನ ಹಿರಿಯ ಉಪಾನ್ಯಾಸಕರಾದ ಶಾಂತೇಶ ನಾಯಕ, ಪ್ರೇಮಾನಂದ ದೇಶಭಂಡಾರಿ, ಶ್ರೀಮತಿ ಮಾದೇವಿ ಹೆಗಡೆ, ಶ್ರೀಮತಿ ರೇಖಾ ನಾಯಕ ಬ್ಲಾಕ್ ಸಮನ್ವಯಾಧಿಕಾರಿ, ಜಿಲ್ಲಾ ದೈಹಿಕ ಪರಿವೀಕ್ಷಕ ಎಸ್. ಬಿ. ನಾಯಕ್, ಶ್ರೀಮತಿ ತ್ರಿವೇಣಿ ನಾಯಕ ಹಾಗೂ ಸಂಸ್ಥೆಯ ಅಧ್ಯಕ್ಷರಾದ ವಿಠ್ಠಲ್ ಆರ್ ನಾಯಕ್, ಗೌರವಾನ್ವಿತ ಕಾರ್ಯದರ್ಶಿಗಳಾದ ಮುರಳಿಧರ ಪ್ರಭು, ಶೈಕ್ಷಣಿಕ ಸಲಹೆಗಾರರಾದ ಆರ್. ಎಚ್. ದೇಶಭಂಡಾರಿ, ಮುಖ್ಯಾಧ್ಯಾಪಕರಾದ ಶ್ರೀಮತಿ ಸುಮಾ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕರಾದ ಶಿವಾನಂದ ಭಟ್ಟ ಸ್ವಾಗತಿಸಿ, ಪರಿಚಯಿಸಿದರು. ಆದರ್ಶ ರೇವಣಕರ ಹಾಗೂ ಶ್ರೀಮತಿ ವಿನಯಾ ನಾಯಕ ನಿರೂಪಿಸಿದರೆ, ಶ್ರೀಮತಿ ಅನಿತಾ ಪಟಗಾರ ವಂದಿಸಿದರು. ವಿಜ್ಞಾನ ದಿನಾಚರಣೆಯ ಕುರಿತು ಶ್ರೀಮತಿ ಅಮಿತಾ ಗೋವೆಕರ ವಿವರಿಸಿದರು. ಕುಮಾರಿ ಸೃಜನಾ ಸಂಗಡಿಗರು ಪ್ರಾರ್ಥಿಸಿದರು.