Slide
Slide
Slide
previous arrow
next arrow

ಮಾ.1ರಿಂದ ಶಿರಡಿ ಸಾಯಿಬಾಬಾ ಮಂದಿರದ 18ನೇ ವಾರ್ಷಿಕೋತ್ಸವ

300x250 AD

ದಾಂಡೇಲಿ : ಬಸವೇಶ್ವರ ನಗರದಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದ 18ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಮಾರ್ಚ್ 1 ರಿಂದ ಮಾರ್ಚ್ 3ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಎನ್.ಎಂ.ಪಾಟೀಲ್ ಹೇಳಿದರು.

ಅವರು ಬುಧವಾರ ರಾತ್ರಿ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮದ ಕುರಿತಂತೆ ಮಾಧ್ಯಮಕ್ಕೆ ಮಾಹಿತಿಯನ್ನು ನೀಡಿ ಮಾತನಾಡುತ್ತಿದ್ದರು.

ಮಾರ್ಚ್ 1ರಂದು ಸಂಜೆ ನಾಲ್ಕು ಗಂಟೆಯಿಂದ ಶ್ರೀ ಶಿರಡಿ ಸಾಯಿಬಾಬಾರವರ ಶೋಭಾ ಯಾತ್ರೆ ಕಾರ್ಯಕ್ರಮ, ಪಲ್ಲಕ್ಕಿ ಮೆರವಣಿಗೆ ಹಾಗೂ ಧಾರ್ಮಿಕ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ.

ಮಾರ್ಚ್ 2ರಂದು ವಿವಿಧ ಪೂಜಾರಾಧನೆಗಳೊಂದಿಗೆ ಶ್ರೀ ಸತ್ಯನಾರಾಯಣ ಪೂಜೆ ತದನಂತರ ಲೋಕಕಲ್ಯಾಣಾರ್ಥವಾಗಿ ಪುರುಷ ಸೂಕ್ತ ಹವನ ಹಾಗೂ ಪೂರ್ಣಾಹುತಿ ಮತ್ತು ಮಂಗಳಾರತಿ ನಡೆದ ಬಳಿಕ ಅಂದು ಮಧ್ಯಾಹ್ನ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.

300x250 AD

ಮಾರ್ಚ್ 3ರಂದು ಸಂಜೆ 7 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ಸೀಮಾ ಸಾರಡಾ ಅವರನ್ನು ಸನ್ಮಾನಿಸಲಾಗುತ್ತದೆ. ಮೂರು ದಿನಗಳವರೆಗೆ ನಡೆಯುವ ಪೂಜಾ ಕಾರ್ಯಕ್ರಮ ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅತಿಥಿ, ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ.ಸಾಯಿ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಎನ್.ಎಂ.ಪಾಟೀಲ್ ಅವರು ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ.ಶಿರಡಿ ಸಾಯಿಬಾಬಾ ಮಂದಿರದ ಆಡಳಿತ ಸಮಿತಿಯ ಪ್ರಮುಖರಾದ ಆರ್.ಆರ್.ನಾಯ್ಕ, ದತ್ತಾ ಬಾವಿಕಟ್ಟಿ, ಮನೋಹರ್ ಶೇಟ್, ಬಸವರಾಜ ಅವರಿ, ಕೆ.ಆರ್.ಶಿಂದೆ,‌ ನಾಗಭೂಷಣ, ಮಂಗಲಾ ಕುಲಕರ್ಣಿ, ರತ್ನ ಕಲಕೊಂಡ, ಶಕುಂತಲಾ ಜಾಧವ್, ಪ್ರಕಾಶ್ ಮೆಹ್ತಾ, ಸಮೀರ್ ತೂಪಜಿಚೆ, ತುಕರಾಮ‌ ಬಿಂಗೆ, ಪರಮೇಶ್ವರ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top