Slide
Slide
Slide
previous arrow
next arrow

ಕೃಷಿ ಭೂಮಿ ಫಲವತ್ತತೆ ಕಾಪಾಡುವಲ್ಲಿ ಹೈನುಗಾರಿಕೆ ಪಾತ್ರ ಅತ್ಯಮೂಲ್ಯ: ಸುರೇಶ್ಚಂದ್ರ ಕೆಶಿನ್ಮನೆ

300x250 AD

ಶಿರಸಿ: ತಾಲೂಕಿನ ಒಕ್ಕಲಕೊಪ್ಪ ಹಾಗೂ ಕಪ್ಪರಮನೆ ಗ್ರಾಮಗಳಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಉದ್ಘಾಟನೆಯನ್ನು ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ದೀಪ ಬೆಳಗಿ,ಹಾಲು ಅಳೆಯುವುದರ ಮೂಲಕ ನೆರವೇರಿಸಿದರು.

ನಂತರ ಅವರು ಮಾತನಾಡಿ, ಒಕ್ಕಲಕೊಪ್ಪ ಹಾಗೂ ಕಪ್ಪರಮನೆ ಗ್ರಾಮಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘನ್ನು ಪ್ರಾರಂಭಿಸಬೇಕೆಂಬ ಈ ಭಾಗದ ಹಾಲು ಉತ್ಪಾದಕರ ರೈತರ ಬಹುದಿನಗಳ ಆಸೆಯಂತೆ ನಮಗೂ ಸ್ವತಂತ್ರ್ಯವಾಗಿ ಒಂದು ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪಿಸಿಕೊಡಬೇಕೆಂಬ ಇಚ್ಛೆಯೊಂದಿಗೆ ನಮಗೆ ಮನವಿ ಮಾಡಿದ್ದರು, ಈ ಭಾಗದ ಹಾಲು ಉತ್ಪಾದಕ ರೈತರ ಅಭಿಲಾಷೆಯಂತೆ,  ಹಾಗೂ ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಒಕ್ಕಲಕೊಪ್ಪ ಹಾಗೂ ಕಪ್ಪರಮನೆ ಗ್ರಾಮಗಳಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಪ್ರಾರಂಭಿಸಲಾಗಿದೆ ಎಂದರು. ನಾವು ಈ ಭಾಗದ ರೈತರನ್ನು ಸಹಕಾರ ವ್ಯವಸ್ಥೆಗೆ ತರಬೇಕು ಎಂಬ ಉದ್ದೇಶದಿಂದ ಎನ್.‌ಆರ್.‌ಎಲ್.‌ಎಂ. ಅಧಿಕಾರಿಗಳ ಸಹಯೋಗದೊಂದಿಗೆ ಒಕ್ಕಲಕೊಪ್ಪ ಹಾಗೂ ಕಪ್ಪರಮನೆ ಗ್ರಾಮಗಳ ಹಾಲು ಉತ್ಪಾದಕ ರೈತರ ಜೊತೆ ಸಭೆ ನಡೆಸಿ ಸರಕಾರ ಹಾಗೂ ಒಕ್ಕೂಟದ ಸೌಲಭ್ಯಗಳ ಕುರಿತಾಗಿ ಮಾಹಿತಿ ನೀಡಿ ಸಂಘ ಸ್ಥಾಪನೆಯಾಗಿ ಕಾರ್ಯಾರಂಭ ಮಾಡುವಂತೆ ಅನುವು ಮಾಡಿಕೊಡಲಾಗಿದೆ ಎಂದರು.

ಸಣ್ಣ, ಮಧ್ಯಮ ಹಿಡುವಳಿದಾರರು ಮತ್ತು ಅತಿಕ್ರಮಣದಾರರಗೆ ಹೈನುಗಾರಿಕೆ ಬದುಕಿನ ಒಂದು ಅವಿಭಾಜ್ಯ ಅಂಗವಾಗಿದೆ. ಮನೆಯ ಒಬ್ಬ ಹೆಣ್ಣು ಮಗಳು ಎರಡು ಹಸುಗಳನ್ನು ಸಾಕಿ ನಿರ್ವಹಣೆ ಮಾಡಿದರೆ ಬಹುಮುಖಿಯಾಗಿ ಹೈನುಗಾರಿಕೆಯಿಂದ ಲಾಭವನ್ನು ಮಾಡಬಹುದಾಗಿದೆ. ಒಂದು ಕುಟುಂಬವನ್ನು ನಡೆಸುವ ಆರ್ಥಿಕ ಸಾಮರ್ಥ್ಯವನ್ನು ಹೈನುಗಾರಿಕೆಯಿಂದ ಪಡೆದುಕೊಳ್ಳಲು ಸಾಧ್ಯವಾಗಿದೆ. ಹಸುವಿನ ಸಗಣಿಯಿಂದ ತಯಾರಿಸಲ್ಪಟ್ಟ ಗೊಬ್ಬರ ನಮ್ಮ ಕೃಷಿ ಭೂಮಿಯ ಫಲವತ್ತತೆಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ರಸಗೊಬ್ಬರಗಳಿಂದ ನಮ್ಮ ಕೃಷಿ ಭೂಮಿಗೆ ಆಗುತ್ತಿರುವ ಅನಾಹುತಗಳಿಂದ ಬೇಸತ್ತು, ಹಸುವಿನ ಸಗಣಿಯಿಂದ ತಯಾರಿಸಲ್ಪಟ್ಟ ಕೊಟ್ಟಿಗೆ ಗೊಬ್ಬರದ ಮೊರೆ ಹೋಗುತ್ತಿದ್ದಾರೆ. ಸಣ್ಣ, ಮಧ್ಯಮ ಮತ್ತು ದೊಡ್ಡ ಹಿಡುವಳಿದಾರರು ತಮ್ಮ ಅಡಿಕೆ ತೋಟ, ಗದ್ದೆ ಹಾಗೂ ಇನ್ನಿತರ ಕೃಷಿ ಭೂಮಿಗಳಿಗೆ ಕೊಟ್ಟಿಗೆ ಗೊಬ್ಬರವನ್ನೇ ಹೆಚ್ಚಾಗಿ ಉಪಯೋಗಿಸುತ್ತಿದ್ದು, ಇದರಿಂದ ಕೊಟ್ಟಿಗೆ ಗೊಬ್ಬರಕ್ಕೆ ಅಧಿಕ ಬೇಡಿಕೆ ಹಾಗೂ ಉತ್ತಮ ಬೆಲೆ ಕೂಡ ಬಂದತಾಂಗಿದೆ. 

ಹೈಗಾರಿಕೆಯ ಮೂಲಕ ಉತ್ಪತ್ತಿಯಾಗುವ ಸಗಣಿಯ ಮೂಲಕ ಒಂದು ಕುಟುಂಬಕ್ಕೆ ಉಪಯೋಗವಾಗುವ ಗೊಬ್ಬರ ಗ್ಯಾಸ್‌ನ್ನು ಸಹ ಹೈಗಾರಿಕೆ ನಡೆಸುವಂತಹ ಕುಟುಂಬಗಳು ತಯಾರಿಸಿಕೊಳ್ಳಬಹುದಾಗಿದೆ. ಕೇವಲ ಹಾಲಿನ ಉತ್ಪಾದನೆಯಿಂದ ಬರುವ ಹಣವನ್ನು ಪರಿಗಣಿಸದೇ, ನಮ್ಮ ಕೃಷಿ ಭೂಮಿಯ ಫಲವತ್ತತೆ, ಧಾರ್ಮಿಕ ಆಚರಣೆಗಳಿಗೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸಮತೋಲನದಲ್ಲಿಟ್ಟುಕೊಂಡು ಕಾಪಾಡಿಕೊಳ್ಳಲು ಹೈನುಗಾರಿಕೆಯನ್ನು ನಾವು ಮಾಡಿದರೆ ಲಾಭದಾಯಕವಾಗಿಯೂ ಮತ್ತು ಒಂದು ಕುಟುಂಬಕ್ಕೆ ಆರ್ಥಿಕವಾಗಿ ಅನುಕೂಲವೂ ಸಹ ಆಗುತ್ತದೆ ಎಂದರು.

300x250 AD

ನಮ್ಮ ಜಿಲ್ಲೆಯಲ್ಲಿ ಸಹಕಾರ ವ್ಯವಸ್ಥೆಯ ಅಡಿಯಲ್ಲಿ ಹಾಲು ಉತ್ಪಾದನಾ ಕ್ಷೇತ್ರ ಬೆಳೆಯುತ್ತಿರುವುದರಿಂದ ತಾವೆಲ್ಲರೂ ಇದರ ಜೊತೆ ಕೈ ಜೋಡಿಸಬೇಕು. ಒಂದು ಸಂಘ ಯಶಸ್ವಿಯಾಗಿ ಕಾರ್ಯಾಚರಣೆ ಮಾಡುವಂತಾಗಲು ಕನಿಷ್ಠ ದಿನಕ್ಕೆ 100 ಲೀಟರ್ ಹಾಲು ಶೇಖರಣೆ ಮಾಡುವುದು ಅತ್ಯಾವಶ್ಯಕವಾಗಿದ್ದು, ಇದರಿಂದ ಸಂಘದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ವೇತನ ನೀಡಲು, ಸಂಘದ ಇತರೆ ಖರ್ಚುಗಳನ್ನು ಭರಿಸಲು ಹಾಗೂ ಸಂಘವು ಲಾಭ ಗಳಿಸಿ ಉತ್ಪಾದಕರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ತಾವೇಲ್ಲರೂ ಕನಿಷ್ಠ ದಿನಕ್ಕೆ 100 ಲೀಟರ್ ಹಾಲು ಪೂರೈಸಬೇಕೆಂಬ ಗುರಿಯನ್ನೊಂದಿಗೆ ಅತೀ ಹೆಚ್ಚು ಹಾಲು ಉತ್ಪಾದನೆ ಮಾಡುವ ಜೊತೆಯಲ್ಲಿ ಮುಖ್ಯವಾಗಿ ಉತ್ತಮ ಗುಣಮಟ್ಟದ ಹಾಲನ್ನು ಉತ್ಪಾದಿಸುವಲ್ಲಿ ಹೆಚ್ಚಿನ ಗಮನ ನೀಡಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಮಗ್ರ ಅಭಿವೃದ್ಧಿಗೆ ಕಾರಣೀಕರ್ತರಾಗಬೇಕು ನಿಮ್ಮ ಹಾಲು ಸಂಘಕ್ಕೆ ಹಾಗೂ ಸಂಘದ ಹಾಲು ಉತ್ಪಾದಕ ರೈತರಿಗೆ ಧಾರವಾಡ ಸಹಕಾರ ಹಾಲು ಒಕ್ಕೂಟ ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕನಾಗಿ ಜವಾಬ್ದಾರಿ ಹೊತ್ತಿರುವ ನಾನು ಧಾರವಾಡ ಸಹಕಾರ ಹಾಲು ಒಕ್ಕೂಟ ಹಾಗೂ ನೌಕರರ ಕಲ್ಯಾಣ ಸಂಘ ಮತ್ತು ಕೆ.ಡಿ.ಸಿ.ಸಿ. ಬ್ಯಾಂಕಿನ ಮೂಲಕ ತಮಗೆ ಸಿಗಬಹುದಾದ ಸಾಲ ಸೌಲಭ್ಯಗಳನ್ನು ಹಾಗೂ ಇನ್ನಿತರ ಸೌಕರ್ಯಗಳನ್ನು ಕೊಡಿಸುವ ಜವಾಬ್ದಾರಿ ನನ್ನದು, ಅತೀ ಹೆಚ್ಚು ಹಾಲು ಉತ್ಪಾದನೆ ಮಾಡಿ ಸಂಘವನ್ನು ಸದೃಢಗೊಳಿಸುವ ಜವಾಬ್ದಾರಿ ನಿಮ್ಮದು ಎಂಬುದನ್ನು ತಿಳಿಸಿ, ಶುಭಕೋರಿದರು.

ಈ ಸಂದರ್ಭದಲ್ಲಿ ಧಾರವಾಡ ಸಹಕಾರ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್‌., ರಾಜ್ಯ ಸರಕಾರ, ಧಾರವಾಡ ಸಹಕಾರ ಹಾಲು ಒಕ್ಕೂಟ ಮತ್ತು ನೌಕರರ ಕಲ್ಯಾಣ ಸಂಘದಿಂದ ಸೌಲಭ್ಯಗಳ ಕುರಿತು ಹಾಲು ಉತ್ಪಾಕರಿಗೆ ಮಾಹಿತಿ ನೀಡಿದರು. ಸಹಾಯಕ ವ್ಯವಸ್ಥಾಪಕರಾದ ಡಾ. ವಿವೇಕ್‌ ಎಸ್.‌ಆರ್‌, ವಿಸ್ತರಣಾಧಿಕಾರಿ ಮೌನೇಶ ಎಂ ಸೋನಾರ, ವಿಸ್ತರಣಾ ಸಮಾಲೋಚಕರಾದ ಜಯಂತ ಪಟಗಾರ ಅಭಿಷೇಕ ನಾಯ್ಕ, ಎನ್.‌ಆರ್.‌ಎಲ್.‌ಎಂ.ನ ಎಂ.ಬಿ.ಕೆ. ಪೂರ್ಣಿಮಾ ನಾಯ್ಕ, ಒಕ್ಕಲಕೊಪ್ಪ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಮತಿ ಪ್ರೇಮಾ ವಿ ಗೌಡ, ಕಾರ್ಯದರ್ಶಿಯವರಾದ ಶ್ರೀಮತಿ ರೇಖಾ ಕೃಷ್ಣ ಗೌಡ, ಊರ ಹಿರಿಯ ನಾಗರೀಕರಾದ ಕೆರಿಯಾ ಗೌಡ, ಕಪ್ಪರಮನೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಮತಿ ಲಲಿತಾ ಮಧುಕೇಶ್ವರ ಗೌಡ, ಕಾರ್ಯದರ್ಶಿಯವರಾದ ಶ್ರೀಮತಿ ಸುವರ್ಣಾ ಗೌಡ, ಕಡಬಾಳ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀಮತಿ ಗೀತಾ ಹೆಗಡೆ,ಕಾರ್ಯದರ್ಶಿ ಶ್ರೀಮತಿ ಅನಸೂಯಾ ಹೆಗಡೆ, ಮೇಲಿನ ಓಣಿಕೇರಿ ಗ್ರಾಮ ಪಂಚಾಯತ್‌ ಸದಾಸ್ಯರಾದ ಮಹಾಬಲೇಶ್ವರ ಹೆಗಡೆ, ಒಕ್ಕಲಕೊಪ್ಪ ಮತ್ತು ಕಪ್ಪರಮನೆ ಸಂಘಗಳ ಆಡಳಿತ ಮಂಡಳಿ ಸದಸ್ಯರು, ಹಾಲು ಉತ್ಪಾದಕರು ಹಾಗೂ ಊರ ನಾಗರೀಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top