ದಾಂಡೇಲಿ : ಭಾರತೀಯ ಜನತಾ ಪಕ್ಷದ ಮಹಿಳಾ ಮೊರ್ಚಾದ ವತಿಯಿಂದ 14ನೇ ಬ್ಲಾಕ್ ಪ್ರದೇಶ ವ್ಯಾಪ್ತಿಯ ಆಜಾದ್ ನಗರ ನಿವಾಸಿಯಾದ ವತ್ಸಲಾ ಪೂಜಾರಿ ಅವರಿಗೆ ಆಹಾರ ಕಿಟ್ ಮತ್ತು ಧನ ಸಹಾಯವನ್ನು ಮಾಡಲಾಯಿತು.
ವತ್ಸಲಾ ಪೂಜಾರಿ ಇವರು ವೃದ್ಧೆಯಾಗಿದ್ದು, ದುಡಿಮೆ ಮಾಡಲು ಕಷ್ಟ ಸಾಧ್ಯವಾಗಿದೆ ಮತ್ತು ಇವರ ಸಹೋದರ ಇವರ ಜೊತೆಯಲ್ಲಿ ಇದ್ದರೂ ಅವರು ಕೂಡ ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ. ತೀವ್ರ ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ಬಿಜೆಪಿ ಮಹಿಳಾ ಘಟಕದ ವತಿಯಿಂದ ಸಹಾಯ ಹಸ್ತವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೂರ್ಛೆದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ ಶಿಕಾರಿಪುರ, ಬಿಜೆಪಿ ಮಹಿಳಾ ಪ್ರಮುಖರಾದ ಶಾರದಾ ಪರಶುರಾಮ, ದೇವಕ್ಕ ಕೆರೆಮನೆ ಹಾಗೂ ಪಕ್ಷದ ಮಹಿಳಾ ಪ್ರಮುಖರು ಉಪಸ್ಥಿತರಿದ್ದರು.