ಹೊನ್ನಾವರ : ಅಳ್ಳಂಕಿಯ ಶ್ರೀವರಸಿದ್ಧಿ ಗಣಪತಿ ದೇವರ ವರ್ಷಾವಧಿ ತಾಂತ್ರಿಕವರ್ಧಂತಿ ಮಹೊತ್ಸವ ಕಾರ್ಯಕ್ರಮವು ಫೆಬ್ರವರಿ 24 ಶನಿವಾರದಂದು ನಡೆಯಲಿದೆ.
ಅಂದು ಬೆಳಿಗ್ಗೆ 8 ಘಂಟೆಯಿಂದ ಸಂಜೆ 8.30 ಘಂಟೆಯವರೆಗೆ ತಾಂತ್ರಿಕರಾದ ಶಂಕರ ಪರಮೇಶ್ವರ ಭಟ್ಟ ಕಟ್ಟೆ ಆಚಾರ್ಯತ್ವದಲ್ಲಿ ನಡೆಯಲಿದೆ.ಅಂದು ಬೆಳಿಗ್ಗೆ ದೇವತಾ ಪ್ರಾರ್ಥನೆ ಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡು ವಿಶೇಷ ವಿನಾಯಕ ಶಾಂತಿ, ಸಾಮೂಹಿಕ ಸತ್ಯನಾರಾಯಣ ವೃತ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ರಂಗಪೂಜೆ, ಸಂಜೆ 8.30 ಘಂಟೆಯಿಂದ ಶ್ರೀ ವರಸಿದ್ಧಿ ಸಾಂಸ್ಕೃತಿಕ ಯುವ ವೇದಿಕೆಯ ಆಶ್ರಯದಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಶ್ರೀ ಮುರ್ಕುಂಡೇಶ್ವರ ನವ ತರುಣ ನಾಟ್ಯಮಂಡಳಿ ದುಬನ್ ಶೆಸಿ – ಗೋಕರ್ಣ ಇದರ ಕಲಾವಿದರುಗಳಿಂದ ‘ಕಳಚಿದ ಕುಂಡಲ’ ಎಂಬ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ. ಅಂದಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿ, ಮುಡಿಗಂಧ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕೇಂದು ಶ್ರೀ ಕ್ಷೇತ್ರದ ದೇವಸ್ಥಾನ ಸಮಿತಿ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ವಿನಂತಿಸಿದ್ದಾರೆ.