Slide
Slide
Slide
previous arrow
next arrow

ಬಿಜೆಪಿ ಮಂಡಲ ಅಧ್ಯಕ್ಷರ ಆಯ್ಕೆ ವಿರೋಧಿಸಿ ಪದಾಧಿಕಾರಿಗಳ ರಾಜೀನಾಮೆ

300x250 AD

ಸಿದ್ದಾಪುರ: ಇಲ್ಲಿನ ಮಂಡಲ ಅಧ್ಯಕ್ಷರನ್ನಾಗಿ ತಿಮ್ಮಪ್ಪ ಮಡಿವಾಳ ಹಿತ್ತಲಕೊಪ್ಪ ಇವರನ್ನು ಆಯ್ಕೆ ಮಾಡಿದ್ದು ಇದರಿಂದ ಪಕ್ಷದ ಹಿರಿಯ ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಎಂದು ಇತ್ತೀಚಿಗೆ ಬಿಜೆಪಿ ಜಿಲ್ಲಾ ವಿಶೇಷ ಆಹ್ವಾನಿತರಾಗಿ ಆಯ್ಕೆಯಾದ ನಾಗರಾಜ ನಾಯ್ಕ ಬೇಡ್ಕಣಿ ಹಾಗೂ ಕೃಷ್ಣಮೂರ್ತಿ ಮಡಿವಾಳ ಕಡ ಕೇರಿ ಮತ್ತು ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಎಸ್.ಕೆ.ಮೇಸ್ತ ಇವರುಗಳು ತಮಗೆ ನೀಡಿದ ಹುದ್ದೆಗಳಿಗೆ ರಾಜೀನಾಮೆ ಪತ್ರವನ್ನು ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಅವರಿಗೆ ನೀಡಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಪಕ್ಷದಲ್ಲಿ ನಾವುಗಳು ಹಲವಾರು ವರ್ಷಗಳಿಂದ ಕಾರ್ಯಕರ್ತರಾಗಿ ದುಡಿದು, ನಿಷ್ಠೆಯಿಂದ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಪಕ್ಷವನ್ನು ಸಂಘಟಿಸಿದ್ದು ಇದೀಗ ಜಿಲ್ಲಾಧ್ಯಕ್ಷರು, ತಿಮ್ಮಪ್ಪ ಮಡಿವಾಳ ಇವರನ್ನು ಮಂಡಲ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಇವರು ಈ ಹಿಂದೆ ಹಲವು ಪಕ್ಷಗಳನ್ನು ದಾಟಿ ಈಗ ಬಿಜೆಪಿ ಪಕ್ಷಕ್ಕೆ ಬಂದಿರುವವರಾಗಿರುತ್ತಾರೆ. ಮೊದಲು ಕಾಂಗ್ರೆಸ್ ಪಕ್ಷದವರಿಂದ ತಿರಸ್ಕೃತರಾಗಿ ಅಲ್ಲಿ ಅವರಿಗೆ ಆಶ್ರಯ ನೀಡಿದ ದಿ. ಷಣ್ಮುಖ ಗೌಡರ್ ಅವರಿಗೆ ದ್ರೋಹ ಮಾಡಿ ತದನಂತರ ಜೆಡಿಎಸ್ ಪಕ್ಷಕ್ಕೆ ಸೇರಿ 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಸೋಲಿಗೆ ಪ್ರಮುಖ ಕಾರಣರಾಗಿ ಅವರು ಹೋದಲೆಲ್ಲಾ ಸೋಲು ಎಂಬ ಮಾತಿದೆ. ಇಂಥವರನ್ನು ಮಂಡಲ ಅಧ್ಯಕ್ಷರನ್ನಾಗಿ ಮಾಡಿದರೆ ಸಂಘಟನೆ ತೀರ ದುಸ್ಥಿತಿಗೆ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ ಅವರು ಮಂಡಲ ಅಧ್ಯಕ್ಷರಾಗಿದ್ದ ಸಮಯದಲ್ಲಿ ಪಕ್ಷದ ಯಾವುದೇ ಜವಾಬ್ದಾರಿಯನ್ನು ನಿರ್ವಹಣೆ ಮಾಡಲು ಆಗುವುದಿಲ್ಲ ಆದ್ದರಿಂದ ತಾವು ನೇಮಕ ಮಾಡಿರುವ ನನ್ನ ಜವಾಬ್ದಾರಿಗೆ ರಾಜೀನಾಮೆಯನ್ನು ನೀಡಿರುತ್ತೇವೆ ಎಂದು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top