ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಸವಿತಾ ಮಹರ್ಷಿ ಅವರ ಭಾವಚಿತ್ರಕ್ಕೆ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ರಾಮಚಂದ್ರ ಕೆ.ಎಮ್., ಭೂ ದಾಖಲೆಗಳ ಸಹಾಯಕ ನಿರ್ದೇಶಕ ರಾಜು ಪೂಜಾರಿ, ಶಿಕ್ಷಕ ಡಾ.ಗಣೇಶ ಬಿಷ್ಠಣ್ಣನವರ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಅಸ್ನೋಟಿಯ ಶಿವಾಜಿ ವಿದ್ಯಾಮಂದಿರದ ಶಿಕ್ಷಕ ಡಾ. ಗಣೇಶ ಬಿಷ್ಠಣ್ಣನವರ ಉಪನ್ಯಾಸ ನೀಡಿ, ದೇಶ ಕಂಡ ಶ್ರೇಷ್ಠ ಮಹರ್ಷಿಗಳಲ್ಲಿ ಶ್ರೀ ಸವಿತಾ ಮಹರ್ಷಿ ಕೂಡ ಒಬ್ಬರು. ಶಿವನ ದಿವ್ಯ ದೃಷ್ಠಿಯಿಂದ ಜನ್ಮ ತಾಳಿದ ಅವರು, ಧನ್ವಂತರಿ ವಿದ್ಯೆ, ಸಂಗೀತ, ಕ್ಷೌರಿಕ ವೃತ್ತಿಯನ್ನು ವರವಾಗಿ ಪಡೆದವರು, ದೇಶವನ್ನಾಳಿದ ಅನೇಕ ರಾಜಮನೆತನಗಳು ಸವಿತಾ ಸಮಾಜಕ್ಕೆ ಸೇರಿದವರು ಎಂಬುದು ವಿಶೇಷ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.